ಮೊರೆನಾ:ದುಬೈನಿಂದ ಮಧ್ಯಪ್ರದೇಶದ ಮೊರೆನಾಕ್ಕೆ ಮಾ.17ರಂದು ಆಗಮಿಸಿದ್ದ ವ್ಯಕ್ತಿ ಹಾಗೂ ಅವನ ಸಂಬಂಧಿಕರು, ಕುಟುಂಬದವರು ಸೇರಿ ಒಟ್ಟು 11 ಮಂದಿಯಲ್ಲಿ ಕರೊನಾ ವೈರಸ್​ ಪತ್ತೆಯಾಗಿದೆ. ಇವನಿಂದಾಗಿ 1500ಕ್ಕೂ ಹೆಚ್ಚು ಜನ ಇದೀಗ ಅಪಾಯದಲ್ಲಿದ್ದಾರೆ.
ಸುರೇಶ್​ ಎಂಬಾತ ದುಬೈನಲ್ಲಿ ವೇಟರ್​ ಕೆಲಸ ಮಾಡುತ್ತಿದ್ದ. ಮಾ.17ರಂದು ಊರಿಗೆ ಬಂದಿದ್ದ. ಹಾಗೇ ಮಾ.20ರಂದು ತನ್ನ ತಾಯಿಯ ತಿಥಿ ನಿಮಿತ್ತ ಸುಮಾರು 1500 ಜನರನ್ನು ಕರೆದು ಊಟ ಹಾಕಿದ್ದ. ಮಾ.25ರಿಂದ ಆತನ ಆರೋಗ್ಯದಲ್ಲಿ ಏರುಪೇರಾಯಿತು. ಆದರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡದ ಆತ ನಾಲ್ಕು ದಿನ ತಡವಾಗಿ ಹೋಗಿ ತಪಾಸಣೆ ಮಾಡಿಸಿಕೊಂಡಿದ್ದಾನೆ.
ಕರೊನಾ ಸೋಂಕು ಇರುವುದು ದೃಢಪಡುತ್ತಿದ್ದಂತೆ ಆ ವ್ಯಕ್ತಿಯ ಪತ್ನಿ, ಕುಟುಂಬದವರು, ಹತ್ತಿರದ ಒಟ್ಟು 23 ಜನರ ರಕ್ತ ಮತ್ತು ಗಂಟಲಿನ ಮಾದರಿಯನ್ನು ತಪಾಸಣೆಗೆ ಕಳಿಸಲಾಗಿತ್ತು. ಪತ್ನಿ ಸೇರಿ ಒಟ್ಟು 11 ಮಂದಿಯಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ.ಕರೊನಾ ದೃಢಪಟ್ಟವರನ್ನು ಆಸ್ಪತ್ರೆಯಲ್ಲಿಯೇ ಐಸೋಲೇಟ್​ ಮಾಡಲಾಗಿದೆ. ವರದಿ ನೆಗೆಟಿವ್​ ಎಂದು ತೋರಿಸಿದವರನ್ನೂ ಅವರ ಮನೆಯಲ್ಲಿಯೇ 14ದಿನ ಕಡ್ಡಾಯವಾಗಿ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ ಎಂದು ಮೊರೆನಾ ಜಿಲ್ಲಾ ವೈದ್ಯಕೀಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.
ದುಬೈನಿಂದ ಬರುವುದಕ್ಕೆ ಮೊದಲು ತಪಾಸಣೆ ಮಾಡಿಸಿಕೊಂಡಿದ್ದೆ. ಆದರೆ ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲ. ಭಾರತಕ್ಕೆ ವಾಪಸಾಗುವ ಎರಡು ದಿನಗಳ ಮೊದಲು ನನ್ನ ಪತ್ನಿ ಅನಾರೋಗ್ಯಕ್ಕೀಡಾಗಿದ್ದಳು ಎಂದು ಆತ ಹೇಳಿದ್ದಾನೆ. ಆತ 1500 ಜನರಿಗೆ ಊಟ ಹಾಕಿಸಿದ್ದರಿಂದ ಈಗ ಆತಂಕ ವ್ಯಕ್ತವಾಗಿದೆ. ಸದ್ಯ ಆತನ ಮನೆ ಇರುವ, ಕಾರ್ಯಕ್ರಮ ನಡೆದ ಕಾಲನಿಯನ್ನು ಸಂಪೂರ್ಣವಾಗಿ ಬಂದ್​ ಮಾಡಲಾಗಿದೆ.
ಸದ್ಯ ಮಧ್ಯಪ್ರದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ 154ಕ್ಕೆ ಏರಿದೆ. ಭಾರತದಲ್ಲಿ ಒಟ್ಟು 2547 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 62 ಮಂದಿ ಮೃತಪಟ್ಟಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + fifteen =
Remember me
