ನವರಾತ್ರಿಯ ಪ್ರಾರಂಭ ದಿನವಾದ ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಹಬ್ಬದ ಶುಭಾಶಯ ಕೋರಿದ್ದರು. ಹಾಗೇ ಎರಡನೇ ದಿನವಾದ ಇಂದು ಬ್ರಹ್ಮಚಾರಿಣಿ ದೇವಿ ಪೂಜೆ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ವಿಡಿಯೋವೊಂದನ್ನು ಶೇರ್​ ಮಾಡಿದ್ದಾರೆ.
ಅಮ್ಮಾ ಬ್ರಹ್ಮಚಾರಿಣಿ..ನಾವು ನಿಮಗೆ ನಮಿಸುತ್ತಿದ್ದೇವೆ..ನಿನ್ನ ದಯೆ, ಸಹಾನುಭೂತಿಯೊಂದಿಗೆ ನಮ್ಮನ್ನು ಆಶೀರ್ವದಿಸು. ಈ ದೇಶಕ್ಕೆ ಸೇವೆ ಸಲ್ಲಿಸುವ, ಸಂತೋಷವನ್ನು ಪಸರಿಸುವ ಶಕ್ತಿಯನ್ನು, ಉತ್ಸಾಹವನ್ನು ನಾವು ನಿನ್ನಿಂದಲೇ ಪಡೆಯುತ್ತಿದ್ದೇವೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ದುರ್ಗಾಮಾತೆಯ ಎರಡನೇ ಅವತಾರ ಈ ಬ್ರಹ್ಮಚಾರಿಣಿ ದೇವಿ ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ. ದಕ್ಷಮಹಾರಾಜನ ಪುತ್ರಿ. ಬಲಗೈಯಲ್ಲಿ ಜಪಮಾಲೆ, ಎರಡಗೈಯಲ್ಲಿ ಕಮಂಡಲ ಹಿಡಿದ ದೇವಿ. ಶಿವನನ್ನು ಒಲಿಸಿಕೊಳ್ಳಲು ಮಾಡಿದ ಕಠಿಣ ತಪಸ್ಸಿನಿಂದ ಪಾರ್ವತಿಗೆ ಬ್ರಹ್ಮಚಾರಿಣಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.
We bow to you, Maa Brahmacharini. Bless us with kindness and compassion. From you we derive strength to spread joy and serve our society.pic.twitter.com/kefm4AkpJU
— Narendra Modi (@narendramodi)October 18, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 3 =
Remember me
