ನವದೆಹಲಿ :1990 ರ ದಶಕದಲ್ಲಿ ಬಾಲಿವುಡ್​ನ ಡ್ಯಾನ್ಸ್​ ಸೆನ್ಸೇಷನ್​ಗಳಾಗಿದ್ದ ಮಾಧುರಿ ದೀಕ್ಷಿತ್​ ಮತ್ತು ರವೀನಾ ಟಂಡನ್ ಇತ್ತೀಚೆಗೆ ಕಲರ್ಸ್​ ವಾಹಿನಿಯ ಡ್ಯಾನ್ಸ್​ ದೀವಾನೆ 3 ವೇದಿಕೆಯಲ್ಲಿ ಭೇಟಿಯಾಗಿದ್ದಾರೆ. ತಮ್ಮ ಹಾಡುಗಳನ್ನು ಎಕ್ಸ್​ಚೇಂಜ್ ಮಾಡಿಕೊಂಡು ಪರಸ್ಪರರ ಹಿಟ್​ ನಂಬರ್​ಗಳಿಗೆ ಹೆಜ್ಜೆ ಹಾಕಿ, ನೋಡುಗರನ್ನು ರಂಜಿಸಿದ್ದಾರೆ.
ಮಾಧುರಿ ಅವರು ರವೀನಾರ ‘ಟಿಪ್​ ಟಿಪ್​ ಬರ್ಸಾ ಪಾನಿ’ ಹಾಡಿಗೆ ನೃತ್ಯ ಮಾಡಿದರೆ, ರವೀನಾ ಅವರು ಮಾಧುರಿಯ ‘ಧಕ್​ ಧಕ್​ ಕರ್ನೇ ಲಗಾ’ ಹಾಡಿಗೆ ಹೆಜ್ಜೆ ಹಾಕಿದರು. ಕೊನೆಯಲ್ಲಿ ಇಬ್ಬರೂ ಒಟ್ಟಿಗೆ ರವೀನಾರ ಹಿಟ್​ ನಂಬರ್ ‘ಅಖಿಯೋಂಸೆ ಗೋಲಿ ಮಾರೆ’ ಸ್ಟೆಪ್​ಗಳನ್ನು ರಂಜನೀಯವಾಗಿ ಪ್ರದರ್ಶಿಸಿದರು.
ಇನ್ಸ್​ಟಾಗ್ರಾಂನಲ್ಲಿ ಕಲರ್ಸ್​ ಟಿವಿ ಪೋಸ್ಟ್​ ಮಾಡಿರುವ ಈ ವಿಡಿಯೋ ನೋಡಿ –


A post shared by ColorsTV (@colorstv)
ಮಾಧುರಿ ದೀಕ್ಷಿತ್ ಅವರು ನೃತ್ಯ ಸ್ಪರ್ಧೆಯ ಶೋ ಆಗಿರುವ ಡ್ಯಾನ್ಸ್​ ದಿವಾನೆ ಕಾರ್ಯಕ್ರಮದ ಓರ್ವ ತೀರ್ಪುಗಾರರಾಗಿದ್ದಾರೆ. ರವೀನಾ ಟಂಡನ್ ಪ್ರಸ್ತುತ ವಿಶೇಷ ಸಂಚಿಕೆಗೆ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದಾರೆ.(ಏಜೆನ್ಸೀಸ್)
ಕರೊನಾ : 46,148 ಹೊಸ ಪ್ರಕರಣಗಳು, 979 ಸಾವು

ಕ್ರೀಡಾಂಗಣದ ಒಳಹೊಕ್ಕು ಅಥ್ಲೆಟಿಕ್​ ಟ್ರ್ಯಾಕನ್ನು ಆಕ್ರಮಿಸಿಕೊಂಡ ವಿಐಪಿ ಕಾರುಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
