ನವದೆಹಲಿ:ಕರೊನಾ ಸೋಂಕಿಗೆ ಲಸಿಕೆ ಸಿದ್ಧಪಡಿಸುವಲ್ಲಿ ಭಾರತ ಉತ್ತಮ ಸ್ಫರ್ಧೆ ಕಾಯ್ದುಕೊಂಡಿದೆ. ಲಸಿಕೆ ತಯಾರಿಕಾ ಘಟಕಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದ ಬೆನ್ನಲ್ಲೇ ಇದೀಗ ಸಂಶೋಧಕರು ಮತ್ತು ವಿಜ್ಞಾನಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ:ಸೀರಿಯಲ್​ ಕಿಲ್ಲರ್​ನೊಂದಿಗೇ ಬದುಕು! ದುರ್ವಾಸನೆ ಬರುತ್ತಿದ್ದ ಮನೆಯ ಬಾಗಿಲು ಒಡೆದವರಿಗೆ ಕಾದಿತ್ತು ಶಾಕ್​
ಪುಣೆಯ ಜೆನ್ನೋವಾ ಬಯೋಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌, ಹೈದರಾಬಾದ್​ನ ಬಯೋಲಾಕಿಲ್​ ಇ ಲಿಮಿಟೆಡ್​ ಮತ್ತು ಡಾ.ರೆಡ್ಡೀಸ್​ ಲ್ಯಾಬೋರೇಟರಿಯ ತಂಡದೊಂದಿಗೆ ಪ್ರಧಾನಿ ಅವರು ಸೋಮವಾರ ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆಸಿದ್ದಾರೆ. ಲಸಿಕೆ ಸಿದ್ಧಪಡಿಸುವಿಕೆಯಲ್ಲಿ ಈ ತಂಡಗಳ ಕೊಡುಗೆಯನ್ನು ಪ್ರಶಂಸಿಸಿದ್ದಾರೆ.
ದೇಶದ ಪ್ರತಿಯೊಬ್ಬ ಸಾಮಾನ್ಯ ಪ್ರಜೆಗೂ ಕರೊನಾ ಲಸಿಕೆಯ ಬಗ್ಗೆ ಅರ್ಥವಾಗಬೇಕು. ಲಸಿಕೆ ಏನು, ಹೇಗೆ ಕೆಲಸ ಮಾಡುತ್ತದೆ, ಅದರ ಸಾಮರ್ಥ್ಯವೆಷ್ಟು ಎನ್ನುವುದರ ಬಗ್ಗೆ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಸಂಶೋಧಕರು ವಿಶ್ಲೇಷಿಸಬೇಕು ಎಂದು ಪ್ರಧಾನಿ ಅವರು ಹೇಳಿದ್ದಾರೆ. ಈ ಸಮಯದಲ್ಲಿ ಲಸಿಕೆ ಅಭಿವೃದ್ಧಿಗೆ ವಿವಿಧ ವೇದಿಕೆಗಳ ಸಾಮರ್ಥ್ಯದ ಬಗ್ಗೆಯೂ ಚರ್ಚಿಸಲಾಗಿದೆ.
ಇದನ್ನೂ ಓದಿ:ಬಳಕೆಯಾಗದ ವೆಂಟಿಲೇಟರ್ ; ಇಚ್ಛಾಶಕ್ತಿ ಕೊರತೆಯಿಂದ ರೋಗಿಗಳಿಗೆ ದೊರೆಯದ ಸೌಲಭ್ಯ
ದೇಶದಲ್ಲಿ ಲಸಿಕೆ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮೂರು ಕೇಂದ್ರಗಳಿಗೆ ಮೋದಿಯವರು ಶನಿವಾರ ಭೇಟಿ ನೀಡಿದ್ದರು. ಪುಣೆಯ ಸೀರಮ್​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ, ಅಹಮದಾಬಾದ್​ನ ಜೈದಸ್​ ಬಯೋಟೆಕ್​ ಪಾರ್ಕ್​ ಮತ್ತು ಹೈದರಾಬಾದ್​ನ ಭಾರತ್​ ಬಯೋಟೆಕ್​ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. (ಏಜೆನ್ಸೀಸ್​)
PM Narendra Modi had virtual meetings with 3 teams working on developing & manufacturing vaccine for#COVID19, today. These teams were from Gennova Biopharmaceuticals Ltd Pune, Biological E Ltd Hyderabad and Dr Reddys Laboratories Ltd Hyderabad: Prime Minister's Officepic.twitter.com/hdgPP2iRkY
— ANI (@ANI)November 30, 2020

ಯಾರೂ ಇಲ್ಲದ ವೇಳೆ ಮನೆಗೆ ಎಂಟ್ರಿ ಕೊಡುತ್ತಿದ್ದಳು, ಈಕೆಯ ಕೃತ್ಯಕ್ಕೆ ಸ್ಥಳೀಯರೇ ಬೆಚ್ಚಿಬಿದ್ದಿದ್ದರು!

ಲಾಡ್ಜ್​ಗೆ ಬರುವಾಗ ಇಬ್ಬರು, ಹೋಗುವಾಗ ಒಬ್ಬನೇ: ಮುಚ್ಚಿದ್ದ ಕೊಠಡಿ ತೆರೆದವರಿಗೆ ಕಾದಿತ್ತು ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − eight =
Remember me
