ಮುಂಬೈ:ಬಾಲಿವುಡ್‌ನ ಧಕ್‌ ಧಕ್‌ ಗರ್ಲ್‌ ಸಿನಿಮಾ ನಟಿ ಮಾಧುರಿ ದೀಕ್ಷಿತ್‌. ನಟಿ ಇಂದಿಗೂ ಪಡ್ಡೆ ಹುಡುಗರಿಗೆ ಸಖತ್​ ಇಷ್ಟ. ಸೌಂದರ್ಯದ ಮೂಲಕವಾಗಿ ಸೆಳೆಯುವ ಈ ಹೀರೋಯಿನ್​ ಬ್ಯೂಟಿ ಸಿಕ್ರೇಟ್​ ಏನು ಎಂದು ಫ್ಯಾನ್ಸ್​​ ಕೇಳುತ್ತಿರುತ್ತಾರೆ. ಇದೀಗ ನಟಿ ಅವರ ಫಳ..ಫಳ ಎಂದು ಹೊಳೆಯವ ಕೂದಲಿನ ಕೇರ್​ ಹೇಗೆ ಮಾಡುತ್ತಾರೆ ಎಂದು ಹಂಚಿಕೊಂಡಿದ್ದಾರೆ.

90ರ ದಶಕದಲ್ಲಿ ಯುವಕರ ಹಾರ್ಟ್ ಬೀಟ್ ಹೆಚ್ಚು ಮಾಡಿದ್ದು ಧಕ್​ ಧಕ್​ ಗರ್ಲ್ ಮಾಧುರಿ ದೀಕ್ಷಿತ್. ಒಂದು ಕಾಲದಲ್ಲಿ ಮಾಧುರಿ ದೀಕ್ಷಿತ್ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಜನರು ಸಾಲಿನಲ್ಲಿ ನಿಲ್ಲುತ್ತಿದ್ದರು. ವಯಸ್ಸು 58 ಆದ್ರೂ ಇನ್ನು ಮಾಧುರಿ ದೀಕ್ಷಿತ್ 20ರ ಯುವತಿಯರು ನಾಚುವಂತೆ ಕಾಣಿಸುತ್ತಾರೆ. ಇನ್ನು ಮಾಧುರಿ ದೀಕ್ಷಿತ್ ಹೆಜ್ಜೆ ಹಾಕಿದ್ರೆ ಪಡ್ಡೆ ಹುಡುಗರ ಎದೆ ಝಲ್ ಝಲ್ ಅನ್ನೋದು ಗ್ಯಾರಂಟಿ.
ಮಾಧುರಿ ದೀಕ್ಷಿತ್ ಸಾಮಾಜಿಕ ಮಾಧ್ಯಮಗಳ ಮೂಲಕ ತನ್ನ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ.ನಟಿ ಆಗಾಗ್ಗೆ ಪಾಕವಿಧಾನಗಳು, ಸಲಹೆಗಳು ಮತ್ತು ಕೆಲವು ಟೀಪ್ಸ್​​ ಹಂಚಿಕೊಳ್ಳುತ್ತೀರುತ್ತಾರೆ. ಈಗ ಅವರ ಹೇರ್​ ಕೇರ್​ ಹೇಗೆ ಇರುತ್ತದೆ ಎನ್ನುವ ಸಿಕ್ರೇಟ್​ ರಿವೀಲ್​ ಆಗಿದೆ.

