ಭೋಪಾಲ್:ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎಂದು ಹೋರಾಟಗಳನ್ನು ಮಾಡುತ್ತಲೇ ಇರುತ್ತೇವೆ. ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಾಕ್ಷಣ ಅಪರಾಧಿಗಳ ವಿರುದ್ಧ ಕಠಿಣ ಕ್ರಮಕ್ಕಾಗಿ ಒತ್ತಾಯಿಸುತ್ತೇವೆ. ಆದರೆ ಪರಿಸ್ಥಿತಿಯೇನಾದರೂ ಬದಲಾಗಿದೆಯೇ? ಲೈಂಗಿಕ ಕಿರುಕುಳ ಪ್ರಕರಣಗಳು ಕಡಿಮೆಯಾಗಿದೆಯೇ ಎಂದು ಕೇಳಿದರೆ ನಮ್ಮಲ್ಲಿ ಉತ್ತರವಿಲ್ಲ. ಮಧ್ಯ ಪ್ರದೇಶದ ಪೊಲೀಸರು ಅನುಸರಿಸಿರುವ ಮಾರ್ಗ ನೋಡಿದರೆ ಈ ರೀತಿಯ ಪ್ರಕರಣಗಳಿಗೆ ಬ್ರೇಕ್​ ಬೀಳುವ ಸಾಧ್ಯತೆಯಿದೆ ಎಂದೆನಿಸುತ್ತದೆ.
ಇದನ್ನೂ ಓದಿ:ಬೆದರಿಕೆ, ನಿಂದನೆ, ಅವಮಾನಕರ ಪೋಸ್ಟ್​ ಮಾಡಿದರೆ 5 ವರ್ಷ ಜೈಲು, 10 ಸಾವಿರ ರೂ ದಂಡ!
ಜೈಲಿನ ನಾಲ್ಕು ಗೋಡೆಯೊಳಗೆ ಅಪರಾಧಿಗಳಿಗೆ ಶಿಕ್ಷೆ ನೀಡಿದರೆ ಅವರು ಬುದ್ಧಿ ಕಲಿತುಬಿಡುವುದಿಲ್ಲ. ಬದಲಾಗಿ ಸಮಾಜದೆದುರು ಶಿಕ್ಷೆಯಾಗಬೇಕು. ಸಮಾಜದ ಎದುರು ಮಾನ ಹೋದರೆ ಆಗ ಅವರಿಗೆ ಬುದ್ಧಿ ಬರುತ್ತದೆ ಎಂದು ಅನೇಕರು ವಾದಿಸುತ್ತಲೇ ಬಂದಿದ್ದಾರೆ. ಇದೀಗ ಮಧ್ಯ ಪ್ರದೇಶ ಪೊಲೀಸರೂ ಕೂಡ ಅದೇ ಮಾರ್ಗ ಹಿಡಿದಿದ್ದಾರೆ.
ಇದನ್ನೂ ಓದಿ:ಬೂದಿಗುಂಡಿಯಲ್ಲಿ ಉತ್ಖನನ ಶೀಘ್ರ : ಸಹಾಯಕ ಪುರಾತತ್ವ ತ್ವಜ್ಞ ಡಾ. ಆರ್.ಎನ್. ಕುಮಾರನ್ ಮಾಹಿತಿ
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಎಲ್ಲ ಪೊಲೀಸರಂತೆ ಆರೋಪಿಗಳನ್ನು ಪೊಲೀಸ್​ ಗಾಡಿಯಲ್ಲಿ ನ್ಯಾಯಾಲಯಕ್ಕೆ ಕರೆದೊಯ್ಯದೆ, ನಡೆಸಿಕೊಂಡೇ ಕರೆದುಕೊಂಡು ಹೋಗಲಾಗಿದೆ. ಕೋರ್ಟ್​ಗೆ ಹೋಗುವ ದಾರಿಯಲ್ಲಿ ಅವರಿಗೆ ಬಸ್ಕಿ ಹೊಡೆಯುತ್ತ ನಡೆಯುವ ಶಿಕ್ಷೆಯನ್ನು ನೀಡಲಾಗಿದೆ. ಬಸ್ಕಿ ನಿಲ್ಲಿಸಿದರೆ ಅಲ್ಲಿಯೇ ಅವರಿಗೆ ಏಟನ್ನೂ ನೀಡಲಾಗಿದೆ. ಈ ರೀತಿಯ ವಿಶೇಷ ಶಿಕ್ಷೆಯನ್ನು ಹತ್ತಾರು ಜನರು ವಿಡಿಯೋ ಮಾಡಿಕೊಂಡಿದ್ದು, ಅಪರಾಧಿಗಳತ್ತ ಕೈ ತೋರಿಸಿ ನಕ್ಕಿದ್ದಾರೆ. ಇದೀಗ ಆ ಅಪರಾಧಿಗಳ ಮಾನ ಸಂಪೂರ್ಣವಾಗಿ ಹರಾಜಾಗಿದೆ. (ಏಜೆನ್ಸೀಸ್​)
In Madhya Pradesh's Dewas district, habitual eve-teasers were made to do sit-ups and publically canned on their way to court by#police. The incident happened on Saturday afternoon in Banganga. Several such parades were held after rise in several cases of crime@IndianExpresspic.twitter.com/IlHGBdNjcJ
— Iram Siddique (@Scribbly_Scribe)November 22, 2020

ಆಸ್ಪತ್ರೆಯಲ್ಲಿದ್ದ ಪ್ರಭುದೇವ್​ಗೆ ವೈದ್ಯೆಯೊಂದಿಗೆ ಲವ್​; ಮದುವೆಯಾಗಿದ್ದು ಸತ್ಯವೆಂದ ಸಹೋದರ

ಆನ್​ಲೈನ್​ನಲ್ಲಿ ಲೈಟ್​ ಆರ್ಡರ್​ ಮಾಡಿದವರಿಗೆ ಬಂತು ಜೇಡ! ಆನ್​ಲೈನ್​ ಗ್ರಾಹಕರೇ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
