ಮಧ್ಯಪ್ರದೇಶ:ಈ ಖತರ್ನಾಕ್​ ಯುವಕನ ವಯಸ್ಸಿನ್ನೂ 24. ಇಬ್ಬರ ಹೆಂಡಿರ ಗಂಡನಾದ ಈತನ ಹಣ ಸಂಪಾದನೆಯ ಮಾರ್ಗ ಕೇಳಿದ್ರೆ ಅಸಹ್ಯ ಅನ್ನಿಸುತ್ತೆ. ಮನೆಯಲ್ಲೇ ಇದ್ದರೂ ಲಕ್ಷಗಟ್ಟಲ್ಲೇ ಹಣ ಮಾಡಲು ತನ್ನ ಪತ್ನಿಯರೊಂದಿಗಿನ ಕಾಮದಾಟದ ಲೈವ್​ ದೃಶ್ಯವನ್ನೇ ಮಾರಾಟಕ್ಕಿಟ್ಟಿದ್ದ!
ಪತ್ನಿಯರೊಂದಿಗೆ ಸೆಕ್ಸ್​ ವಿಡಿಯೋವನ್ನೇ ಬಂಡವಾಳ ಮಾಡಿಕೊಂಡು ಹಣ ಸಂಪಾದಿಸುತ್ತಿದ್ದ ಆರೋಪಿ ಹೆಸರು ವಿದಿಶಾ ಜಿಲ್ಲೆಯ ಚರಣ್‍ಜೀತ್. ಹತ್ತನೇ ತರಗತಿವರೆಗೆ ಓದಿಕೊಂಡಿರುವ ಈತ, ವಿವಿಧ ಆ್ಯಪ್‍ಗಳ ಮೂಲಕ ಸೆಕ್ಸ್​ ಲೈವ್ ಶೋ ನಡೆಸುತ್ತಿದ್ದ. ಈ ದೃಶ್ಯವನ್ನು ಲೈವ್​ ಆಗಿ ವೀಕ್ಷಿಸಲು ಗ್ರಾಹಕರಿಗೆ 100 ರೂ. ನಿಂದ 1 ಸಾವಿರದ ವರೆಗೂ ದರ ನಿಗದಿ ಮಾಡಿದ್ದ.
ಆರೋಪಿ ಚರಣ್​ಜೀತ್​ನ ಮೊದಲ ಪತ್ನಿ ಬೆಂಗಳೂರು ಮೂಲದವರು ಎನ್ನಲಾಗಿದೆ. 2ನೇ ಪತ್ನಿ ಉತ್ತರ ಪ್ರದೇಶದವರು. 2ನೇ ಪತ್ನಿಯೇ ಇದೀಗ ಗಂಡನ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ಈತನ ನೀಚತನವನ್ನು ಬಯಲು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆದ ಯುವತಿನ್ನು ಪುಸಲಾಯಿಸಿ, ಮೊದಲ ಮದುವೆ ವಿಚಾರ ಮುಚ್ಚಿಟ್ಟು 2ನೇ ಮದ್ವೆಯಾಗಿದ್ದ. 2ನೇ ಪತ್ನಿ 7 ತಿಂಗಳ ಗರ್ಭಿಣಿ.
ಪತಿಯ ಕೃತ್ಯಕ್ಕೆ ಬೇಸತ್ತ 2ನೇ ಪತ್ನಿ, ಅ.21ರಂದು ವಿಧಿಶಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮದುವೆ ಬಳಿಕ ಖಾಸಗಿ ವೀಡಿಯೋ ಸೆರೆ ಹಿಡಿದು ಪತಿ ಚರಣ್, ಬ್ಲ್ಯಾಕ್​ಮೇಲ್ ಮಾಡುತ್ತ ಆ್ಯಪ್​ನಲ್ಲಿ ಲೈಂಗಿಕ ಕ್ರಿಯೆ ನೀಡುವಂತೆ ಕಿರುಕುಳ ನೀಡುತ್ತಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನ್ನ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯ ಮೊಬೈಲ್, ಬ್ಯಾಂಕ್ ವಿವರ, 12 ಲಕ್ಷ ರೂ. ಮೌಲ್ಯದ ಆಭರಣವನ್ನು ಜಪ್ತಿ ಮಾಡಲಾಗಿದೆ. ಆರೋಪಿಯ ಕೃತ್ಯದ ಬಗ್ಗೆ ಮೊದಲ ಪತ್ನಿ ಪೊಲೀಸರಿಗೆ ಯಾವುದೇ ದೂರು ನೀಡಲ್ಲ.
ಚರಣ್​ಜೀತ್​ ಹಣ ಸಂಪಾದನೆ ಹೀಗಿತ್ತು: ಆರೋಪಿ ಚರಣ್​ಜೀತ್​, ಆ್ಯಪ್‍ಗಳಲ್ಲಿ ಡಿಪಿ ಸೆಟ್ ಮಾಡುತ್ತಿದ್ದ. ಅದನ್ನು ಕ್ಲಿಕ್ ಮಾಡಿದ ತಕ್ಷಣ ವೀಕ್ಷಕರ ಮೊಬೈಲ್‍ಗೆ ಪ್ರತ್ಯೇಕ ಸಂದೇಶ ಹೋಗುತಿತ್ತು. ಅಲ್ಲಿ 100 ರೂ.ಗೆ ಡೆಮೋ ನೋಡಬಹುದಿತ್ತು. ಲೈವ್ ನೋಡಲು 500 ರೂ., 700 ರೂ., 1000 ರೂ. ಪಾವತಿಸಬೇಕಿತ್ತು. ಮುಖ ಕಾಣಿಸದೆ ಹಾಗೂ ಕಾಣಿಸುವಂತೆಯೂ ವಿಡಿಯೋ ನೋಡಲು ಗ್ರಾಹಕರಿಗೆ ಅವಕಾಶವಿತ್ತು. ಈ ದಂಧೆಯಲ್ಲಿ ಆರೋಪಿ ಪ್ರತಿದಿನ 3 ರಿಂದ 4 ಸಾವಿರ ರೂ. ಗಳಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೊದಲ ಪತ್ನಿ ಪತ್ತೆಯಾದ ಬಳಿಕ ಆರೋಪಿಯ ಮತ್ತಷ್ಟು ದುಷ್ಕೃತ್ಯ ಬಯಲಾಗಲಿದೆ.
ಸಬ್​ ಇನ್​ಸ್ಪೆಕ್ಟರ್​ರಿಂದಲೇ ಸರಣಿ ಲೈಂಗಿಕ ಕಿರುಕುಳ; ನ್ಯಾಯಾಂಗ ಬಂಧನದಲ್ಲಿ ಎಸ್​ಐ…

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:four + 7 =
Remember me
