ನವದೆಹಲಿ:ವಾಟ್ಸ್​ಆ್ಯಪ್​ ಗ್ರೂಪ್​ ಅಡ್ಮಿನ್​ಗಳಾದವರು ಎಷ್ಟೋ ಸಲ ‘ಅಡ್ಮಿನ್​ ಓನ್ಲಿ’ ಎಂಬ ಆಪ್ಷನ್​ ಆ್ಯಕ್ಟಿವೇಟ್ ಮಾಡಿಟ್ಟುಕೊಂಡಿರುತ್ತಾರೆ. ಗ್ರೂಪ್​ ಸದಸ್ಯರೆಲ್ಲರೂ ಬೇಕಾಬಿಟ್ಟಿ ಮೆಸೇಜ್ ಮಾಡಬಾರದು ಎಂಬ ಉದ್ದೇಶದಿಂದ ಹೀಗೆ ಮಾಡಿಟ್ಟುಕೊಂಡಿರುತ್ತಾರೆ. ಗ್ರೂಪ್​ ಸದಸ್ಯರಲ್ಲಿ ಯಾರಾದರೂ ಆಕ್ಷೇಪಾರ್ಹ ಪೋಸ್ಟ್ ಹಾಕಿ ಕೇಸ್​ ಆದಲ್ಲಿ ಅಡ್ಮಿನ್​ ಮೇಲೂ ಕ್ರಮಕೈಗೊಳ್ಳಲಾಗುತ್ತದೆ ಎಂಬ ಭಯವೇ ಇದಕ್ಕೆ ಕಾರಣ.
ಆದರೆ ಈಗ ವಾಟ್ಸ್​ಆ್ಯಪ್​ ಅಡ್ಮಿನ್​​ಗಳು ಅಂಥದ್ದೆಲ್ಲ ಮಾಡಿಕೊಳ್ಳುವ ಅನಿವಾರ್ಯತೆ ಇಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಇರುವ ಮಹತ್ವದ ತೀರ್ಪೋಂದನ್ನು ಮದ್ರಾಸ್ ಹೈಕೋರ್ಟ್​ ಪುನರುಚ್ಚರಿಸಿದ್ದು, ವಾಟ್ಸ್​ಆ್ಯಪ್​ ಅಡ್ಮಿನ್​ಗಳಾಗಿರುವವರು ಇದರಿಂದ ನಿರಾಳರಾಗುವುದಂತೂ ಖಚಿತ. ಗ್ರೂಪ್​ ಸದಸ್ಯರ ಪೋಸ್ಟ್​ಗಳಿಗೆ ವಾಟ್ಸ್​ಆ್ಯಪ್​ ಅಡ್ಮಿನ್ ಹೊಣೆಗಾರರಲ್ಲ ಎಂಬ ಆದೇಶವನ್ನು ಮದ್ರಾಸ್ ಹೈಕೋರ್ಟ್ ಪುನರುಚ್ಚರಿಸಿದೆ. ಬಾಂಬೆ ಹೈಕೋರ್ಟ್​ ಈ ಹಿಂದೆ ನೀಡಿದ್ದ ಆದೇಶವೊಂದನ್ನು ಉಲ್ಲೇಖಿಸುವ ಮೂಲಕ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರು ಆ ಆದೇಶವನ್ನು ಪುನರುಚ್ಚರಿಸಿದ್ದಾರೆ.
ಇದನ್ನೂ ಓದಿ:ನಿರ್ಮಾಣ ಹಂತದ ಮನೆ-ಕಟ್ಟಡಗಳೇ ಇವರ ಟಾರ್ಗೆಟ್; ಇವರು ಕದಿಯುತ್ತಿದ್ದುದೇ ಬೇರೆ..
ಬಾಂಬೆ ಹೈಕೋರ್ಟ್​​ ವಿ.ಕಿಶೋರ್ ಮತ್ತು ಮಹಾರಾಷ್ಟ್ರ ರಾಜ್ಯ ನಡುವಿನ ಪ್ರಕರಣದಲ್ಲಿ ಆಕ್ಷೇಪಾರ್ಹ ಪೋಸ್ಟ್​ಗೆ ಸಂಬಂಧಿಸಿದ ಆರೋಪಿಗಳ ಪಟ್ಟಿಯಿಂದ ವಾಟ್ಸ್​ಆ್ಯಪ್ ಅಡ್ಮಿನ್ ಹೆಸರನ್ನು ತೆಗೆದುಹಾಕಬೇಕು ಎಂದು ಹೇಳಿತ್ತು. ಅಡ್ಮಿನ್ ಆದ ಮಾತ್ರಕ್ಕೆ ಆ ವ್ಯಕ್ತಿಯನ್ನು ಆರೋಪಿ ಸ್ಥಾನದಲ್ಲಿ ಇರಿಸಲಾಗದು. ಆದರೆ ಅಡ್ಮಿನ್​ ಜವಾಬ್ದಾರಿ ಹೊರತಾಗಿಯೂ ಆತ ಅಥವಾ ಆಕೆ ಆಕ್ಷೇಪಾರ್ಹ ಪೋಸ್ಟ್​ ವಿಚಾರದಲ್ಲಿ ಪಾಲ್ಗೊಂಡಿದ್ದರೆ ಮಾತ್ರ ಆಗ ಆರೋಪಿಯನ್ನಾಗಿಸಬಹುದು ಎಂದಿದೆ.
ಇದನ್ನೂ ಓದಿ:‘ಶಾಸಕ ಪೊಲೀಸರ ಪ್ಯಾಂಟ್ ಒದ್ದೆಯಾಗಿಸಬಲ್ಲ’: ಹೀಗಂದ ರಾಜಕಾರಣಿ ವಿರುದ್ಧ ಜಾರಿಯಾಯಿತು ಮಾನನಷ್ಟ ನೋಟಿಸ್​
ಅಡ್ಮಿನ್ ಪಾತ್ರ ಅಡ್ಮಿನ್​ ಅಷ್ಟೇ ಆಗಿದ್ದರೆ, ವಿವಾದಿತ ಅಥವಾ ಆಕ್ಷೇಪಾರ್ಹ ಪೋಸ್ಟ್​ನಲ್ಲಿ ಅಡ್ಮಿನ್​ ಬೇರೆ ಇನ್ಯಾವ ರೀತಿಯಲ್ಲೂ ತೊಡಗಿಕೊಂಡಿರದಿದ್ದರೆ ಅಡ್ಮಿನ್​ ಹೆಸರನ್ನು ದೋಷಾರೋಪ ಪಟ್ಟಿಯಿಂದ ತೆಗೆದುಹಾಕಬಹುದು ಎಂದು ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಆದೇಶ ನೀಡಿದ್ದಾರೆ. –ಏಜೆನ್ಸೀಸ್
ಹೆಂಡತಿಯೊಂದಿಗೆ ಜಗಳವಾಡಿದ ಡಾಕ್ಟರ್​ ಸಾವು; ಬೆಡ್​ರೂಮ್​ನಲ್ಲಿ ಹೊತ್ತಿ ಉರಿದ ಬೆಂಕಿ..!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
