ಪಲಕ್ಕಾಡ್ (ಕೇರಳ)​:ನಂಬರ್​ ಪ್ಲೇಟ್​ ಬದಲಾಗಿ “ಜಸ್ಟ್​ ಮ್ಯಾರೀಡ್​” ಬೋರ್ಡ್​ ಇರುವ ಐಷಾರಾಮಿ ಕಾರಿನ ಮೇಲೆ ಇದೀಗ ಮೋಟಾರು ವಾಹನ ಇಲಾಖೆಯ ಕಣ್ಣು ಬಿದ್ದಿದೆ. ಆನ್​ಲೈನ್​ನಲ್ಲಿ ಬಂದ ದೂರಿನ ಬಳಿಕ ಕಾರು ಎಲ್ಲರ ಗಮನವನ್ನು ತನ್ನತ್ತ ಸೆಳೆದಿದೆ.
ಕಾರಿನ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ದೂರಿನ ಪ್ರಕಾರ ದೃಶ್ಯವನ್ನು ಯಕ್ಕಾರಾ ವಲಯದಲ್ಲಿ ಸೆರೆಹಿಡಿಯಲಾಗಿದೆ. ವಧು-ವರ ಪ್ರಯಾಣಿಸಿರುವ ಕಾರಿನ ಹಿಂಭಾಗದ ವಿಂಡ್​ಶೀಲ್ಡ್​ ಮೇಲೆ ಫೋನ್​ ನಂಬರ್​ ಸಹ ಬರೆಯಲಾಗಿದೆ. ಆದರೆ, ಕಾರಿನ ಮಾಲೀಕ ಯಾರೆಂಬುದನ್ನು ಇನ್ನೂ ಪತ್ತೆಹಚ್ಚಿಲ್ಲ. ಅದರ ಕೆಲಸವೂ ಮುಂದುವರಿದಿದೆ.
ಇದನ್ನೂ ಓದಿರಿ:ಮಾವನ ಮೇಲೆ ಮುನಿಸು: ಪೊಲೀಸ್​ ಪತಿಗೆ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ!
ಇನ್ನು ಕೇರಳದ ಪಲಕ್ಕಾಡ್​ ಜಿಲ್ಲೆಯಲ್ಲಿ ಈ ರೀತಿಯ ಐಷಾರಾಮಿ ಕಾರು ತುಂಬಾ ವಿರಳವಾಗಿವೆ. ವಾಹನ ಸಂಬಂಧ ದಾಖಲೆಗಳನ್ನು ಕಲೆಹಾಕುವಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ತೀವ್ರ ಕುತೂಹಲ ಕೆರಳಿಸಿರುವ ಕಾರಿ ಮೇಲೆ ಇದೀಗ ಎಲ್ಲರ ಕಣ್ಣು ನೆಟ್ಟಿದೆ. ಕಾರು ಆ ಸ್ಥಳದಲ್ಲಿ ಯಾಕೆ ಬಂತು? ಯಾರದಿರಬಹುದು? ಎಂಬ ಪ್ರಶ್ನೆಗಳು ಉದ್ಭವಿಸಿದ್ದು, ತನಿಖೆ ನಡೆಯುತ್ತಿದೆ.
ಕೆಲವು ತಿಂಗಳ ಹಿಂದೆ ಇದೇ ಐಷಾರಾಮಿ ಕಾರೊಂದನ್ನು ಸೆರೆಹಿಡಿಯಲಾಗಿತ್ತು. ತೆರಿಗೆ ಪಾವತಿಸದ ಹಿನ್ನೆಲೆಯನ್ನು ಕಾರನ್ನು ವಶಕ್ಕೆ ಪಡೆದು, ಮಾಲೀಕನ ಬಳಿ ತೆರಿಗೆ ವಸೂಲಿ ಮಾಡಿದ್ದರು. ಅದೇ ಕಾರು ಇದಾಗಿರಬಹುದಾ ಎಂಬ ಸಂಶಯ ಇದೀಗ ಪೊಲೀಸರಿಗೆ ವ್ಯಕ್ತವಾಗಿದ್ದು, ತನಿಖೆ ಮುಂದುವರಿದಿದೆ. ಸದ್ಯ ಕೇರಳದಲ್ಲಿ ಜಸ್ಟ್​ ಮಾರೀಡ್​ ಕಾರು ಭಾರಿ ಸದ್ದು ಮಾಡುತ್ತಿದೆ.(ಏಜೆನ್ಸೀಸ್​)
ಬಟ್ಟೆ ಬಿಚ್ಚದೇ ಮುಟ್ಟಿದರೆ ಲೈಂಗಿಕ ದೌರ್ಜನ್ಯವಲ್ಲ ಎಂದಿದ್ದ ಹೈಕೋರ್ಟ್‌- ವಿವಾದದ ಬೆನ್ನಲ್ಲೇ ತಡೆ ನೀಡಿದ ಸುಪ್ರೀಂ

ಚೊಚ್ಚಲ ಹೆರಿಗೆಯಲ್ಲೇ ನಾಲ್ಕು ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ..!

ಪತಿಗೆ ಇಷ್ಟವಿಲ್ಲದಿದ್ದರೆ ತಂಗಿಯ ಮಗುವನ್ನು ನಾನೊಬ್ಬಳೇ ದತ್ತು ಪಡೆಯಬಹುದೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 − four =
Remember me
