ಭೋಪಾಲ್​:ಪರೀಕ್ಷೆಯನ್ನು ತಪ್ಪಿಸಿಕೊಳ್ಳಲು ಮಕ್ಕಳು ಏನೆಲ್ಲ ಉಪಾಯ ಮಾಡುತ್ತಾರೆ. ಆದರೆ ಈ ವಿದ್ಯಾರ್ಥಿ ತನ್ನ ಸಂಬಂಧಿ ಪುಟ್ಟ ಬಾಲಕನನ್ನೇ ಅಪಹರಿಸಿದ.
ಮಧ್ಯಪ್ರದೇಶದ ಪಿಯು ವಿದ್ಯಾರ್ಥಿ ರಣಬೀರ್​ (18) ತನ್ನ ಸಂಬಂಧಿ 3 ವರ್ಷದ ಬಾಲಕನ್ನು ಅಪಹರಿಸಿ ಹಗ್ಗದಲ್ಲಿ ಕಟ್ಟಿ ಹಾಕಿದ್ದ. ಮಂಗಳವಾರದಿಂದ ರಾಜ್ಯದಲ್ಲಿ ಪರೀಕ್ಷೆಗಳು ಆರಂಭಗೊಂಡಿವೆ. ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ರಣಬೀರ್​ ಈ ಕೃತ್ಯ ಎಸಗಿದ್ದಾನೆ.
3 ವರ್ಷದ ಆ ಮಗು ಮಲಗಿದ್ದಾಗ ರಣಬೀರ್​ ಎತ್ತಿಕೊಂಡು ಹೋಗಿದ್ದಾನೆ. ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಬಯಲಿನಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಹತ್ತಿರದಲ್ಲೇ ಮದುವೆ ಇರುವ ಕಾರಣ ಮನೆಯಲ್ಲಿ ಕೆಲಸಗಳಿಂದ ಆ ಮಗುವಿನ ತಾಯಿಗೆ ಪುರುಸೊತ್ತು ಸಿಕ್ಕಿರಲಿಲ್ಲ. ಆಮೇಲೆ ನೆನಪಾಗಿ ಹುಡುಕಿದರೆ ಮಗು ನಾಪತ್ತೆಯಾಗಿರುವುದು ತಿಳಿದಿದೆ.
ಮಾಹಿತಿ ತಿಳಿದು ತಕ್ಷಣವೇ ಆ ಗ್ರಾಮಕ್ಕೆ ಬಂದ ಪೊಲೀಸರಿಗೆ ಮನೆಯಲ್ಲಿ ಒಂದು ನೋಟ್​ ಸಿಕ್ಕಿದೆ. ಅದರಲ್ಲಿ ಆ ಮಗು ಬಿಟ್ಟಿರುವ ಸ್ಥಳದ ಬಗ್ಗೆ ನಿರ್ದೇಶನ ನೀಡಲಾಗಿದೆ.
ನಾವು ರಣಬೀರ್​ನನ್ನು ಪ್ರಶ್ನಿಸಿದಾಗ ಸತ್ಯವನ್ನು ಬಹಿರಂಗಪಡಿಸಿದ. ಅವನು ಆ ಮಗುವನ್ನು ಬಿಟ್ಟಿದ್ದ ಸ್ಥಳಕ್ಕೆ ನಮ್ಮನ್ನು ಕರೆದೊಯ್ದನು. ಮಗು ಸುರಕ್ಷಿತವಾಗಿದ್ದು, ಪಾಲಕರಿಗೆ ಒಪ್ಪಿಸಲಾಗಿದೆ. ಅಪಹರಣಕ್ಕೆ ಸಂಬಂಧಿಸಿದಂತೆ ರಣಬೀರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್​ಪಿ ಅಸಿತ್​ ಯಾದವ್​ ತಿಳಿಸಿದ್ದಾರೆ.
ರಣಬೀರ್​ ಈಗ ಪೊಲೀಸರ ವಶದಲ್ಲಿದ್ದು ಆತನ ಇಚ್ಚೆಯಂತೆಯೇ ಹಾಗಿದೆ. ಪೊಲೀಸ್​ ಠಾಣೆಯಯಲ್ಲಿರುವುದರಿಂದ ಆತ ಪರೀಕ್ಷೆಗೆ ಗೈರಾಗಿದ್ದಾನೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 13 =
Remember me
