ಬೆಂಗಳೂರು:ರಾಹುಲ್ ಗಾಂಧಿ ಸ್ಮೃತಿ ಇರಾನಿಗೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎನ್ನವ ಆರೋಪ ಕೇಳಿಬಂದಿದ್ದು ಇದಕ್ಕೆ ತುಪ್ಪ ಸುರಿಯುವಂತೆ ಬಿಹಾರದ ಕಾಂಗ್ರೆಸ್‍ ಶಾಸಕಿ ಹೇಳಿಕೆ ನೀಡಿದ್ದರು. ಇದೀಗ ರಾಹುಲ್ ಗಾಂಧಿಯ ಫ್ಲೈಯಿಂಗ್ ಕಿಸ್ ಬಗ್ಗೆ ಎಂ ಲಕ್ಷ್ಮಣ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:ಸ್ಮೃತಿ ಇರಾನಿಗೆ ಫ್ಲೈಯಿಂಗ್ ಕಿಸ್; ರಾಹುಲ್ ಗಾಂಧಿ ವಿರುದ್ಧ ಶೋಭಾ ಕರಂದ್ಲಾಜೆ ದೂರು
ಬಿಹಾರದ ಕಾಂಗ್ರೆಸ್ ಶಾಸಕಿ ನೀತು ಸಿಂಗ್, “ರಾಹುಲ್​ ಅವರಿಗೆ ಯುವತಿಯರ ಕೊರತೆ ಇಲ್ಲದಿರುವಾಗ 50 ವರ್ಷದ ಮಹಿಳೆಗೆ ಫ್ಲೈಯಿಂಗ್​ ಕಿಸ್​ ಏಕೆ ಕೊಡುತ್ತಾರೆ?” ಎಂದು ಅವರು ಮಾತನಾಡಿರುವ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಇದು ಹೊಸ ವಿವಾದವನ್ನು ಹುಟ್ಟುಹಾಕಿದೆ. ಇದಲ್ಲದೆ ಬಿಹಾರದ ಹಿಸುವಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಫ್ಲೈಯಿಂಗ್​ ಕಿಸ್​ ವಿವಾದದ ಬಗ್ಗೆ ಮಾತನಾಡಿ, ರಾಹುಲ್​ ಗಾಂಧಿ ಅವರ ಹೆಸರನ್ನು ಕೆಡಿಸುವ ಬಿಜೆಪಿಯ ಪ್ರಯತ್ನ ಇದು ಎಂದು ಕಿಡಿಕಾಡಿದ್ದರು.
ವಿಡಿಯೋ ನೋಡಿ:Shobha Karandlaje Slams Rahul Gandhi Over Flying Kiss | ರಾಹುಲ್​ ಗಾಂಧಿ ಫ್ಲೈಯಿಂಗ್​​​​​ ಕಿಸ್​​ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಇದೀಗ ಎಂ ಲಕ್ಷ್ಮಣ ಹೇಳಿಕೆ ನೀಡಿದ್ದು ನೇರವಾಗಿ ಸ್ಮೃತಿ ಇರಾನಿ ವಿರುದ್ಧವೇ ಹರಿಹಾಯ್ದಿದ್ದಾರೆ. ಎಂ ಲಕ್ಷ್ಮಣ, “ರಾಹುಲ್ ಗಾಂಧಿ ಲೋಕಸಭೆ ಭಾಷಣ ಕಟ್ ಮಾಡಿ ಬಿಟ್ಟಿದ್ದಾರೆ. ಪ್ಲೈಯಿಂಗ್ ಕಿಸ್ ಮಾಡಿದ್ದಾರೆ ಅಂತ ಸ್ಮೃತಿ ಇರಾನಿ ಆರೋಪ ಮಾಡಿದ್ದಾರೆ. ಅಲ್ಲ, ಸ್ಮೃತಿ ಇರಾನಿಯವರೆ ನೀವು ಎಲ್ಲಿ ಇದ್ರಿ? ನಿಮ್ಮ ಗಂಡ ಯಾರು, ಅವರು ಮೊದಲು ಯಾರಿಗೆ ಗಂಡ ಆಗಿದ್ರು? ಆಮೇಲೆ ನಿಮಗೆ ಹೇಗೆ ಗಂಡ ಆದ್ರು?
ಇದನ್ನೂ ಓದಿ:ಲೋಕಸಭೆಯಲ್ಲಿ ರಾಹುಲ್​ ಗಾಂಧಿ ಫ್ಲೈಯಿಂಗ್​ ಕಿಸ್; ಮುತ್ತು ಕೊಟ್ಟಿದ್ದನ್ನು ನಾನು ನೋಡಿಲ್ಲ: ನಟಿ ಹೇಮಾ ಮಾಲಿನಿ
ನೀವು ನಿಮ್ಮ ಸ್ನೇಹಿತೆಗೆ ಹೇಗೆ ಮೋಸ ಮಾಡಿದ್ರಿ? ಇಷ್ಟೆಲ್ಲ ಇದ್ದೂ ರಾಹುಲ್ ಗಾಂಧಿ ಮೇಲೆ ಆರೋಪ ಮಾಡ್ತಾ ಇದ್ದಾರೆ. ಬಾಯಿಗೆ ಕೈಯಿಟ್ಟಿದ್ದು ಪ್ಲೈಯಿಂಗ್ ಕಿಸ್ ಅಂತಿರಾ? ಪ್ಲೈಯಿಂಗ್ ಕಿಸ್ ಅಂದ್ರೆ ತುಟಿಗೆ ಕೈ ಮುಟ್ಟಿಸಿ ಉದುವುದು. ಆ ರೀತಿಯಲ್ಲಿ ರಾಹುಲ್ ಗಾಂಧಿ ಊದಿಯೇ ಇಲ್ಲ” ಎಂದು ಸ್ಮೃತಿ ಇರಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
