ಭೋಪಾಲ್​:ಶಾಸಕ ಕಮಲ್ ನಾಥ್ ದೇವಾಲಯದ ಆಕಾರದ ಕೇಕ್ ಕತ್ತರಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈಗ ಬಿಜೆಪಿ ಮತ್ತು ಹಿಂದುಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಂಗಳವಾರ ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ಶಿಕಾರ್ಪುರದಲ್ಲಿ ಈ ಘಟನೆ ನಡೆದಿದೆ.
ಮಧ್ಯಪ್ರದೇಶದ ಕಾಂಗ್ರೆಸ್​ ಶಾಸಕ ಕಮಲ ನಾಥ್​ ಹನುಮಂತನ ಪ್ರತಿಕೃತಿ ಇರುವ ದೇವಸ್ಥಾನದ ಆಕೃತಿಯ ಕೇಕ್​ ಕಟ್​ ಮಾಡಿ ಬಿಜೆಪಿಯ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈಗ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ‘ಕಮಲ ನಾಥ್ ಹಿಂದೂ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಮಧ್ಯಪ್ರದೇಶ ಮುಖ್ಯಮಂತ್ರಿ ಚೌಹಾಣ್ ‘ದೇವರ ಮೇಲಿನ ಭಕ್ತಿಗೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ. ಅವರು ರಾಮಮಂದಿರ ನಿರ್ಮಾಣವನ್ನು ವಿರೋಧಿಸಿದರು. ಆದರೆ ಈಗ ಚುನಾವಣೆ ಸಂದರ್ಭ ಅವರಿಗೆ ಹನುಮಂತ ನೆನಪಾಗಿದ್ದಾರೆ. ಕೇಕ್ ಮೇಲೆ ಹನುಮಂತನ ಭಾವಚಿತ್ರವನ್ನು ನಿರ್ಮಿಸಿ ಅದನ್ನು ಕತ್ತರಿಸುವುದು ಹಿಂದೂ ಧರ್ಮ ಮತ್ತು ಸನಾತನ ಸಂಪ್ರದಾಯಕ್ಕೆ ಮಾಡಿದ ಅವಮಾನ, ಸಮಾಜ ಇದನ್ನು ಒಪ್ಪುವುದಿಲ್ಲ’ ಎಂದು ಕಿಡಿಕಾರಿದರು.
ಈ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಬಿಜೆಪಿ ವಕ್ತಾರ ಅಮಿತ್ ಮಾಳವೀಯ ‘ಮಾಜಿ ಸಂಸದ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಕಮಲನಾಥ್‌, ಕೇಸರಿ ಬಾವುಟ ಹಾಗೂ ಹನುಮಂತನ ಚಿತ್ರವಿರುವ ನಾಲ್ಕು ಹಂತದ ದೇಗುಲದ ಕೇಕ್‌ಗೆ ಚಾಕು ಹಾಕಿ ಚುನಾವಣಾ ಸಂದರ್ಭದಲ್ಲಿ ಹನುಮ ಭಕ್ತ ಎಂದು ಹೇಳಿಕೊಂಡು ನಮ್ಮ ಆರಾಧ್ಯ ದೇವರಿಗೆ ಮತ್ತು ಕೋಟಿ ಕೋಟಿ ಹಿಂದುಗಳಿಗೆ ಅಪಮಾನ ಮಾಡುತ್ತಿದ್ದಾರೆ. ಎಂದು ಟ್ವೀಟ್ ಮಾಡಿದ್ದಾರೆ.(ಏಜೆನ್ಸೀಸ್​)
Former MP CM and senior Congress leader Kamalnath, runs a knife through a four tiered, temple shaped cake, with a saffron flag and image of lord Hanuman on top. During elections he had claimed to be Hanuman bhakt and is now insulting crores of Hindus by denigrating their deity…pic.twitter.com/s4hNMII0iV— Amit Malviya (@amitmalviya)November 17, 2022
Former MP CM and senior Congress leader Kamalnath, runs a knife through a four tiered, temple shaped cake, with a saffron flag and image of lord Hanuman on top. During elections he had claimed to be Hanuman bhakt and is now insulting crores of Hindus by denigrating their deity…pic.twitter.com/s4hNMII0iV
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
