ಚೆನ್ನೈ:ಕೆಲವೊಂದಿಷ್ಟು ಜನರು ಯಾವುದೋ ಮಾನಸಿಕ ಖಿನ್ನತೆಯಿಂದಲೋ ಅಥವಾ ಯಾವುದೋ ದ್ವೇಷದಿಂದಾಗಿ ಸೀರಿಯಲ್​ ಕಿಲ್ಲರ್​ಗಳಾಗಿ ಬದಲಾಗಿಬಿಡುತ್ತಾರೆ. ಅವರು ಈ ರೀತಿ ಪಾಪದ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಅವರ ಜತೆಗಿರುವವರಿಗೂ ತಿಳಿಯದಷ್ಟರ ಮಟ್ಟಿಗೆ ಸಹಜವಾಗಿರುತ್ತಾರೆ ಅವರು. ಅದೇ ರೀತಿ ಸೀರಿಯಲ್​ ಕಿಲ್ಲರ್​ ಸ್ನೇಹಿತನೊಬ್ಬನನ್ನು ತನ್ನ ರೂಮಿನಲ್ಲಿ ಇಟ್ಟುಕೊಂಡಿದ್ದ ವ್ಯಕ್ತಿಯ ದಾರುಣ ಕಥೆ ಇಲ್ಲಿದೆ.
ಇದನ್ನೂ ಓದಿ:ಮತಾಂತರವೆಂಬ ಭಯಾನಕ ನರಕ ಅನುಭವಿಸಿದ್ದೆ- ಗಾಯಕ ವಾಜಿದ್‌ ಖಾನ್​ ಪತ್ನಿ ಬಿಚ್ಚಿಟ್ಟಿದ್ದಾರೆ ಕರಾಳ ಅನುಭವ…
ಇಸಕ್ಕಿಮತ್ತು ಮತ್ತು ಶಂಕರ್​ (30) ಕೆಲ ತಿಂಗಳಿಂದ ಒಟ್ಟಿಗೆ ಒಂದೇ ರೂಮಿನಲ್ಲಿ ಬದುಕುತ್ತಿದ್ದರು. ಇಸಕ್ಕಿಮತ್ತು ಚೆನ್ನೈನಲ್ಲಿ ಕೆಲಸದ ಮೇಲೆ ಇದ್ದಿದ್ದರಿಂದಾಗಿ ಆತನಿಗೆ ಪ್ರತಿದಿನ ಶಂಕರ್​ ಏನು ಮಾಡುತ್ತಾನೆ ಎನ್ನುವುದರ ಬಗ್ಗೆ ಅಷ್ಟೇನು ತಿಳಿದಿರಲಿಲ್ಲ. ಹೀಗಿರುವಾಗ ನವೆಂಬರ್​ ಮೊದಲ ವಾರದಿಂದ ಇಬ್ಬರೂ ಸ್ನೇಹಿತರು ಕಾಣೆಯಾಗಿದ್ದಾರೆ. ತಿಂಗಳ ಮೊದಲ ವಾರಾಂತ್ಯದ ವೇಳೆಗೆ ಅವರ ರೂಮಿನಿಂದ ದುರ್ವಾಸನೆ ಬರಲಾರಂಭಿಸಿದೆ.
ಇಸಕ್ಕಿಮತ್ತು ರೂಮಿನಲ್ಲಿ ಬರುತ್ತಿದ್ದ ವಾಸನೆಯ ಬಗ್ಗೆ ಅನುಮಾನ ಬಂದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಬಾಗಿಲು ಒಡೆದು ನೋಡಲಾಗಿದೆ. ಆಗ ಬ್ಯಾರೆಲ್​ ಒಂದರೊಳಗೆ ಒಂದು ಶವ ಪತ್ತೆಯಾಗಿದೆ. ಪರಿಶೀಲನೆ ನಡೆಸಿದಾಗ ಅದು ಇಸಕ್ಕಿಮತ್ತು ಮೃತದೇಹ ಎನ್ನುವುದು ತಿಳಿದುಬಂದಿದೆ. ಇಸಕ್ಕಿಮತ್ತುವಿನ ಮೊಬೈಲ್​ ಫೋನ್​ನಿಂದ ಪೊಲೀಸರು ಶಂಕರ್​ಗೆ ಕರೆ ಮಾಡಿದ್ದಾರೆ. ಆದರೆ ಆತನ ಫೋನ್​ ಸ್ವಿಚ್​ ಆಫ್​ ಆಗಿತ್ತು. ಆತನ ಫೋನನ್ನು ಟ್ರೇಸ್​ ಮಾಡಿ, ಬೆನ್ನಟ್ಟಿದ ಪೊಲೀಸರಿಗೆ ಇನ್ನೊಂದು ಶಾಕ್​ ಕಾದಿತ್ತು.
