ಮದುರೈ:ಕೋವಿಡ್ 19 ಸೋಂಕಿನ ಚಿಕಿತ್ಸೆಯಲ್ಲಿ ಸಿದ್ಧ ಔಷಧದ ಕಾರ್ಯಕ್ಷಮತೆ ಏನು ಎಂಬ ಬಗ್ಗೆ ಪರಿಶೀಲಿಸುವುದಕ್ಕೆ ಕೂಡಲೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದೆ.
ಸಿದ್ಧ ಡಾಕ್ಟರ್ ಎಸ್​.ಸುಬ್ರಮಣಿಯನ್​ ಎಂಬುವವರು ಸಲ್ಲಿಸಿದ್ದ ಪಿಟಿಷನ್​ನ ವಿಚಾರಣೆ ಪೂರ್ಣಗೊಳಿಸುತ್ತ, ಹೈಕೋರ್ಟ್​​ನ ನ್ಯಾಯಮೂರ್ತಿಗಳಾದ ಪಿ.ಎನ್​.ಪ್ರಕಾಶ್​ ಮತ್ತು ಪಿ.ಪುಲಗೇಂಧಿ ಅವರನ್ನು ಒಳಗೊಂಡ ಮದುರೈ ಪೀಠ ಈ ಆದೇಶ ನೀಡಿದ್ದು, ಸೆಂಟ್ರಲ್​ ಕೌನ್ಸಿಲ್ ಫಾರ್ ರೀಸರ್ಚ್​ ಇನ್ ಆಯುರ್ವೇದ ಆ್ಯಂಡ್ ಸಿದ್ಧ ಕ್ಕೂ ನಿರ್ದೇಶನ ನೀಡಿದೆ. ಅಲ್ಲದೆ, ಹೊಸದಾಗಿ ಅಭಿವೃದ್ಧಿಪಡಿಸಿರುವ 66 ಗಿಡಮೂಲಿಕೆಗಳನ್ನು ಒಳಗೊಂಡ ಇಂಪ್ರೋ ಎಂಬ ಔಷಧದ ಬಗ್ಗೆ ಆಗಸ್ಟ್​ 3ರ ಒಳಗೆ ವರದಿ ಸಲ್ಲಿಸಬೇಕು ಎಂದೂ ಸೂಚಿಸಿದೆ.
ಇದನ್ನೂ ಓದಿ:ಎಂಟು ತಿಂಗಳ ಮಗುವನ್ನು ಉಳಿಸಿಕೊಳ್ಳಬೇಕೆಂದು 400 ಕಿ.ಮೀ. ಪ್ರಯಾಣ ಮಾಡಿದ್ರು ಆ ಅಪ್ಪ-ಅಮ್ಮ..
ಎಸ್​.ಸುಬ್ರಮಣಿಯನ್​ ಅವರು ಪಿಟಿಷನ್​ನಲ್ಲಿ ತಾನು ಸಿದ್ಧಪಡಿಸಿರುವ ಔಷಧ ಕೋವಿಡ್​-19 ಸೋಂಕನ್ನು ಗುಣಪಡಿಸಬಲ್ಲುದು. ಇದನ್ನು ಚಿಕಿತ್ಸೆಯಲ್ಲಿ ಬಳಸುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೋರಿಕೊಂಡಿದ್ದರು. ಈ ಪ್ರಕರಣದ ವಿಚಾರಣೆ ವೇಳೆ ಸರ್ಕಾರದ ಪ್ರತಿನಿಧಿ, ಸುಬ್ರಮಣಿಯನ್ ಅವರ ಔಷಧವನ್ನು ಪರಿಣತರ ಪರಿಶೀಲನೆಗೆ ಕಳುಹಿಸಲಾಗಿದೆ. ಅಲ್ಲದೆ, ಹೆಚ್ಚಿನ ಪರಿಶೀಲನೆಗಾಗಿ ಕೇಂದ್ರಕ್ಕೂ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದರು.ಈ ಔಷಧ ಪರಿಣಾಮಕಾರಿ ಎನಿಸಿದರೆ ಅದನ್ನು ಜಗತ್ತಿನ ಜನರ ಒಳಿತಿಗಾಗಿ, ಆರೋಗ್ಯಕ್ಕಾಗಿ ಬಳಸುವುದಕ್ಕೆ ಅವಕಾಶ ನೀಡಬೇಕು. ಸಿದ್ಧ ಔಷಧಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ಹಣಕಾಸು ನೆರವನ್ನೂ ಸರ್ಕಾರ ನೀಡಬೇಕು ಎಂದು ಕೋರ್ಟ್​ ಅಭಿಪ್ರಾಯಪಟ್ಟಿದೆ.
ಇಂಪ್ರೋ ಔಷಧವನ್ನು ಈಗಾಗಲೇ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್​ ಇನ್ ಆಯುರ್ವೇದ ಆ್ಯಂಡ್​ ಸಿದ್ಧಕ್ಕೆ ಕಳುಹಿಸಲಾಗಿದೆ. ಕೇಂದ್ರ ಸರ್ಕಾರಕ್ಕೆ ಇಂತಹ 3,500ಕ್ಕೂ ಹೆಚ್ಚು ಮನವಿಗಳು ತಲುಪಿದ್ದು, ಅವುಗಳನ್ನು ಪರಿಶೀಲಿಸಿ ಶೀಘ್ರವೇ ನಿರ್ಧಾರ ಪ್ರಕಟಿಸಲಿದೆ ಎಂದು ಸರ್ಕಾರದ ಪ್ರತಿನಿಧಿ ತಿಳಿಸಿದ್ದಾರೆ. (ಏಜೆನ್ಸೀಸ್)
ಸಂಸದೀಯ ಸಮಿತಿ ಸಭೆಗೆ 8 ಅಂಶಗಳ ಪ್ರೊಟೊಕಾಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 20 =
Remember me
