ಜಬಲ್ಪುರ:ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ ಸಿಕ್ಕಿಬೀಳುತ್ತೇನೆ ಎಂಬ ಭಯದಲ್ಲಿ ಲಂಚವಾಗಿ ಪಡೆದಿದ್ದ 5 ಸಾವಿರ ರೂ. ಹಣವನ್ನು ಕಂದಾಯ ಅಧಿಕಾರಿಯೊಬ್ಬ ನುಂಗಿ ನೀರು ಕುಡಿದಿರುವ ಘಟನೆ ಮಧ್ಯಪ್ರದೇಶದ ಕತ್ನಿಯಲ್ಲಿ ನಡೆದಿದೆ.
ಈ ಘಟನೆ ಸೋಮವಾರ ನಡೆದಿದೆ. ಅಧಿಕಾರಿ ಗಜೇಂದ್ರ ಸಿಂಗ್​ ತನ್ನ ಖಾಸಗಿ ಕಚೇರಿಯಲ್ಲಿ 5 ಸಾವಿರ ರೂ. ಲಂಚ ತೆಗೆದುಕೊಳ್ಳುತ್ತಿದ್ದ ಸಂಗತಿ ಗೊತ್ತಾದ ಹಿನ್ನೆಲೆ ಮಧ್ಯಪ್ರದೇಶದ ಲೋಕಾಯುಕ್ತ ಸ್ಪೆಷಲ್​ ಪೊಲೀಸ್​ ಎಸ್ಟಾಬ್ಲಿಶ್​ಮೆಂಟ್ (ಎಸ್​ಪಿಇ) ರೆಡ್​ಹ್ಯಾಂಡ್​ ಆಗಿ ಹಿಡಿಯಲು ಬಲೆ ಬೀಸಿದ್ದರು. ಹಣ ಪಡೆಯುವಾಗ ದಾಳಿ ಮಾಡುತ್ತಿದ್ದಂತೆ ಹೆದರಿದ ಗಜೇಂದ್ರ ಸಿಂಗ್​ ಲಂಚದ ಹಣವನ್ನು ನುಂಗಿದನು ಎಂದು ಎಸ್​ಇಪಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್​ ಸಾಹು ತಿಳಿಸಿದ್ದಾರೆ.
ಇದನ್ನೂ ಓದಿ:ಚುರುಕಾದ ಗೃಹಲಕ್ಷ್ಮೀ ನೋಂದಣಿ  -92,102 ಸ್ತ್ರೀಯರಿಗೆ ಮಂಜೂರಾತಿ ಪತ್ರ -ಸೇವಾ ಕೇಂದ್ರಗಳಲ್ಲಿ ದಟ್ಟಣೆ
ಅಧಿಕಾರಿ ಗಜೇಂದ್ರ ಸಿಂಗ್, ಜಮೀನು ವಿವಾದವನ್ನು ಬಗೆಹರಿಸಲು ಬರ್ಖೇದಾ ಗ್ರಾಮದ ಚಂದನ್ ಸಿಂಗ್ ಲೋಧಿಯಿಂದ 5 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಬಳಿಕ ಚಂದನ್ ಸಿಂಗ್ ಜಬಲ್‌ಪುರದ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಲೋಕಾಯುಕ್ತರ ತಂಡ ಬಲೆ ಬೀಸಿ, ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆದರೆ ಗಜೇಂದ್ರ ಸಿಂಗ್ ಲಂಚವಾಗಿ ಪಡೆದಿದ್ದ 500 ರೂಪಾಯಿಯ 9 ನೋಟುಗಳನ್ನು ನುಂಗಿದ್ದಾನೆ.
ಈ ವೇಳೆ 7 ಸದಸ್ಯರ ಲೋಕಾಯುಕ್ತ ತಂಡ ನೋಟುಗಳನ್ನು ತೆಗೆಯಲು ಪ್ರಯತ್ನಿಸಿತು. ಆದರೆ ಸಾಧ್ಯವಾಗದಿದ್ದಾಗ ಗಜೇಂದ್ರ ಸಿಂಗ್​ನನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದರು. ನಂತರ ಹಣವನ್ನು ವಾಪಸ್​ ತೆಗೆಯಲಾಯಿತು. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.

ಈ ಸಂಬಂಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಗಜೇಂದ್ರ ಸಿಂಗ್​ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಮಹದಾಯಿಗೆ ಹುಲಿ ಅಡ್ಡಗಾಲು: ಸಂರಕ್ಷಿತ ಪ್ರದೇಶವೆಂದು ಘೋಷಿಸಲು ಗೋವಾಗೆ ಬಾಂಬೆ ಹೈಕೋರ್ಟ್ ಆದೇಶ

ಮಳೆ ಅವಘಡಗಳಿಗೆ ಮೂವರು ಬಲಿ: ರಾಜ್ಯದಲ್ಲಿ ತೀವ್ರಗೊಂಡ ಮಳೆ ಆರ್ಭಟ; ಅಪಾಯಮಟ್ಟ ಮೀರಿ ಉಕ್ಕಿ ಹರಿಯುತ್ತಿರುವ ನದಿಗಳು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 − nine =
Remember me
