ಭೋಪಾಲ್:ಅನ್ಯಧರ್ಮೀಯ ವ್ಯಕ್ತಿಯನ್ನು ಮದುವೆಯಾದ ಕಾರಣಕ್ಕೆ ಅಥವಾ ಇನ್ಯಾವುದೇ ಮೋಸದ ವಿಧಾನಗಳಿಂದ ಮತಾಂತರ ಮಾಡುವುದನ್ನು ತಡೆಗಟ್ಟುವ ಕಾನೂನನ್ನು ಮಧ್ಯಪ್ರದೇಶ ಸರ್ಕಾರವು ಜಾರಿಗೆ ತಂದಿದೆ. ಈ ನಿಟ್ಟಿನಲ್ಲಿ ರಾಜ್ಯ ವಿಧಾನಸಭೆಯು ಧಾರ್ಮಿಕ ಸ್ವಾತಂತ್ರ್ಯ ಮಸೂದೆ(ಫ್ರೀಡಮ್​ ಟು ರಿಲಿಜಿಯನ್ ಬಿಲ್​, 2021)ಯನ್ನು ಸೋಮವಾರ ಅಂಗೀಕರಿಸಿದೆ.
ಈ ಕಾನೂನಿನ ಕೆಳಗೆ ವಿವಾಹದ ಕಾರಣ ಒಡ್ಡಿ ಅಥವಾ ಬೇರೆ ಮೋಸದ ವಿಧಾನಗಳಿಂದ ಮತ ಪರಿವರ್ತನೆ ಮಾಡುವುದು ಅಪರಾಧವಾಗಲಿದೆ. ತಪ್ಪಿತಸ್ಥರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ವಿಧಿಸುವ ಅವಕಾಶವಿದೆ. ಇಂದು ವಿಧಾನಸಭೆಯಲ್ಲಿ ಈ ಬಗ್ಗೆ ನಡೆದ ಚರ್ಚೆಯ ನಂತರ, ಮೌಖಿಕ ಮತ ಚಲಾವಣೆಯ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು.
ಇದನ್ನೂ ಓದಿ:ಎಲ್ಲೆಲ್ಲೂ ಮಹಿಳೆಯರೇ: ನೈಋತ್ಯ ರೈಲ್ವೇಯಿಂದ ಸಂಪೂರ್ಣ ಸ್ತ್ರೀಮಯ ಮಹಿಳಾ ದಿನಾಚರಣೆ
ವಿಧಾನಸಭೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಧ್ಯಪ್ರದೇಶದ ಗೃಹ ಮಂತ್ರಿ ನರೋತ್ತಮ ಮಿಶ್ರ, “ನಮ್ಮ ಹೆಣ್ಣುಮಕ್ಕಳನ್ನು ಅಪಾಯಕ್ಕೆ ತಳ್ಳುವ, ನಮ್ಮ ಭಾವನೆಗಳಿಗೆ ಧಕ್ಕೆ ತರುವ, ‘ಜಿಹಾದ್​’ಗೆ ಮಾರ್ಗ ಕಲ್ಪಿಸುವ ಯಾವುದೇ ರೂಪದ ಪ್ರೀತಿಗೆ ನಮ್ಮ ವಿರೋಧವಿದೆ” ಎಂದರು.
ಈ ಮುನ್ನ ಇದೇ ರೀತಿ ಮತಾಂತರ ವಿರೋಧಿ ಸುಗ್ರೀವಾಜ್ಞೆಯನ್ನು ರಾಜ್ಯ ಸರ್ಕಾರ ಹೊರಡಿಸಿತ್ತು. ಜನವರಿ 9 ರಂದು ಮಧ್ಯಪ್ರದೇಶ ಫ್ರೀಡಂ ಆಫ್​ ರಿಲಿಜಿಯನ್ ಆರ್ಡಿನೆನ್ಸ್​, 2020 ಕ್ಕೆ ರಾಜ್ಯಪಾಲರಾದ ಆನಂದಿಬೇನ್ ಪಟೇಲ್ ಅನುಮೋದನೆ ನೀಡಿದ್ದರು. ಸುಗ್ರೀವಾಜ್ಞೆ ಜಾರಿಗೆ ಬಂದ ಒಂದೇ ತಿಂಗಳಲ್ಲಿ 23 ಪ್ರಕರಣಗಳು ದಾಖಲಾಗಿದ್ದವು ಎನ್ನಲಾಗಿದೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ದೂರು ನೀಡಲು ಹೋದ ಮಹಿಳೆಯ ರೇಪ್ ! ಪೊಲೀಸ್​ ಕಾಂಪೌಂಡಲ್ಲೇ ಅಪರಾಧ ?!
“ಟಿಎಂಸಿ ಸೃಷ್ಟಿ ಮಾಡಿರುವ ಕೊಚ್ಚೆಯಿಂದಾಗಿ ಕಮಲ ಅರಳಲಿದೆ” : ಕೊಲ್ಕತಾದಲ್ಲಿ ಮೋದಿ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − six =
Remember me