ದಿನದಲ್ಲಿ ಸಾಕಷ್ಟು ನೀರು ಕುಡಿಯಿರಿ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಹೊಂದಿರಿ, ಇದು ಆರೋಗ್ಯಕರ ಕೂದಲಿಗೆ ಬಹಳಷ್ಟು ಕೊಡುಗೆ ನೀಡುತ್ತದೆ. ಅರ್ಧ ಕಪ್ ತೆಂಗಿನ ಎಣ್ಣೆ, 15-20 ಕರಿಬೇವಿನ ಎಲೆಗಳು, 1 ಟೀ ಚಮಚ ಮೆಂತ್ಯದ  ಬೀಜಗಳು  ಹಾಗೂ 1 ಸಣ್ಣ ತುರಿದ ಈರುಳ್ಳಿ ಇವುಗಳನ್ನು ಎಲ್ಲವನ್ನೂ ಮಿಕ್ಸ್​ ಮಾಡಿ ಸಣ್ಣ ಉರಿಯಲ್ಲಿ ಬೇಯಿಸಬೇಕು ಎಂದು ಎಣ್ಣೆ ಮಾಡುವ ವಿಧಾನ ರಿವೀಲ್ ಮಾಡಿದ್ದಾರೆ. ಕುದಿ ಬಂದ ನಂತರ ಅದನ್ನು ತಣ್ಣಗೆ ಮಾಡಲು ಇಡಬೇಕು. ಸಂಪೂರ್ಣವಾಗಿ ಆರಿದ ಮೇಲೆ ಒಂದು ಬಾಟಲಿಯಲ್ಲಿ ಇದನ್ನು ಶೋಧಿಸಿ ಇಟ್ಟುಕೊಳ್ಳಬೇಕು.  ಎರಡು ದಿನಗಳ ನಂತರ ಅದನ್ನು ಉಪಯೋಗಿಸ ಬೇಕಂತೆ. ಮೂರು ದಿನಕ್ಕೊಮ್ಮೆ ರಾತ್ರಿ ಇದನ್ನು ಚೆನ್ನಾಗಿ ತಲೆಗೆ ಮಸಾಜ್​ ಮಾಡಿಕೊಂಡು ಮರುದಿನ ಬೆಳಗ್ಗೆ ತಲೆ ಸ್ನಾನ ಮಾಡಬೇಕಂತೆ.

1 ಕತ್ತರಿಸಿದ ಬಾಳೆಹಣ್ಣು, 2 ಚಮಚ ಕಪ್​ ಮೊಸರು, 2 ಚಮಚ ಸ್ವಲ್ಪ ಜೇನುತುಪ್ಪ. ಎಲ್ಲವನ್ನೂ ಮಿಕ್ಸ್ ಮಾಡಿಕೊಳ್ಳಬೇಕು. ಇದನ್ನು ತಲೆಸ್ನಾನ ಮಾಡುವ 30-40 ನಿಮಿಷಗಳ ಮೊದಲು ತಲೆಗೆ ಚೆನ್ನಾಗಿ ಅಪ್ಲೈ ಮಾಡಿಕೊಳ್ಳಬೇಕು.  30-40 ನಿಮಿಷಗಳ ಬಳಿಕ ನೀವು ಬಳಸುವ ಶ್ಯಾಂಪೂವನ್ನು ಹಾಕಿ ತಲೆಗೂದಲನ್ನು ತೊಳೆದುಕೊಳ್ಳಬೇಕು. ಇದಾದ ಮೇಲೆ ಕಂಡೀಷನರ್​ ಹಾಕದೇ ಇದ್ದರೆ ಒಳ್ಳೆಯದು.  ಈ ಹೇರ್​ ಮಾಸ್ಕ್​ ಉಪಯೋಗಿಸುತ್ತಿದ್ದರೆ ಕೂದಲು ಸಾಫ್ಟ್​ ಆಗಿ ಹೊಳೆಯುತ್ತಲಿರುತ್ತದೆ.
90ರ ಕಾಲಘಟ್ಟದಲ್ಲಿ ಮಾಧುರಿ ದೀಕ್ಷಿತ್ ನಂಬರ್ ಒನ್ ನಾಯಕಿಯಾಗಿದ್ದರು. ಈಗಲೂ ಕೂಡಾ ಮಾಧುರಿ ಅವರು ದಅಎ ವರ್ಚಸ್ಸು ಹಾಗೂ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ.
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಗೆ ಚಟ್ಟ ಕಟ್ಟಿದ ಪತ್ನಿ; ಮಾಯಾಂಗನೆ ಪೊಲೀಸರ ವಶಕ್ಕೆ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 14 =
Remember me
