ನವದೆಹಲಿ:ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದ ಸ್ವದೇಶಿ ನಿರ್ಮಿತ ಯುದ್ಧ ವಾಹನವನ್ನು ಲಡಾಖ್​ನ ಗಡಿಯಲ್ಲಿ ಶುಕ್ರವಾರ ನಿಯೋಜಿಸಲಾಗಿದೆ.
ಉತ್ತರ ಭಾಗದ ಸೇನಾ ಕಮಾಂಡರ್ ಲೆಫ್ಟಿನೆಂಟ್​ ಜನರಲ್​ ಉಪೇಂದ್ರ ದ್ವಿವೇದಿ ಅವರು ಈ ವಾಹನ ಚಾಲನೆ ಮೂಲಕ ಗಡಿಯಲ್ಲಿ ನಿಯೋಜನೆಗೆ ಹಸ್ತಾಂತರಿಸಿದರು.
ಗುಡ್ಡಗಾಡು ಪ್ರದೇಶದಲ್ಲಿ ಈ ವಾಹನ ಸುಲಭವಾಗಿ ಚಲಿಸಬಲ್ಲದು, ಅಲ್ಲದೇ ಶಸ್ತ್ರ ಸಜ್ಜಿತ ಈ ವಾಹನ ಶತ್ರುಗಳ ಜತೆ ಹೋರಾಟಕ್ಕೂ ಹೆಚ್ಚು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಒಬ್ಬರು ಈ ವಾಹನವನ್ನು ಸುಲಭವಾಗಿ ಚಲಾಯಿಸಿದರೆ, ಮತ್ತೊಬ್ಬರು 1800 ಮೀಟರ್​ ದೂರದವರೆಗೂ ಶತ್ರುವಿನ ಮೇಲೆ ಕಣ್ಣಿಡಬಹುದಾಗಿದೆ. ವಾಹನದಲ್ಲೇ ಶಸ್ತ್ರ ದಾಳಿ ನಡೆಸಬಹುದಾದ ಸುಸಜ್ಜಿತ ವಾಹನ ಇದಾಗಿದೆ ಎಂದು ವಿವರಿಸಿದರು.
ಇನ್​ಫ್ರಾಂಟ್ರಿ ಪ್ರೊಟೆಕ್ಟೆಡ್​​ ಮೊಬಿಲಿಟಿ ವೆಹಿಕಲ್ಸ್​ (ಐಪಿಎಂವಿಎಸ್​) ಎಂದು ಕರೆಯಲ್ಪಡುವ ಈ ವಾಹನವನ್ನು ಡಿಆರ್​ಡಿಒ ಹಾಗೂ ಟಾಟಾ ಸಂಸ್ಥೆ ಸಹಯೋಗದೊಂದಿಗೆ ನಿರ್ಮಿಸಲಾಗಿದೆ.(ಏಜೆನ್ಸೀಸ್​)
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:6 − five =
Remember me
