ಮಧ್ಯಪ್ರದೇಶ:ರಾಜ್‌ಗಢ ಪ್ರದೇಶದಲ್ಲಿ ಸುಮಾರು 20 ಜನರ ಮೇಲೆ ದಾಳಿ ನಡೆಸಿ ಭಯ ಭೀತಿ ವಾತಾವರಣ ಸೃಷ್ಟಿ ಮಾಡಿದ್ದ, ಕೋತಿಯನ್ನು ಡ್ರೋನ್‌ ಸಹಾಯದಿಂದ ಸೆರೆಹಿಡಿಯಲಾಗಿದೆ.
ಕಳೆದ ಹದಿನೈದು ದಿನಗಳಲ್ಲಿ ಕೋತಿ 8 ಜನ ಮಕ್ಕಳು ಸೇರಿದಂತೆ 20 ಜನರ ಮೇಲೆ ದಾಳಿ ನಡೆಸಿತ್ತು. ಈ ಕೋತಿ, ಮನೆ ಛಾವಣಿಗಳು ಮತ್ತು ಕಿಟಕಿಯ ಸರಳುಗಳ ಮೇಲೆ ಕುಳಿತು ಇದ್ದಕ್ಕಿದ್ದಂತೆ ಜನರ ಮೇಲೆ ಹಾರಿ ದಾಳಿ ಮಾಡುತ್ತಿತ್ತು.
ನಗರದ ಜನರಲ್ಲಿ ಆತಂಕ ಮನೆ ಮಾಡಿದೆ. ಕೋತಿಯನ್ನು ಹಿಡಿಯಲು ಪಾಲಿಕೆ ಹಾಗೂ ಆಡಳಿತ ಮಂಡಳಿ ಶತಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ. ಆದ್ದರಿಂದ, ಪ್ರಯತ್ನಗಳು ವಿಫಲಗೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳು ಅದನ್ನು ಹಿಡಿದು ಕೊಟ್ಟವರಿಗೆ 21 ಸಾವಿರ ರೂಪಾಯಿಗಳ ನಗದು ಬಹುಮಾನವನ್ನು ಪುರಸಭೆ ಅಧ್ಯಕ್ಷ ವಿನೋದ್ ಸಾಹು ಘೋಷಣೆ ಮಾಡಿದ್ದರು.
ಇದನ್ನೂ ಓದಿ:ಬಾಡಿಗೆದಾರರ ಕಿರುಕುಳ ಸಹಿಸದೆ ಪ್ರಾಣ ಬಿಟ್ಟ ಮನೆ ಒಡತಿ; ಮಗಳ ಸಾವಿನ ಸುದ್ದಿ ಕೇಳಿ ಕೊನೆಯುಸಿರೆಳೆದ ತಾಯಿ!
ನಿನ್ನೆ ಸಂಜೆ, ಉಜ್ಜಯಿನಿಯಿಂದ ಕರೆಸಲ್ಪಟ್ಟ ರಕ್ಷಣಾ ತಂಡ, ಸ್ಥಳೀಯ ಅಧಿಕಾರಿಗಳು ಮತ್ತು ಸ್ಥಳೀಯ ನಿವಾಸಿಗಳೊಂದಿಗೆ ಸೇರಿಕೊಂಡು ಕೋತಿಯನ್ನು ಪತ್ತೆ ಮಾಡಲು ಡ್ರೋನ್ ಬಳಸಿದ ತಂಡ ಈ ಕೋತಿಯನ್ನು ಸೆರೆ ಹಿಡಿದಿದೆ. ಕಾರ್ಯಾಚರಣೆ ನಡೆದ ಸ್ಥಳದ ದೃಶ್ಯಗಳು ವೈರಲ್ ಆಗಿದೆ.
ಈ ಕುರಿತಾಗಿ ಮಾತನಾಡಿದ ಅರಣ್ಯಾಧಿಕಾರಿ ಗೌರವ್ ಗುಪ್ತಾ, ಕಳೆದ ಎರಡು ವಾರಗಳಿಂದ ಕೋತಿಯನ್ನು ಹಿಡಿಯಲು ಪ್ರಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಉಜ್ಜಯಿನಿ ತಂಡವು ರಾಜ್‌ಗಢಕ್ಕೆ ಧಾವಿಸಿದರು. ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆಯ ನಂತರ ನಾವು ಕೋತಿಯನ್ನು ಹಿಡಿದಿದ್ದೇವೆ. ಸೆರೆಹಿಡಿಯಲಾದ ಕೋತಿಯನ್ನು ದಟ್ಟವಾದ ಅರಣ್ಯ ಪ್ರದೇಶದಲ್ಲಿ ಬಿಡಲಾಗುತ್ತದೆ ಇದರಿಂದ ಅದು ಜನರಿಗೆ ಹಾನಿ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ 24 ಗಂಟೆ ಹೋಟೆಲ್ ತೆರೆಯಲು ಅವಕಾಶ ಕೊಡಿ: ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − eight =
Remember me
