ಲಖನೌ:ಹುಟ್ಟಿನಾಗಿನಿಂದ ಪ್ರೀತಿಯಿಂದ ಸಾಕಿದ್ದ ಮಗನೇ ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬರಾಬಂಕಿ ಜಿಲ್ಲೆಯಲ್ಲಿ ನಡೆದಿದೆ. ಕೊಲೆ ಮಾಡಿದ್ದ ಮಗ ಸೊಸೆಯನ್ನು ಪೊಲೀಸರು ಬಂಧಿಸಿದ್ದು, ಇದೀಗ ನಿಜ ಘಟನೆ ಹೊರಬಿದ್ದಿದೆ.
ಇದನ್ನೂ ಓದಿ:ನಾಲ್ವರು ಮಕ್ಕಳ ಕುತ್ತಿಗೆ ಕೊಯ್ದ ತಾಯಿ ಮಾಡಿದ್ದೇನು? ಗಂಡ ವಾಪಾಸು ಬರುವಷ್ಟರಲ್ಲಿ ಮನೆಯಾಗಿತ್ತು ಸ್ಮಶಾನ
ಬರಾಬಂಕಿಯ ಘತೇಪುರ ಗ್ರಾಮವಾಸಿ ಶ್ರೀರಾಮ್​ ಗೌತಮ್​ (55) ಕಷ್ಟಪಟ್ಟು ಒಂದಿಷ್ಟು ಆಸ್ತಿ ಸಂಪಾದಿಸಿದ್ದ. ಮನೋಜ್​ ಹೆಸರಿನ ಮಗ, ಸೊಸೆ ಮತ್ತು ಆತನಿದ್ದ ಕುಟುಂಬದಲ್ಲಿ ಆಸ್ತಿ ವಿಚಾರದಲ್ಲಿ ಆಗಾಗ ಜಗಳವಾಗುತ್ತಿತ್ತಂತೆ. ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಮಗ ಪೀಡಿಸುತ್ತಿದ್ದನಂತೆ. ಆದರೆ ಅದಕ್ಕೆ ಅಪ್ಪ ಒಪ್ಪದ ಕಾರಣ ಜಗಳವಾಗುತ್ತಿತ್ತು.
ಶುಕ್ರವಾರವೂ ಇದೇ ರೀತಿಯ ಜಗಳವಾಗಿದೆ. ವಾದ ವಿವಾದ ಹೆಚ್ಚಾಗಿ, ಮಗನ ಸಿಟ್ಟು ತಾರಕಕ್ಕೇರಿದ್ದು, ಅಪ್ಪನನ್ನು ಮನೆಯಿಂದ ಹೊರಗೆ ಎಳೆದುತಂದು, ಮನೆ ಮುಂದಿದ್ದ ಮರಕ್ಕೆ ಕಟ್ಟಿ ಹಾಕಿದ್ದಾನೆ. ಅಷ್ಟಾದರೂ ಅಪ್ಪ ಆಸ್ತಿ ಕೊಡಲು ಒಪ್ಪದ ಹಿನ್ನೆಲೆಯಲ್ಲಿ, ತನ್ನ ಪತ್ನಿಯೊಂದಿಗೆ ಸೇರಿ ಆತನ ಕುತ್ತಿಗೆಗೆ ಚಾಕು ಹಾಕಿ ಕೊಲೆ ಮಾಡಿದ್ದಾನೆ. ಅದಾದ ನಂತರ ಪತ್ನಿಯೊಂದಿಗೆ ಊರಿನಿಂದ ಪರಾರಿಯಾಗಿದ್ದಾನೆ. ಘಟನೆಯನ್ನು ಕಣ್ಣಾರೆ ನೋಡಿದ್ದ ಗ್ರಾಮಸ್ಥರು ಆತನನ್ನು ತಡೆಯಲು ಹೋದಾಗ, ಅವರನ್ನೂ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ.
ಇದನ್ನೂ ಓದಿ:ಕನಸು ಹೊತ್ತು ಆಗಮಿಸುತ್ತಿದ್ದಾರೆ ನಟ ವಿಶ್ವಾಸ್; ಹಿರಿಯ ನಟರಿಂದ ಶೀರ್ಷಿಕೆ ಅನಾವರಣ
ಮನೋಜ್​ ಊರು ಬಿಟ್ಟ ತಕ್ಷಣ ಗ್ರಾಮಸ್ಥರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ತನಿಖೆ ನಡೆಸಿ, ಓಡಿ ಹೋಗಿದ್ದ ಮಗ ಸೊಸೆಯನ್ನು ಬಂಧಿಸಿದ್ದಾರೆ. (ಏಜೆನ್ಸೀಸ್​)
ಚಿನ್ನದ ದರದಲ್ಲಿ ಭಾರಿ ಇಳಿಕೆ; ಒಡವೆ ಪ್ರೇಮಿಗಳೀಗ ಫುಲ್​ ಖುಷ್​

ಕಾಂಡೋಮ್​ನಲ್ಲಿ ರಂಧ್ರ ಮಾಡಿ ಸೆಕ್ಸ್​ ಮಾಡಿದ ಪ್ರಿಯಕರ: ಕೋರ್ಟ್​ ನೀಡಿತು ಶಿಕ್ಷೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 10 =
Remember me
