ಗುರುಗ್ರಾಮ: ಪ್ರಪಂಚದಲ್ಲಿ ಕೆಟ್ಟ ತಂದೆಯಿರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ ಎನ್ನುತ್ತಾರೆ. ಆದರೆ ಇತ್ತೀಚೆಗೆ ತಾಯಿಯೇ ಮಕ್ಕಳನ್ನು ಕೊಲೆ ಮಾಡಿರುವ ಅನೇಕ ಪ್ರಕರಣಗಳನ್ನು ದಾಖಲಾಗುತ್ತಿವೆ. ತಾಯಿಯೊಬ್ಬಳು ತನ್ನ ನಾಲ್ವರು ಹೆಣ್ಣು ಮಕ್ಕಳ ಕುತ್ತಿಗೆ ಕೊಯ್ದಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.
ಇದನ್ನೂ ಓದಿ:ಗ್ಲೇನ್​ ಮ್ಯಾಕ್ಸ್​ವೆಲ್ ಅಬ್ಬರದ ಬ್ಯಾಟಿಂಗ್​ನಿಂದ ಟ್ರೋಲ್​ ಆದ ಕೆ.ಎಲ್​. ರಾಹುಲ್..!​
ಗುರುಗ್ರಾಮದ ನುಹ್​ ಪಿಪ್ರೋಲಿ ಗ್ರಾಮದ ಫರ್ಮಿನಾ ಮತ್ತು ಖುರ್ಷಿದ್ ಅಹಮದ್​ದು ಸುಂದರ ಕುಟುಂಬ. ಫರ್ಮಿನಾಗೆ ಅದು ಎರಡನೇ ಮದುವೆಯಾಗಿತ್ತಾದರೂ ಆಕೆ ಗಂಡನೊಂದಿಗೆ ಸುಖ ಸಂಸಾರವನ್ನೇ ನಡೆಸುತ್ತಿದ್ದಳು. ಮುಸ್ಕಾನಾ, ಅಲ್ಸಿಫಾ, ಮಿಸ್ಕಿನಾ ಮತ್ತು ಎಂಟು ತಿಂಗಳ ಹೆಣ್ಣು ಮಗು ಅವರ ಸುಖ ಸಂಸಾರಕ್ಕೆ ಸಾಕ್ಷಿಯಾಗಿತ್ತು.
ಇತ್ತೀಚೆಗೆ ಗ್ರಾಮದ ಒಂದು ಕುಟುಂಬಸ್ಥರಿಗೆ ಅಪಘಾತವಾಗಿತ್ತು. ಆಸ್ಪತ್ರೆಯಿಂದ ಮನೆಗೆ ಬಂದಿದ್ದ ಅವರನ್ನು ನೋಡಲೆಂದು ಖುರ್ಷಿದ್​ ಶುಕ್ರವಾರ ಮದ್ಯಾಹ್ನ ತೆರಳಿದ್ದಾನೆ. ಅತ್ತ ಗಂಡ ತೆರಳುತ್ತಿದ್ದಂತೆ, ಇತ್ತ ತಾಯಿ ಮಾಡಬಾರದಂತಹ ತಪ್ಪು ಮಾಡಿಬಿಟ್ಟಿದ್ದಾಳೆ. ತನ್ನ ನಾಲ್ವರು ಹೆಣ್ಣು ಮಕ್ಕಳ ಕುತ್ತಿಗೆ ಕೊಯ್ದು, ಜೀವ ತೆಗೆದು ಸಾಲಾಗಿ ಮಲಗಿಸಿದ್ದಾಳೆ. ಕೊನೆಯಲ್ಲಿ ತನ್ನ ಕುತ್ತಿಗೆಯನ್ನೂ ಕೊಯ್ದುಕೊಳ್ಳಲು ಮುಂದಾಗಿದ್ದಾಳೆ.
ಇದನ್ನೂ ಓದಿ:ತಾಯಿಯನ್ನು ಬಲಿ ಪಡೆದಿದ್ದ ಉಮಾಶ್ರೀ ಕಾರಿಗೆ ಮಗಳ ಜೀವವೂ ಹೋಯ್ತು!
ಫರ್ಮಿನಾ ಕುತ್ತಿಗೆ ಕೊಯ್ದುಕೊಳ್ಳುವಷ್ಟರಲ್ಲಿ ಖುರ್ಷಿದ್​ ಮನೆಗೆ ವಾಪಾಸಾಗಿದ್ದಾನೆ. ಎಷ್ಟೇ ಬಾಗಿಲು ತಟ್ಟಿದರೂ ಬಾಗಿಲು ತೆಗೆಯದಿದ್ದಕ್ಕೆ ಹೆದರಿ ಕಿಟಕಿಯಿಂದ ನೋಡಿದ್ದಾನೆ. ಆಗ ಹೆಂಡತಿ ಕುತ್ತಿಗೆ ಕೊಯ್ದುಕೊಳ್ಳಲು ಮುಂದಾಗುತ್ತಿರುವುದು ಕಂಡಿದೆ. ತಕ್ಕಣ ಊರವರ ಸಹಾಯದಿಂದ ಬಾಗಿಲು ಒಡೆದು ಹೋಗಿ, ಫರ್ಮಿನಾ ಜೀವ ಉಳಿಸಲಾಗಿದೆ. ಸದ್ಯ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. (ಎಜೆನ್ಸೀಸ್​)
ಚಿನ್ನದ ದರದಲ್ಲಿ ಭಾರಿ ಇಳಿಕೆ; ಒಡವೆ ಪ್ರೇಮಿಗಳೀಗ ಫುಲ್​ ಖುಷ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
