ಭೋಪಾಲ್​:ಚಹಾ ಮಾರುವ ವ್ಯಕ್ತಿ ದೇಶದ ಪ್ರಧಾನಿಯಾಘಿದ್ದಾರೆ ಎಂಬ ಮಾತು, ಭಾರತದಲ್ಲಿ ಯಾವುದು ಅಸಾಧ್ಯವಲ್ಲ ಎಂಬುದಕ್ಕೆ ಪ್ರತೀಕ. ಅಂತೆಯೇ ಚಹಾ ಮಾರುವವನ ಮಗಳೊಬ್ಬಳು ಭಾರತೀಯ ವಾಯುಸೇನೆಯಲ್ಲಿ ಫ್ಲೈಯಿಂಗ್​ ಆಫೀಸರ್​ ಆಗಿ ಆಯ್ಕೆಯಾಗಿದ್ದಾಳೆ.
ಇತ್ತೀಚೆಗಷ್ಟೇ ಹೈದರಾಬಾದ್​ನಲ್ಲಿ ನಡೆದ ವಾಯುಸೇನಾ ಅಧೀಕಾರಿಗಳ ನಿರ್ಗಮನ ಪಥ ಸಂಚಲನದಲ್ಲಿ ರಾಷ್ಟ್ರಪತಿ ಫಲಕ ಹಾಗೂ ಪ್ರಶಸ್ತಿ ಪಡೆದ ಆಂಚಲ್​ ಗಂಗ್ವಾಲ್​ ಈ ಸಾಧಕಿ.
ಮಧ್ಯಪ್ರದೇಶ ಸರ್ಕಾರದಲ್ಲಿ ಲೇಬರ್​ ಇನ್​ಸ್ಪೆಕ್ಟರ್​, ಬಳಿಕ ಸಬ್​ ಇನ್​​ಸ್ಪೆಕ್ಟರ್​ ಆಗಿ ಕಾರ್ಯ ನಿರ್ವಹಿಸಿರುವ ಆಂಚಲ್​ ಈಗಾಗಲೇ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದ್ದಾಳೆ.
ಇದನ್ನೂ ಓದಿ;ಚೀನಾ ಸಂಘರ್ಷದಲ್ಲಿ ಬಲಿಯಾದ ಯೋಧನ ಕುಟುಂಬಕ್ಕೆ ಐದು ಕೋಟಿ ರೂ., ಪತ್ನಿಗೆ ಸಹಾಯಕ ಆಯುಕ್ತೆ ಹುದ್ದೆ
ತನ್ನೂರು ನೀಮುಚ್​ನಲ್ಲಿದ್ದ ಸಿಆರ್​ಪಿಎಫ್​ ಕೇಂದ್ರದಿಂದಾಗಿ ಈಕೆಗೆ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುವುದೆಂದರೆ ಅದೇನೋ ಭಾರಿ ಇಷ್ಟದ ಕೆಲಸವಾಗಿತ್ತು. ಅಪ್ಪ ಸುರೇಶ್​ ಟೀ ಮಾರುತ್ತಿದ್ದ ಅಂಗಡಿ ಆಗಾಗ ಬರುತ್ತಿದ್ದ ಆಂಚಲ್​ ಅಪ್ಪನಿಗೆ ನೆರವಾಗುತ್ತಿದ್ದುದಲ್ಲದೇ, ಅಲ್ಲಿಯೇ ಮರೆಯಲ್ಲಿ ತನ್ನ ಹೋಮ್​ ವರ್ಕ್ ಪೂರ್ಣಗೊಳಿಸಿಕೊಳ್ಳುತ್ತಿದ್ದಳು. ಶಾಲೆಯಲ್ಲಿದ್ದಾಗಲೇ ಸೇನೆ ಸೇರಬೇಕೆಂದು ಆಂಚಲ್​ ನಿರ್ಧಾರ ಕೈಗೊಂಡಿದ್ದಳು. ಆ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿ ಯಶಸ್ಸು ಕಂಡಿದ್ದಾಳೆ.
ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನನ್ನು ಬೆಳೆಸಲು ತಂದೆ ಕಷ್ಟಪಟ್ಟಿದ್ದನ್ನು ಆಂಚಲ್​ ನೆನೆಯುತ್ತಾಳೆ. ಅವರಿಗೆ ಅಗತ್ಯವಾದ ಎಲ್ಲವನ್ನೂ ಪೂರೈಸಲು ಶ್ರಮಪಡುತ್ತಿದ್ದರು ಎನ್ನುತ್ತಾಳೆ.
ಇದನ್ನೂ ಓದಿ;ಚೀನಾ ಗುರಿಯಾಗಿಸಿ ಕ್ಷಿಪಣಿ ಸಜ್ಜುಗೊಳಿಸಿರುವ ಜಪಾನ್​; ಯಾವುದರ ಮುನ್ಸೂಚನೆ ಇದು…?
ಕಂಪ್ಯೂಟರ್​ ಸೈನ್ಸ್​ನಲ್ಲಿ ಪದವಿ ಪೂರೈಸಿದ ಬಳಿಕ ಸೇನೆಯನ್ನು ಸೇರಲು ಸಿದ್ಧತೆ ನಡೆಸಿ ಯಶಸ್ಸು ಕಂಡಿದ್ದಾಳೆ. ಈ ಸಂಬ್ರಮವನ್ನು ಮನೆಯವರೊಂದಿಗೆ ಆಚರಿಸುವ ಭಾಗ್ಯವೂ ಆಕೆಗಿಲ್ಲವಾಗಿದೆ. ಏಕೆಂದರೆ, ತರಬೇತಿ ಪೂರ್ಣಗೊಳಿಸಿದವರನ್ನು ಇಲ್ಲಿಂದ ನೇರವಾಗಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ದೇಶ ಸೇವೆಗೆ ಎಂದಿಗೂ ಸಿದ್ಧ ಎನ್ನುವುದು ಆಕೆಯ ದಿಟ್ಟ ನುಡಿಯಾಗಿದೆ.
ನಟ ಸುಶಾಂತ್​ ಸಿಂಗ್​ ರಜಪೂತ್​ ತಿಂಗಳಿಗೆಷ್ಟು ಖರ್ಚು ಮಾಡುತ್ತಿದ್ದರು? ಹಳೇ ಮ್ಯಾನೇಜರ್​ ನೀಡಿದ್ದಾರೆ ಪೊಲೀಸರಿಗೆ ಮಾಹಿತಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − 12 =
Remember me
