ಭೋಪಾಲ್​:ಇಲ್ಲೊಬ್ಬ ಸರ್ಕಾರಿ ವೈದ್ಯ ಮಾಡಿಕೊಂಡ ಎಡವಟ್ಟು ಬಹುದೊಡ್ಡದು. ರಜೆ ಸಿಗದಿದ್ದರೂ ಮದುವೆ ಮನೆಗೆ ಹೋಗಿದ್ದಲ್ಲದೆ, ಸ್ವತಃ ವೈದ್ಯನಾಗಿದ್ದುಕೊಂಡು ವೈದ್ಯಕೀಯ ಸಿಬ್ಬಂದಿಯನ್ನೇ ಯಾಮಾರಿಸಿ, ಸಿಕ್ಕಿಬಿದ್ದಿದ್ದಾನೆ.
ಈ ವೈದ್ಯನ ಹೆಸರು ಅಭಯ್​ ರಂಜನ್​ ಸಿಂಗ್​. ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ನಡೆದ ಸಂಬಂಧಿಯೋರ್ವರ ಮದುವೆಗೆಂದು ತನ್ನ ಪತ್ನಿಯೊಂದಿಗೆ ಜೂ.23ರಂದು ಹೋಗಿದ್ದ. ಹಾಗಂತ ಅವನಿಗೆ ರಜೆ ಸಿಕ್ಕಿರಲಿಲ್ಲ. ಆದರೂ ಅದು ಹೇಗೋ ಕದ್ದುಮುಚ್ಚಿ ಹೋಗಿದ್ದವನು ಅಲ್ಲಿಂದ ಜು.1ರಂದು ವಾಪಸ್​ ಆಗಿದ್ದ.
ಮದುವೆಯಿಂದ ವಾಪಸ್​ ಬಂದವನು ಕ್ವಾರಂಟೈನ್​ ಆಗುವುದನ್ನು ಬಿಟ್ಟು ಕರ್ತವ್ಯಕ್ಕೆ ಹೋಗುತ್ತಿದ್ದ. ಆದರೆ ಒಂದೆರಡು ದಿನ ಬಿಟ್ಟು ವೈದ್ಯನ ಪತ್ನಿಯಲ್ಲಿ ಕೊವಿಡ್​-19ನ ಲಕ್ಷಣಗಳು ಕಾಣಿಸಿಕೊಳ್ಳತೊಡಗಿದವು. ಆಗ ಡಾ. ಅಭಯ್​ಗೆ ಭಯ ಶುರುವಾಯಿತು. ಬೇರೆ ದಾರಿ ಕಾಣದೆ ಪತ್ನಿಗೆ ಕೊವಿಡ್​-19 ಟೆಸ್ಟ್​ ಮಾಡಿಸಿದ. ಆದರೆ ಪತ್ನಿಯ ಹೆಸರಿನ ಬದಲಿಗೆ ತನ್ನ ಮನೆಯ ಕೆಲಸದವಳ ಹೆಸರನ್ನು ದಾಖಲೆಯಲ್ಲಿ ಬರೆಸಿದ್ದ. ಪತ್ನಿಯ ಗಂಟಲು ದ್ರವದ ಮಾದರಿಗೆ ಕೆಲಸದವಳ ಹೆಸರು, ವಿಳಾಸ ಕೊಟ್ಟಿದ್ದ.
ತಪಾಸಣಾ ವರದಿ ಕೊವಿಡ್​-19 ಪಾಸಿಟಿವ್​ ಎಂದು ಬರುತ್ತಿದ್ದಂತೆ ಆರೋಗ್ಯ ಸಿಬ್ಬಂದಿ ಸೀದಾ ವೈದ್ಯನ ಮನೆ ಕೆಲಸದವಳ ಮನೆ ವಿಳಾಸಕ್ಕೆ ಆಂಬುಲೆನ್ಸ್​ ತೆಗೆದುಕೊಂಡು ಹೋದರು. ಆಗಲೇ ವೈದ್ಯನ ಕ್ರಿಮಿನಲ್​ ಕೆಲಸ ಬೆಳಕಿಗೆ ಬಂತು.ಇದನ್ನೂ ಓದಿ:ಒಡಿಶಾ ಬ್ಯೂಟಿ ಬಗ್ಗೆ ಟ್ವೀಟ್​ ಮಾಡಿದ್ದಕ್ಕೇ ಕಿಡಿಕಾರಿದ ನೆಟ್ಟಿಗರಿಗೆ ತಿರುಗೇಟು ನೀಡಿದ ಆರ್​ಜಿವಿ!
ಇದೀಗ ಡಾ. ಅಭಯ್​ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಆತನಿಗೂ ಕರೊನಾ ದೃಢಪಟ್ಟಿದ್ದಲ್ಲದೆ, ಅವರ ಮನೆಯ ಇನ್ನಿಬ್ಬರಿಗೂ ಸೋಂಕು ತಗುಲಿದೆ. ವೈದ್ಯ ಡ್ಯೂಟಿಗೆ ತೆರಳುತ್ತಿದ್ದುದರಿಂದ ಅವನ ಸಂಪರ್ಕಕ್ಕೆ ಬಂದ 33 ಜನರನ್ನು ಐಸೋಲೇಟ್​ ಮಾಡಲಾಗಿದೆ.ವೈದ್ಯನ ಫ್ಯಾಮಿಲಿ ಮದುವೆಗೆಂದು ಹೋಗಿದ್ದ ಸ್ಥಳ ಕೊವಿಡ್​-19 ಕಂಟೇನ್​ಮೆಂಟ್ ಝೋನ್​ ಆಗಿತ್ತು. ಅಲ್ಲಿಂದ ಬಂದ ಮೇಲೆ ಅವರು ಕ್ವಾರಂಟೈನ್ ಆಗಬೇಕಿತ್ತು. ಆದರೆ ತನ್ನ ಪತ್ನಿಗೆ ಕೊವಿಡ್​-19 ಬಂದರೆ ಮತ್ತೆ ತನ್ನ ಅನಧಿಕೃತ ರಜೆಯ ಗುಟ್ಟು ಬೆಳಕಿಗೆ ಬರುತ್ತದೆ ಎಂದು ಈ ಐಡಿಯಾ ಮಾಡಿದ್ದ ವೈದ್ಯ. ಈಗ ಆತನ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ. ಕೊವಿಡ್​-19ನಿಂದ ಅವರು ಚೇತರಿಸಿಕೊಂಡ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ಪತಿಯ ಅಗಲಿಕೆ ಬೆನ್ನಲ್ಲೇ ಪೋಷಕರು ಮಾಡಿದ ನಿರ್ಧಾರಕ್ಕೆ ಬೇಸತ್ತು ಗೃಹಿಣಿ ನೇಣಿಗೆ ಶರಣು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fourteen − 4 =
Remember me
