ಬೋಫಾಲ್​​:ಪರ್ಮಿಶನ್ ಇಲ್ದೆ ಟೊಮ್ಯಾಟೋವನ್ನು ಅಡುಗೆಗೆ ಹಾಕಿದ್ದಕ್ಕೆ ಮಹಿಳೆ ತನ್ನ ಗಂಡನ ಜತೆಗೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದಳು. ಇದೀಗ ಒಂದು ದಿನದ ನಂತರ ಮಧ್ಯ ಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ, ಪತಿ ಮತ್ತೆ ಅರ್ಧ ಕೆಜಿ ಟೊಮ್ಯಾಟೋ ಪತ್ನಿಗೆ ಕೊಟ್ಟು ಮತ್ತೆ ಒಂದಾಗಿದ್ದಾರೆ.
ಟಿಫಿನ್ ಸರ್ವಿಸ್ ನಡೆಸುತ್ತಿರುವ ಸಂಜೀವ್ ಬರ್ಮನ್, ತನ್ನ ಹೆಂಡತಿಯನ್ನು ಕೇಳದೆ ಅಡುಗೆಗೆ ಎರಡು ಟೊಮ್ಯಾಟೋಗಳನ್ನು ಬಳಸಿದ್ದರಿಂದ ದಂಪತಿ ನಡುವೆ ಭಾರಿ ಜಗಳವಾಗಿದೆ. ಟೊಮ್ಯಾಟೋ ಬಳಸಿದ ವಿಚಾರವಾಗಿ ಕೋಪಗೊಂಡ ಮಹಿಳೆ ತನ್ನ ಚಿಕ್ಕ ಮಗುವನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದಳು.
ಇದನ್ನೂ ಓದಿ:ಮಾನ್ಸೂನ್ ಸಮಯದಲ್ಲಿ ಫಿಟ್ ಆಗಿರಲು 5 ಸಲಹೆಗಳು ಇಂತಿವೆ…
ಜಗಳ ಅತಿರೇಕಕ್ಕೆ ತಿರುಗಿದ್ದು, ಪತ್ನಿ ಮನೆ ಬಿಟ್ಟು ಹೋಗಿದ್ದಾಳೆ. ಪತ್ನಿಯನ್ನು ಹುಡುಕಿ ಹುಡುಕಿ ಸಾಕಾದ ಪತಿ ಪೊಲೀಸರ ಮೊರೆ ಹೋಗಿದ್ದು, ಮೂರು ದಿನದಿಂದ ಪತ್ನಿ ಮಗಳ ಜತೆ ಮಾತನಾಡಿಲ್ಲ. ದಯವಿಟ್ಟು ಅವರನ್ನು ಹುಡುಕಿಕೊಡಿ ಎಂದು ಕಣ್ಣೀರಿಟ್ಟಿದ್ದಾರೆ. ಆದಷ್ಟು ಬೇಗ ಅವರನ್ನು ಹುಡುಕಿ ಮನೆಗೆ ಕಳುಹಿಸುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ್ದರು. ಆದರೆ ಇದೀಗ ದಂಪತಿ ಮತ್ತೆ ಒಂದಾಗಿದ್ದಾರೆ.
ಇದನ್ನೂ ಓದಿ:ಹನುಮಾನ್ ಚಾಲೀಸಾ ಪಠಿಸಿದ ಕಳ್ಳ 10 ರೂ.ಕಾಣಿಕೆ ನೀಡಿ ದೇವಸ್ಥಾನದಿಂದ 5000 ರೂ. ದೋಚಿದ!
ತನ್ನ ತಪ್ಪಿನ ಪ್ರಾಯಶ್ಚಿತ್ತವಾಗಿ, ಸಂಜೀವ್ ವರ್ಮಾ ತಮ್ಮ ಪತ್ನಿ ಆರತಿಗೆ ಅರ್ಧ ಕಿಲೋ ಟೊಮ್ಯಾಟೋವನ್ನು ಧನಪುರಿ ಪೊಲೀಸ್ ಠಾಣೆಯಲ್ಲಿ ಉಡುಗೊರೆಯಾಗಿ ನೀಡಿದರು. ಮತ್ತು ಪತ್ನಿಯ ಅನುಮತಿ ಇಲ್ಲದೆ ಅವುಗಳನ್ನು ಅಡುಗೆ ಬಳಸಲ್ಲ ಎಂದೂ ಪ್ರತಿಜ್ಞೆ ಮಾಡಿದ್ದಾರೆ. ಧನ್‌ಪುರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ದಂಪತಿಗೆ ಒಟ್ಟಿಗೆ ಇರುವಂತೆ ಸಲಹೆ ನೀಡಿದರು ಮತ್ತು ಪರಸ್ಪರರ ಸಣ್ಣ ತಪ್ಪುಗಳನ್ನು ನಿರ್ಲಕ್ಷಿಸುವಂತೆ ಬುದ್ಧಿವಾದ ಹೇಳಿ ಕಳುಹಿಸಿಕೊಟ್ಟಿದ್ದಾರೆ.
ಪತ್ನಿ ಪರ್ಮಿಶನ್ ಇಲ್ದೆ ಅಡುಗೆಗೆ 2 ಟೊಮ್ಯಾಟೋ ಬಳಸಿದ ಪತಿ; ಮನೆ ಬಿಟ್ಟು ಹೋದ ಮಹಿಳೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × 1 =
Remember me
