ಭೋಪಾಲ್ :ಭಾರತಾದ್ಯಂತ ಕರೊನಾ ಪ್ರಕರಣಗಳು ಏರುತ್ತಲೇ ಇದ್ದು, ಕರ್ನಾಟಕವು ಸೋಂಕಿನ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಹೀಗಿರುವಾಗ ಮಧ್ಯಪ್ರದೇಶದಲ್ಲಿ ಸೋಂಕು ಇಳಿಕೆಯಾಗುತ್ತಿರುವ ಶುಭಸೂಚನೆ ಇರುವುದಾಗಿ ರಾಜ್ಯದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಕರೊನಾ ಹರಡುವುದನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ. ಶೇ.24 ಕ್ಕೂ ಮೀರಿದ್ದ ಪಾಸಿಟಿವಿಟಿ ದರವು ಇದೀಗ ಶೇ. 10.68 ಕ್ಕೆ ಇಳಿದಿದೆ. ಕೆಲವು ಜಿಲ್ಲೆಗಳಲ್ಲಿ ಶೇ. 5ಕ್ಕಿಂತ ಕಡಿಮೆ ಇದೆ. ಹೊಸ ಸೋಂಕು ಪ್ರಕರಣಗಳು ಸತತವಾಗಿ ಕಡಿಮೆಯಾಗುತ್ತಿವೆ ಎಂದು ಚೌಹಾಣ್ ​ ಅವರು ಇಂದು ತಿಳಿಸಿದ್ದಾರೆ.
ಇದನ್ನೂ ಓದಿ:ಅನುಮತಿ ಇಲ್ಲದೆ ಕಾರ್ಯಕ್ರಮ ಮಾಡಿದ್ದಕ್ಕೆ ಪಂಚಾಯಿತಿ ಸದಸ್ಯರ ಕಾಲಿಗೆ ಬಿದ್ದು ಕ್ಷಮೆ !
ಆಸ್ಪತ್ರೆಗಳಲ್ಲಿ ಏನೂ ಸಮಸ್ಯೆಯಿಲ್ಲ. ಬೆಡ್​ ಮತ್ತು ಆಕ್ಸಿಜನ್ ಸೇರಿ ಎಲ್ಲ ಲಭ್ಯವಿದೆ. ಗ್ರಾಮೀಣ ಪ್ರದೇಶಗಳಲ್ಲಿರು ಜನರು ತಮಗೆ ಯಾವುದಾದರೂ ರೋಗಲಕ್ಷಣಗಳು ಕಂಡುಬಂದಲ್ಲಿ ಮುಚ್ಚಿಡದೆ ನಮ್ಮ ಸಮೀಕ್ಷೆ ತಂಡಕ್ಕೆ ತಿಳಿಸಿ. ಅವರು ಸೂಕ್ತ ಚಿಕಿತ್ಸೆ ಒದಗಿಸುತ್ತಾರೆ ಎಂದು ಸಿಎಂ ಚೌಹಾಣ್ ಜನರಲ್ಲಿ ಮನವಿ ಮಾಡಿದ್ದಾರೆ.(ಏಜೆನ್ಸೀಸ್)
ಆನ್​ಲೈನ್ ಚಾರ್​​ ಧಾಮ್​ ಯಾತ್ರೆ ! ಕೇದಾರನಾಥದಲ್ಲಿ ನಾಳೆಯಿಂದ ವಿಶೇಷ ಪೂಜೆ

ಅಪ್ಪಅಮ್ಮ, ಅಜ್ಜಅಜ್ಜಿ ಕರೊನಾಗೆ ಬಲಿ; 12 ದಿನಗಳಲ್ಲಿ ಅನಾಥರಾದ ಹೆಣ್ಣುಮಕ್ಕಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 8 =
Remember me
