ಗ್ವಾಲಿಯಾರ್:ಪತಿ ಕಪ್ಪಾಗಿದ್ದಾನೆ ಎಂದು ಹೆಂಡತಿಯೊಬ್ಬಳು ಆತನನ್ನೇ ಬಿಟ್ಟು ಹೋಗಿರುವ ಘಟನೆ ಗ್ವಾಲಿಯರ್ ನಗರದಲ್ಲಿ ನಡೆದಿದೆ.
ಇದನ್ನೂ ಓದಿ:ತಮಿಳುನಾಡಿಗೆ ನಿತ್ಯ 1ಟಿಎಂಸಿ ಅಡಿ ಕಾವೇರಿ ನೀರು ಹರಿಸಲು CWRC ಶಿಫಾರಸು
ಹೌದು…ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿ 24 ವರ್ಷದ ವ್ಯಕ್ತಿಯೊಬ್ಬ ತಾನು ಕಪ್ಪಾಗಿದ್ದೇನೆಂದು ಪತ್ನಿ ತನ್ನನ್ನು ತನ್ನನ್ನು ತೊರೆದಿದ್ದಾಳೆ ಎಂದು ಆರೋಪಿಸಿದ್ದಾನೆ. ತನ್ನ ವಿರುದ್ಧ ಕಿರುಕುಳದ ಸುಳ್ಳು ದೂರನ್ನು ದಾಖಲಿಸಿದ್ದಾಳೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಆ ವ್ಯಕ್ತಿ ಪತ್ನಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಶನಿವಾರ ಇಬ್ಬರನ್ನೂ ಪೊಲೀಸರು ಕೌನ್ಸೆಲಿಂಗ್‌ಗೆ ಕರೆಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ನಗರದ ವಿಕ್ಕಿ ಫ್ಯಾಕ್ಟರಿ ನಿವಾಸಿಯಾದ 14 ತಿಂಗಳ ಹಿಂದೆ ಯುವತಿಯನ್ನು ವಿವಾಹವಾಗಿದ್ದರು. ಆದರೆ ಮದುವೆಯ ನಂತರ, ಅವನ ಹೆಂಡತಿ ಅವನಿಗೆ ತನ್ನ ಬಣ್ಣವನ್ನು ಉಲ್ಲೇಖಿಸಿ ತೊಂದರೆ ಕೊಡುವುದು, ನಿಂದಿಸುವುದು ಮಾಡುತ್ತಿದ್ದಳಂತೆ. 10 ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಪತ್ನಿ ಮಗುವನ್ನು ಬಿಟ್ಟು ತನ್ನ ತವರು ಮನೆಗೆ ತೆರಳಿದ್ದಾಳೆ ಎಂದು ಪತಿ ಆರೋಪಿಸಿದ್ದಾರೆ.
ಕರೆತರಲು ಅವಳ ತವರು ಮನೆಗೆ ಹೋದಾಗ ನನ್ನ ಬಣ್ಣವನ್ನು ಉಲ್ಲೇಖಿಸಿ ಆಕೆ ಕೆಟ್ಟದಾಗಿ ಕಾಮೆಂಟ್​ ಮಾಡಿ ಹೀಯಾಳಿಸಿದ್ದಾಳೆ. ನನ್ನ ಜೊತೆ ಹಿಂತಿರುಗಳು ನಿರಾಕರಿಸಿದಳು. ಬಳಿಕ ಮಹಿಳಾ ಪೊಲೀಸ್​ ಠಾಣೆಯಲ್ಲಿ ಕಿರುಕುಳ ದೂರು ದಾಖಲಿಸಿದ್ದಾಳೆ ಎಂದು ಪತಿ ಆರೋಪಿಸಿದ್ದಾರೆ.
ಆಗ ಪೊಲೀಸ್ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಇಬ್ಬರನ್ನೂ ಕೌನ್ಸೆಲಿಂಗ್‌ಗೆ ಕರೆದಿದ್ದಾರೆ. ಈ ಇಬ್ಬರ ಜೊತೆಗೆ ಜುಲೈ 13ರಂದು ಕೌನ್ಸೆಲಿಂಗ್‌ಗೆ ಮಾಡಲಿದ್ದೇವೆ. ಇದಾದ ನಂತರವೇ ಈ ಕುರಿತು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಅಂತಾ ಅಧಿಕಾರಿ ಕಿರಣ್ ಅಹಿರ್ವಾರ್ ತಿಳಿಸಿದ್ದಾರೆ.
ಕಾಶ್ಮೀರದ ಕಥುವಾದಲ್ಲಿ ಉಗ್ರರ ಹೊಂಚು ದಾಳಿ: 24 ಮಂದಿ ವಶಕ್ಕೆ, ವಿಚಾರಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + thirteen =
Remember me
