ಭೋಪಾಲ್​:ಸಾಫ್ಟ್​ವೇರ್​ ಇಂಜಿನಿಯರ್​ ಓರ್ವ ಐದೇ ದಿನದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾಗಿ ಇಬ್ಬರಿಗೂ ಕೈಕೊಟ್ಟು ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಆರೋಪಿಯನ್ನು ನವೀನ್​ ಪಾಂಚಾಲ್ (26)​ ಎಂದು ಗುರುತಿಸಲಾಗಿದೆ. ಈತ ಇಂದೋರ್​ನ ಮುಸಾಖೇದಿ ಏರಿಯಾ ನಿವಾಸಿ. ಡಿಸೆಂಬರ್​ 2ರಂದು ಖಾಂದ್ವಾ ಮೂಲದ ಮಹಿಳೆಯೊಬ್ಬಳನ್ನು ಮದುವೆಯಾಗಿದ್ದು, ಬಳಿಕ ಡಿ. 7ರಂದು ಇಂದೋರ್​ನ ಮೌ ಏರಿಯಾದ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿ ಇದೀಗ ಪರಾರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಮೊಬೈಲ್​ ರಿಪೇರಿ ಮಾಡಿಸಿಕೊಳ್ಳುವ ನೆಪದಲ್ಲಿ ಬಂದವಳು ಬಟ್ಟೆ ಬಿಚ್ಚಿಸಿ ಬೆತ್ತಲೆ ವಿಡಿಯೋ ಮಾಡಿದ್ಳು!
ಮೊದಲನೇ ಮದುವೆ ಕತೆನಾಲ್ಕು ತಿಂಗಳ ಹಿಂದೆಯೇ ನವೀನ್​ ಕುಟುಂಬ ಖಾಂದ್ವಾ ಮೂಲದ ಮಹಿಳೆಯೊಂದಿಗೆ ನಿಶ್ಚಯ ಮಾಡಿದ್ದರಂತೆ. ನಿಗದಿಯಂತೆ ಮದುವೆ ಸಮಾಜ, ಕುಟುಂಬ ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ಡಿಸೆಂಬರ್​ 2ರಂದು ನಡೆದಿದೆ. ವಧು ಪೂಜಾ (25) ತಂದೆ ಮೋಹನ್​ ಪಾಂಚಾಲ್​ ಭಾರಿ ವರದಕ್ಷಿಣೆಯೊಂದಿಗೆ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದಾರೆ. ಮದುವೆಯಾಗಿ ಹನಿಮೂನ್​ ಮುಗಿದ ಬೆನ್ನಲ್ಲೇ ಭೋಪಾಲ್​ನಲ್ಲಿ ಸ್ವಲ್ಪ ಕೆಲಸ ಇದೆ ಎಂದು ಹೇಳಿ ಹೋಗಿದ್ದಾನೆ. ಬಳಿಕ ಫೋನ್​ ಮಾಡಿ ಇನ್ನು ಕೆಲವೇ ದಿನ ನಾನೇ ಬಂದು ನಿನ್ನನ್ನು ಕರೆದುಕೊಂಡು ಹೋಗುವುದಾಗಿ ನವೀನ್​ ನಂಬಿಸಿದ್ದಾನೆ.
ಎರಡನೇ ಮದುವೆ ಕತೆಮೊದಲನೇ ಹೆಂಡತಿಗೆ ಹೇಳಿ ಬಂದ ನವೀನ್​ ಇತ್ತ ಉಮಾರಿ ಮೌನ ಗಣೇಶ್​ಪುರಿ ಕಾಲನಿಯ ನಂದಿತಾ ಜಾಧವ್​ ಎಂಬಾಕೆಯನ್ನು ವಿವಾಹವಾಗಲು ತಯಾರಿ ನಡೆಸಿ, ಡಿ.7ರಂದು ಮದುವೆಯು ಆಗಿದ್ದಾನೆ. ಈ ಕಾರ್ಯಕ್ರಮಕ್ಕೆ ನವೀನ್ ತಂದೆ ಹಾಜರಿರಲಿಲ್ಲ. ಸ್ನೇಹಿತರನ್ನು ಮದುವೆಗೆ ಕರೆದೊಯ್ದು ತನ್ನ ಸಂಬಂಧಿಕರು ಎಂದು ಹೇಳಿಕೊಂಡಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ವಿವಾಹಿತ ಕಾನ್ಸ್​ಟೇಬಲ್​ ಜತೆ ಮಹಿಳಾ ಎಸ್​ಐ ಲವ್ವಿಡವ್ವಿ: ಏನೇ ಮಾಡಿದ್ರೂ ಸಂಬಂಧ ಮಾತ್ರ ಬಿಡ್ತಿಲ್ಲ!
ನವೀನ್​ ಬಂಡವಾಲ ಬಯಲಾಗಿದ್ಹೇಗೆ?ಕಾಕತಾಳೀಯ ಎಂಬಂತೆ ಮೊದಲು ನಡೆದಿದ್ದ ಮದುವೆಯಲ್ಲಿ ಪಾಲ್ಗೊಂಡಿದ್ದ ಕೆಲ ಮಂದಿಯನ್ನು ಎರಡನೇ ಮದುವೆಗೂ ಆಹ್ವಾನಿಸಲಾಗಿತ್ತು. ನವೀನ್​ ಎರಡನೇ ಮದುವೆ ವೇಳೆ ವೇದಿಕೆಗೆ ಬರುತ್ತಿದ್ದಂತೆ ಆತನನ್ನು ನೋಡಿ ಮೊದಲ ಹೆಂಡತಿಯ ಮನೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಹೊಸ ಪತ್ನಿಯ ಜತೆಗಿನ ಫೋಟೋ ತೆಗೆದು ವಾಟ್ಸ್​ಆ್ಯಪ್​ ಮಾಡಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಮೊದಲನೇ ಹೆಂಡತಿ ಮನೆಯವರು ದೂರು ನೀಡಿದ್ದು, ಈ ಬಗ್ಗೆ ತಿಳಿಯುತ್ತಿದ್ದಂತೆ ಆರೋಪಿ ನವೀನ್​ ಇದೀಗ ಪರಾರಿಯಾಗಿದ್ದಾನೆ. ಆತನಿಗೆ ಹುಡುಕಾಟವೂ ನಡೆಯುತ್ತಿದೆ.(ಏಜೆನ್ಸೀಸ್​)
ಶೌಚಕ್ಕೆಂದು ಹೊರಹೋದ ಸರ್ಕಾರಿ ಮಹಿಳಾ ಉದ್ಯೋಗಿ ದುರಂತ ಸಾವು: ಸರ್ಕಾರಕ್ಕೆ ಆಯೋಗದ ಶಾಕ್​!

2ನೇ ಪತ್ನಿ ಜತೆ ಪ್ರಸ್ತಕ್ಕೆ ಮುಂದಾಗಿದ್ದವನಿಗೆ ಮೊದಲನೇ ಹೆಂಡತಿ ಕೊಟ್ಟಳು ಬಿಗ್​ ಶಾಕ್​..!

ಗಂಡನ ರಾಸಲೀಲೆ ವೃತ್ತಾಂತ ಬಿಚ್ಚಿಟ್ಟ ಹೆಂಡತಿ! ಈತನ ಚಾನ್ಸ್​ ಆಸೆಗೆ ಬಲಿಯಾದ್ರೆ ಬದುಕೇ ನರಕ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + six =
Remember me