ಇದನ್ನೂ ಓದಿ:ಬುಮ್ರಾರನ್ನು ನಡೆಸಿಕೊಂಡ ರೀತಿಗೆ ವಿರಾಟ್​ ಕೊಹ್ಲಿ ವಿರುದ್ಧ ಗೌತಮ್​ ಗಂಭೀರ್​ ಗರಂ..!
ಇಸಕ್ಕಿಮತ್ತುವಿನಿಂದ ದೂರಾದ ಶಂಕರ್​ ತನ್ನ ಸ್ನೇಹಿತ ಇಲಂಪರಿತಿ ಮತ್ತು ಅವನ ರೂಂಮೇಟ್​ ಅಂಬರಸು ಒಂದಿಗೆ ವಾಸವಿರಲು ಆರಂಭಿಸಿದ್ದಾನೆ. ನವೆಂಬರ್​ 12ರಂದು ಇಲಂಪರಿತಿ ಮತ್ತು ಅಂಬರಸು ನಡುವೆ ಯಾವುದೋ ವಿಚಾರಕ್ಕೆ ಜಗಳವಾಗಿದೆ. ಆಗ ಮಧ್ಯೆ ಪ್ರವೇಶಿಸಿದ ಶಂಕರ್​, ಅಂಬರಸು ತಲೆ ಮೇಲೆ ಕಲ್ಲು ಎಸೆದು ಸಾಯಿಸಿದ್ದಾನೆ. ಇಸಕ್ಕಿಮತ್ತುವಿನ ಕೊಲೆಯ ಬೆನ್ನತ್ತಿ ಹೊರಟ ಪೊಲೀಸರಿಗೆ ಶಂಕರ್​ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾನೆ.
ಅಂಬರಸು ಕೊಲೆ ಪ್ರಕರಣದಲ್ಲಿ ಶಂಕರ್​ ಮತ್ತು ಇಲಂಪರಿತಿಯನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಇಸಕ್ಕಿಮತ್ತುವನ್ನು ತಾನೇ ಕೊಲೆ ಮಾಡಿದ್ದಾಗಿ ಶಂಕರ್​ ಒಪ್ಪಿಕೊಂಡಿದ್ದಾನೆ. ಈ ಹಿಂದೆ 2018ರಲ್ಲಿಯೂ ಒಂದು ಕೊಲೆಯನ್ನು ಆತ ಮಾಡಿದ್ದ. ಆ ಪ್ರಕರಣದಲ್ಲಿ ಜೈಲು ಸೇರಿದ್ದ ಆತ ಜಾಮೀನಿನ ಮೇಲೆ ಹೊರ ಬಂದಿದ್ದ. ಮೂರೂ ಕೊಲೆಯನ್ನು ಉದ್ದೇಶವಿಲ್ಲದೆ, ಒಂದೇ ರೀತಿಯಲ್ಲಿ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)
ಲಾಕ್​ಡೌನ್​ನಲ್ಲಿ ಅತ್ತೆ ಮನೆಯಲ್ಲಿದ್ದ ಅಳಿಯನಿಗೆ ನಾದಿನಿ ಮೇಲೆ ಪ್ರೀತಿ; ತಂಗಿಯೊಡನೆ ಕಾಲ್ಕಿತ್ತ ಪತಿರಾಯ

ಯಾರೂ ಇಲ್ಲದ ವೇಳೆ ಮನೆಗೆ ಎಂಟ್ರಿ ಕೊಡುತ್ತಿದ್ದಳು, ಈಕೆಯ ಕೃತ್ಯಕ್ಕೆ ಸ್ಥಳೀಯರೇ ಬೆಚ್ಚಿಬಿದ್ದಿದ್ದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 17 =
Remember me
