ಭೋಪಾಲ್​:ಡಾನ್ಸ್​ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಇಂದಿನ ಸೋಶಿಯಲ್​ ಮೀಡಿಯಾ ಜಮಾನದಲ್ಲಿ ಬಹುತೇಕರಿಗೆ ಕ್ಯಾಮೆರಾ ಮುಂದೆ ಸೊಂಟ ಬಳುಕಿಸಬೇಕೆಂಬ ಆಸೆ ಇದ್ದೇ ಇರುತ್ತದೆ. ಹಾಗಾಂತ ಸಿಕ್ಕ ಸಿಕ್ಕಲ್ಲಿ ಡಾನ್ಸ್​ ಮಾಡಬಾರದು. ಅದರಲ್ಲೂ ದೇವಸ್ಥಾನದಂತಹ ಪವಿತ್ರ ಕ್ಷೇತ್ರದಲ್ಲಿ ಸಿನಿಮಾ ಗೀತೆಗಳಿಗೆ ಡಾನ್ಸ್​ ಮಾಡಲೇಬಾರದು.
ಈ ಹಿಂದೆ ಕೆಲವರು ದೇವಸ್ಥಾನಗಳಲ್ಲಿ ಡಾನ್ಸ್​ ಮಾಡಿ ಟೀಕೆ ಒಳಗಾಗಿದ್ದನ್ನು ನೋಡಿರುತ್ತೀರಿ. ಅದೇ ರೀತಿ ಮಧ್ಯಪ್ರದೇಶದಲ್ಲಿ ಇಬ್ಬರು ಮಹಿಳೆಯರು ದೇವಸ್ಥಾನದಲ್ಲಿ ಡಾನ್ಸ್​ ಮಾಡಿ ವ್ಯಾಪಕ ಆಕ್ರೋಶವನ್ನು ಎದುರಿಸುತ್ತಿದ್ದಾರೆ. ಅಲ್ಲದೆ, ಕೆಲಸವನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.
ವಿವರಣೆಗೆ ಬರುವುದಾದರೆ, ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಲೇಶ್ವರ ದೇವಾಲಯದಲ್ಲಿ ಮಹಿಳೆಯರಿಬ್ಬರು ಡಾನ್ಸ್​ ಮಾಡಿರುವ ವಿಡಿಯೋ ವೈರಲ್​ ಆಗಿದೆ. ಆ ಮಹಿಳೆಯರು ಅದೇ ದೇವಸ್ಥಾನದಲ್ಲಿ ರಕ್ಷಣಾ ವಿಭಾಗದಲ್ಲಿ ಸೆಕ್ಯುರಿಟಿ ಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದರು. ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಬಾಲಿವುಡ್​ ಹಾಡೊಂದಕ್ಕೆ ಇಬ್ಬರು ಸೇರಿ ಡಾನ್ಸ್​ ಮಾಡಿ, ವಿಡಿಯೋ ರೆಕಾರ್ಡ್​ ಮಾಡಿದ್ದರು.
ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ ಬೆನ್ನಲ್ಲೇ ವಿಡಿಯೋ ವೈರಲ್ ಆಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪವಿತ್ರ ದೇವಸ್ಥಾನದಲ್ಲಿ ಬಾಲಿವುಡ್​ ಹಾಡಿಗೆ ಯಾರಾದರೂ ಈ ರೀತಿ ಡಾನ್ಸ್​ ಮಾಡುತ್ತಾರಾ? ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು. ಇದು ದೇವಸ್ಥಾನದ ಆಡಳಿತ ಮಂಡಳಿಯ ಗಮನಕ್ಕೆ ಬಂದಿದ್ದು, ಇಬ್ಬರು ಕೆಲಸದಿಂದ ತೆಗೆದಿದ್ದಾರೆ. ಅಲ್ಲದೆ, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ನೀಡಿದ್ದು, ಮೊಬೈಲ್​ ಫೋನ್​ ಮತ್ತು ಕ್ಯಾಮೆರಾಗಳನ್ನು ದೇವಸ್ಥಾನದ ಒಳಗಡೆ ತರುವುದನ್ನು ಆಡಳಿತ ಮಂಡಳಿ ನಿಷೇಧಿಸಿದೆ.(ಏಜೆನ್ಸೀಸ್​)
#WATCHउज्जैन के महाकाल मंदिर में एक बार फिर फिल्मी गाने पर दो महिलाओं के डांस करने का वीडियो सामने आया है। दोनों मंदिर की सुरक्षाकर्मी के रूप में तैनात थीं। सुरक्षा एजेंसी ने दोनों को बर्खास्त कर दिया है।pic.twitter.com/rHLpU52Qgx
— Hindustan (@Live_Hindustan)December 4, 2022

ಹೃದಯಾಘಾತ: ಎಎಸ್​ಬಿ ಕಾಲೇಜು ಪ್ರಾಂಶುಪಾಲ ಮಾರ್ಟಿನ್ ನಿಧನ

ಡೆತ್​ನೋಟ್​ ಬರೆದಿಟ್ಟು ಯುವಕ ನಾಪತ್ತೆ ಕೇಸ್​: ಇನ್ನೂ ಸಿಗದ ಸುಳಿವು, ಮಹಿಳಾ PSI ವಿರುದ್ಧ FIR​ ದಾಖಲು

ಪ್ರಾರ್ಥನೆ ಸಲ್ಲಿಸಿ ದೇವರ ಪಾದಕ್ಕೆ ತಲೆಯಿಟ್ಟ ವ್ಯಕ್ತಿ ಮೇಲೇಳಲೇ ಇಲ್ಲ! ದೇಗುಲದಲ್ಲೇ ಹೃದಯಾಘಾತ, ವಿಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − two =
Remember me
