ಭೋಪಾಲ್​:ಇತ್ತೀಚೆಗೆ ಯುವ ಪೀಳಿಗೆಯವರೇ ಹೆಚ್ಚಿನ ಸಂಖ್ಯೆಯಲ್ಲಿ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ಆದರೆ ಇಲ್ಲೊಬ್ಬ ಹುಡುಗ ಇನ್ನೂ ಯೌವ್ವನಕ್ಕೆ ಕಾಲಿಡುವ ಮೊದಲೇ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾನೆ. ಕೋವಿಡ್​ ನಂತರ ದೇಶದಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಮಧ್ಯಪ್ರದೇಶದ 12 ವರ್ಷದ ಶಾಲಾ ಬಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಬಾಲಕನನ್ನು ಮನಿಶ್​ ಜತವ್​ ಎಂದು ಗುರುತಿಸಲಾಗಿದೆ. ನಾಲ್ಕನೆ ತರಗತಿಯ ವಿದ್ಯಾರ್ಥಿಯಾಗಿದ್ದ ಮನೀಶ್​, ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಅತಿ ಕಿರಿಯ ವಯಸ್ಸಲ್ಲಿ ಹೃದಯಾಘಾತಕ್ಕೆ ಬಲಿಯಾದ ಮಧ್ಯಪ್ರದೇಶದ ಮೊದಲ ಪ್ರಕರಣ ಇದಾಗಿದೆ.
ಅಂದಹಾಗೆ ಈ ಘಟನೆ ಕಳೆದ ಗುರುವಾರ (ಡಿ.15) ಮಧ್ಯಾಹ್ನ 2 ಗಂಟೆಗೆ ಸಂಭವಿಸಿದೆ. ಶಾಲೆಯನ್ನು ಮುಗಿಸಿ ಶಾಲಾ​ ಬಸ್​ನಲ್ಲಿ ಎತಾವಾ ರಸ್ತೆಯಲ್ಲಿ ಬರುವಾಗ ಬಸ್​ನಲ್ಲೇ ಬಾಲಕ ಕುಸಿದು ಬಿದ್ದನು. ತಕ್ಷಣ ಈ ವಿಚಾರವನ್ನು ಶಾಲೆಯ ಆಡಳಿತ ಮಂಡಳಿಗೆ ತಿಳಿಸಿದ ಬಸ್​ ಡ್ರೈವರ್, ಬಾಲಕನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದನು. ಆದರೆ, ಆಸ್ಪತ್ರೆಗೆ ಬರುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದ ಎಂದು ವೈದ್ಯರು ದೃಢಪಡಿಸಿದರು. ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (CPR) ನಡೆಸಿದರು ಪ್ರಯೋಜನ ಆಗಲಿಲ್ಲ ಎಂದು ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಅನಿಲ್ ಗೋಯಲ್ ತಿಳಿಸಿದರು.
ವಿದ್ಯಾರ್ಥಿಯ ಪಾಲಕರು ಮರಣೋತ್ತರ ಪರೀಕ್ಷೆಯನ್ನು ಮಾಡದಿರಲು ನಿರ್ಧರಿಸಿದ್ದಾರೆ ಎಂದು ಗೋಯಲ್ ವರದಿ ಮಾಡಿದ್ದಾರೆ. COVID-19 ನಂತರ ಹೃದಯಾಘಾತ ಪ್ರಕರಣಗಳು ಹೆಚ್ಚಳವಾಗುತ್ತಿವೆ ಎಂದು ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ಈ ವಯಸ್ಸಿನ ಬಾಲಕನಿಗೆ ಹಿಂದೆಂದೂ ಹೃದಯ ಸ್ತಂಭನವನ್ನು ಆಗಿರಲಿಲ್ಲ ಎಂದು ಗೋಯೆಲ್​ ತಿಳಿಸಿದ್ದಾರೆ.
ತಮ್ಮ ಮಗನಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ ಮತ್ತು ಮಗ ಸಂಪೂರ್ಣ ಚಟುವಟಿಕೆಯಿಂದ ಇರುತ್ತಿದ್ದ ಎಂದು ಮನೀಶ್‌ನ ತಂದೆ ಕೋಮಲ್ ಅವರು ಹೇಳಿದ್ದಾರೆ.(ಏಜೆನ್ಸೀಸ್​)
ಕ್ಲಾಸ್​ಮೇಟ್​ಗೆ ವಾಟ್ಸ್​ಆ್ಯಪ್​ ಮೆಸೇಜ್​ ಮಾಡಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ: ನಂತರ ನಡೆದಿದ್ದು ದುರಂತ ಘಟನೆ

ಭಾರತಕ್ಕೆ ಪರಮಾಣು ಯುದ್ಧದ ಬೆದರಿಕೆಯೊಡ್ಡಿ ನಾಲಿಗೆ ಹರಿಬಿಟ್ಟ ಪಾಕ್​ ನಾಯಕಿ!

ಬೀಚ್​ಗೆ ಮೈತುಂಬ ಬಟ್ಟೆ ಹಾಕ್ಕೊಂಡು ಬಂದು ಟ್ರೋಲ್​ ಆದ ಬೋಲ್ಡ್​ ಬ್ಯೂಟಿ ಉರ್ಫಿ ಜಾವೇದ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − sixteen =
Remember me
