ರಾಜಸ್ಥಾನ:ಭಾರತದಲ್ಲಿ ವರದಕ್ಷಿಣೆ ನೀಡುವುದು, ಪಡೆಯುವುದು ಎಲ್ಲವೂ ನಿಷಿದ್ಧ. ಆದರೂ ಅಲ್ಲೊಮ್ಮೆ ಇಲ್ಲೊಮ್ಮೆ ವರದಕ್ಷಿಣೆ ಸಂಬಂಧಿತ ಕಿರುಕುಳ ಪ್ರಕರಣಗಳು ಕೇಳಿ ಬರುತ್ತಲೇ ಇರುತ್ತವೆ. ವರದಕ್ಷಿಣೆ ನಿಷೇಧ ಕಾಯಿದೆ 1961ರ ಪ್ರಕಾರ, ಭಾರತದಲ್ಲಿ ವರದಕ್ಷಿಣೆ ಕೊಡುವುದು ಕಾನೂನು ಬಾಹಿರವಾಗಿದೆ. ಭಾರತೀಯ ದಂಡ ಸಂಹಿತೆ ಅನುಸಾರ, ವರದಕ್ಷಿಣೆ ಕೇಳಿ ಸಿಕ್ಕಿಬಿದ್ದರೆ ಕನಿಷ್ಠ 7 ವರ್ಷಗಳ ಜೈಲು ಶಿಕ್ಷೆ ಆಗುವ ಸಾಧ್ಯತೆ ಕೂಡ ಇದೆ.
ನಮ್ಮಲ್ಲಿ ಅನೇಕ ಕಠಿಣ ಕಾನೂನುಗಳಿದ್ದರೂ ವರದಕ್ಷಿಣೆ ನೀಡುವುದು ಪಡೆಯುವುದು ತೆರೆಮರೆಯಲ್ಲಿ ಎಗ್ಗಿಲ್ಲದೇ ಸಾಗುತ್ತಿದೆ.ಇಲ್ಲೊಂದು ವರದಕ್ಷಿಣೆ ಪ್ರಕರಣ ವರದಿಯಾಗಿದ್ದು ಎಲ್ಲೆಡೆ ಭಾರಿ ಪ್ರಚಾರ ಪಡೆದಿದೆ. ಈ ಪ್ರಕರಣ ಸದ್ದು ಮಾಡಲು ಕಾರಣ ಏನೆಂದರೆ ಈ ಸಹೋದರರು ನೀಡಿದ ವರದಕ್ಷಿಣೆಯ ಪ್ರಮಾಣ.
ರಾಜಸ್ಥಾನದ ನಾಗೌರ್ ಜಿಲ್ಲೆಯ ಥಿಂಗ್ಯಾರ ಗ್ರಾಮದಲ್ಲಿ ನಾಲ್ಕು ದುಂದಿ ಸಹೋದರರು ತಮ್ಮ ಸಹೋದರಿಯ ವಿವಾಹದಂದು 8 ಕೋಟಿ 31 ಲಕ್ಷ ರೂ.ಗಳ ವರದಕ್ಷಿಣೆ ಕೊಟ್ಟು ಸುದ್ದಿಯಾಗಿದ್ದಾರೆ. ಮಯ್ತಾ ಎಂದು ಕರೆಯಲಾಗುವ ಈ ಪದ್ಧತಿ ನಾಗೌ‌ ಜಿಲ್ಲೆಯಲ್ಲಿ ವಿಪರೀತವಾಗಿದೆ. ಆದರೆ ಈ ನಾಲ್ವರು ಸಹೋದರರು ಭಾರೀ ಪ್ರಮಾಣದ ವರದಕ್ಷಿಣೆ ನೀಡುವ ಮೂಲಕ ದೊಡ್ಡ ಸದ್ದು ಮಾಡಿದ್ದಾರೆ.
ಇದನ್ನೂ ಓದಿ:ವರದಕ್ಷಿಣೆಯಾಗಿ ಟ್ರ್ಯಾಕ್ಟರ್​ ಕೇಳಿದ ವರನಿಗೆ ಬಿಗ್​ ಶಾಕ್​ ಕೊಟ್ಟ ವಧು!
ಅರ್ಜುನ್ ರಾಮ್ ಮೆಹಾರಿಯಾ, ಭಗೀರತ್ ಮೆಹಾರಿಯಾ, ಉಮೇಯ್ದ ಜೀ ಮೆಹಾರಿಯಾ ಹಾಗೂ ಪ್ರಹ್ಲಾದ ಮಹಾರಿಯಾ ಮಾರ್ಚ್ 26ರಂದು ತಮ್ಮ ಸಹೋದರಿ ಭನ್ವಾರಿ ದೇವಿಯ ಮದುವೆಗೆ ಈ ಭಾರೀ ಮೊತ್ತದ ವರದಕ್ಷಿಣೆಯನ್ನು ನೀಡಿದ್ದಾರೆ.
ಸುದ್ದಿ ಸಂಸ್ಥೆಯೊಂದರ ವರದಿ ಪ್ರಕಾರ, ವರದಕ್ಷಿಣೆಯ ಭಾಗವಾಗಿ 2.21 ಕೋಟಿ ನಗದು, ನಾಲ್ಕು ಕೋಟಿ ರೂ. ಬೆಲೆ ಬಾಳುವ 20 ಎಕರೆ ಜಮೀನು, ಬೇರೊಂದು ಊರಿನಲ್ಲಿ 1 ಭಿಗಾ ಜಮೀನು, 71 ಲಕ್ಷ ರೂ.ನಷ್ಟು ಬೆಲೆ ಬಾಳುವ ಒಂದು ಕೆಜಿ ಚಿನ್ನ, 9.8 ಲಕ್ಷ ರೂ. ನಷ್ಟು ಮೌಲ್ಯದ ಬೆಳ್ಳಿಯನ್ನು ನೀಡಲಾಗಿದೆ. ಮಿಕ್ಕಂತೆ 800 ನಾಣ್ಯಗಳನ್ನು ಗ್ರಾಮಸ್ಥರೆಲ್ಲಾ ಹಂಚಿಕೊಂಡಿದ್ದಾರೆ. ಇದೇ ವೇಳೆ 7 ಲಕ್ಷ ರೂ. ಬೆಲೆಯ ಟ್ರಾಕ್ಟರ್, ಜತೆಗೊಂದು ಸ್ಕೂಟರ್​ಅನ್ನು ವರದಕ್ಷಿಣೆಯಾಗಿ ನೀಡಲಾಗಿದೆ. ಇದೇ ಸಂದರ್ಭದಲ್ಲಿ ವರನ ಕಡೆಯವರಿಗೆ ಕೆಲ ವಾಹನಗಳನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.
ಒಟ್ಟಿನಲ್ಲಿ ತಮ್ಮ ಸೋದರಿಯ ಮದುವೆಯನ್ನು ಅದ್ಧೂರಿಯಾಗಿ ಮಾಡಲು ಹೋಗಿ ಪ್ರಚಾರ ಆಗಬಾರದ ಕಾರಣಕ್ಕೆ ಪ್ರಚಾರವಾಗಿದ್ದಾರೆ ಈ ಸಹೋದರರು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − one =
Remember me
