ಲಖನೌ:ಸೆಲೆಬ್ರಿಟಿಗಳಿಗೆ, ರಾಜಕಾರಣಿಗಳಿಗೆ ಅಭಿಮಾನಿಗಳ ಜತೆ ದ್ವೇಷಿಸುವವರೂ ಇರುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಆ ದ್ವೇಷ ಕೊಲೆ ಬೆದರಿಕೆ ಹಾಕುವುಷ್ಟರ ಮಟ್ಟಿಗೆ ಹೆಚ್ಚಾಗಿಬಿಡುತ್ತದೆ. ಅದೇ ರೀತಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಅವರಿಗೆ ಒಬ್ಬರು ಕೊಲೆ ಬೆದರಿಕೆ ಹಾಕಿದ್ದಾರೆ. ಅಷ್ಟಕ್ಕೂ ಈ ಬೆದರಿಕೆ ಹಾಕಿದ ವ್ಯಕ್ತಿಯ ವಯಸ್ಸು ಕೇವಲ 15 ವರ್ಷ.
ಇದನ್ನೂ ಓದಿ:ಈತನನ್ನು ಬಂಧಿಸಲು ಮಾಹಿತಿ ಕೊಟ್ಟರೆ ನಿಮಗೆ ಸಿಗುತ್ತೆ 37 ಕೋಟಿ ರೂಪಾಯಿ!
ಆಗ್ರಾ ಮೂಲದ ಬಾಲಕ ಯೋಗಿ ಆದಿತ್ಯಾನಾಥ ಅವರನ್ನು ಸ್ಫೋಟದ ಮೂಲಕ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇಂತದ್ದೊಂದು ಬೆದರಿಕೆ ಇದ್ದ ಮೆಸೇಜ್​ನ್ನು ಆತ ಸಹಾಯವಾಣಿ ಸಂಖ್ಯೆ 112ಕ್ಕೆ ವಾಟ್ಸ್​ಆ್ಯಪ್​ನಲ್ಲಿ ಕಳುಹಿಸಿಕೊಟ್ಟಿದ್ದಾನೆ. ಪೊಲೀಸ್​ ಅಧಿಕಾರಿ ಅಂಜುಲ್​ ಕುಮಾರ್​ ಅವರು ಈ ಸಂದೇಶವನ್ನು ನೋಡಿದ್ದು, ಇದರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಸಂದೇಶ ಕಳುಹಿಸಿದ ನಂಬರನ್ನು ಟ್ರೇಸ್​ ಮಾಡಿ ಬಾಲಕನ ವಿಳಾಸವನ್ನು ಪತ್ತೆ ಹಚ್ಚಲಾಗಿದೆ.
10ನೇ ತರಗತಿ ವಿದ್ಯಾರ್ಥಿಯ ವಿಳಾಸವನ್ನು ಕೇವಲ 24 ಗಂಟೆಗಳಲ್ಲಿ ಪತ್ತೆ ಹಚ್ಚಿದ ಪೊಲೀಸರು ಇದೀಗ ಬಾಲಕನನ್ನು ಬಂಧಿಸಿ, ಬಾಲಾಪರಾಧಿ ವಿಭಾಗದಲ್ಲಿ ಇರಿಸಿದ್ದಾರೆ. ಮುಂದಿನ ವಾರ ಕುಟುಂಬದಲ್ಲಿ ನಡೆಯಲಿರುವ ಮದುವೆಗೆ ಸಂಭ್ರಮದಿಂದ ಸಿದ್ಧನಾಗುತ್ತಿದ್ದ ಬಾಲಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಇದನ್ನೂ ಓದಿ:ಪತ್ರಕರ್ತ ಮತ್ತು ಸ್ನೇಹಿತನ ಸಜೀವ ದಹನ; ಮನೆಯೊಳಗೆ ಕೂಡಿ ಹಾಕಿ ಕೊಂದ ಪಾಪಿಗಳು
ಬಾಲಕ ಇನ್ನೂ ಚಿಕ್ಕವನು. ಅವನಿಗೆ ಕೆಟ್ಟದ್ದು ಒಳ್ಳೆಯದು ತಿಳಿದಿಲ್ಲ. ಬುದ್ಧಿವಂತನಾಗಿರುವ ಆತ ಶಾಲೆಯಲ್ಲಿ ಚರ್ಚಾಸ್ಪರ್ಧೆಯಲ್ಲಿ ಮುಂದಿದ್ದ. ವಾಲಿಬಾಲ್​ ಚೆನ್ನಾಗಿ ಆಡುತ್ತಿದ್ದ. ಊರವರೆಲ್ಲರಿಗೂ ಆತನ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಆತ ಯಾವುದೋ ಚಿಂತೆಯಿಂದ ಅಥವಾ ತಮಾಷೆಗಾಗಿ ಈ ಸಂದೇಶ ಕಳುಹಿಸಿರಬಹುದು ಎಂದು ಬಾಲಕನ ಅಜ್ಜ ಹೇಳಿದ್ದಾರೆ. ‘ನನ್ನ ಮಗ ಸ್ಪೋರ್ಟ್ಸ್ ಕೋಟಾದಲ್ಲಿ ಸರ್ಕಾರಿ ಕೆಲಸ ತೆಗೆದುಕೊಳ್ಳುತ್ತಾನೆ ಎಂದು ನಾನಂದುಕೊಂಡಿದ್ದೆ. ಆದರೆ ಈಗ ಪೊಲೀಸರು ಅವನನ್ನು ಅಪರಾಧಿಯ ರೀತಿ ಎಳೆದುಕೊಂಡು ಹೋಗಿರುವುದು ನೋಡಿದರೆ ಭಯವಾಗುತ್ತಿದೆ’ ಎಂದು ಬಾಲಕನ ತಾಯಿ ನುಡಿದಿದ್ದಾರೆ. (ಏಜೆನ್ಸೀಸ್​)
ಚಿನ್ನದ ದರದಲ್ಲಿ ಭಾರಿ ಇಳಿಕೆ; ಒಡವೆ ಪ್ರೇಮಿಗಳೀಗ ಫುಲ್​ ಖುಷ್​

ಕಾಂಡೋಮ್​ನಲ್ಲಿ ರಂಧ್ರ ಮಾಡಿ ಸೆಕ್ಸ್​ ಮಾಡಿದ ಪ್ರಿಯಕರ: ಕೋರ್ಟ್​ ನೀಡಿತು ಶಿಕ್ಷೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + two =
Remember me
