ಭೋಪಾಲ್​:ಇತ್ತೀಚೆಗೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬಸ್​ ಒಂದು ಕಾಲುವೆಗೆ ಬಿದ್ದು 51 ಜನರು ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ. ಈ ಅಪಘಾತದಲ್ಲಿ ಮೃತರಾದವರ ಜತೆ ಅದೆಷ್ಟೋ ಕನಸುಗಳು, ಅದೆಷ್ಟೋ ಕುಟುಂಬಗಳ ಸಂತಸವೂ ನೀರಿನ ಪಾಲಾಗಿ ಹೋಗಿದೆ. ಅದೇ ಅಪಘಾತದಲ್ಲಿ ಜಲ ಸಮಾಧಿಯಾದ ದಂಪತಿಯ ಕಥೆ ಇದು..
ಸಿಧಿ ಜಿಲ್ಲೆಯ ನಿವಾಸಿ ಅಜಯ್​ಗೆ ಇನ್ನೂ 25 ವರ್ಷ. ಕಳೆದ ವರ್ಷ ಜೂನ್ ​8ರಂದು ಆತ ತಪಸ್ಯಾ (23) ಹೆಸರಿನ ಯುವತಿಯನ್ನು ಮದುವೆಯಾಗಿದ್ದು. ಇಬ್ಬರೂ ಸೇರಿ ಅದೆಷ್ಟೋ ಕನಸುಗಳನ್ನು ಕಟ್ಟಿದ್ದರು. ನರ್ಸ್​ ಆಗಿ ಜವಾಬ್ದಾರಿಯುತ ಹೆಣ್ಣಾಗುವ ಆಸೆಯನ್ನು ತಪಸ್ಯಾ ಕಂಡಿದ್ದಳು. ಅದರ ಪರೀಕ್ಷೆಗೆ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಳು. ಹೆಂಡತಿಯ ಪರೀಕ್ಷೆಯ ಎಎನ್​ಎಮ್​ ಪೇಪರ್​ ತರಲೆಂದು ಆ ದಿನ ಹೊರಟಿದ್ದ. ಗಂಡನ ಜತೆ ತಾನೂ ಹೋಗುವ ನಿರ್ಧಾರ ಮಾಡಿದ ತಪಸ್ಯಾ ಆತನೊಂದಿಗೆ ಬಸ್ಸು ಹತ್ತಿದ್ದಳು.
ಬಸ್ಸು ಹೋಗಬೇಕಿದ್ದ ಸ್ಥಳ ಬಿಟ್ಟು ಕಾಲುವಗೆ ಹೋಗಿ ಬಿದ್ದಿದೆ. ಕನಸ ಹೊತ್ತು ಹೊರಟಿದ್ದ ಗಂಡ ಹೆಂಡತಿ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ. ತಪಸ್ಯಾ ದೇಹ ಮಧ್ಯಾಹ್ನ 3 ಗಂಟೆಗೆ ಸಿಕ್ಕಿದ್ದರೆ ವಿಜಯ್​ ದೇಹ ಸಂಜೆ 5 ಗಂಟೆಗೆ ಸಿಕ್ಕಿದೆ. ನವ ದಂಪತಿ ಮೃತ ದೇಹದ ಮರಣೋತ್ತರ ಪರೀಕ್ಷೆಯ ನಂತರ ಇಬ್ಬರನ್ನೂ ಒಟ್ಟಿಗೆ ಅಂತ್ಯಸಂಸ್ಕಾರ ಮಾಡಿದ್ದಾರೆ ಅವರ ಕುಟುಂಬಸ್ಥರು. (ಏಜೆನ್ಸೀಸ್​)
ಐಪಿಎಲ್​ ಹರಾಜಿನಲ್ಲಿ ಅತಿ ಹೆಚ್ಚು ಮೌಲ್ಯಕ್ಕೆ ಬಿಡ್​ ಆದವರು ಯಾರು ಗೊತ್ತೇ? ಇಲ್ಲಿದೆ ಹರಾಜಿನ ಇತಿಹಾಸ…

‘ನಾ ಪುರುಷನಿಂದ ಗರ್ಭಿಣಿಯಾಗಲಿಲ್ಲ’ ಈ ಗರ್ಭಿಣಿಯ ಕಥೆ ಕೇಳಿದರೆ ನೀವೂ ಗಾಬರಿಯಾಗುತ್ತೀರ..

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:one × five =
Remember me
