ಚೆನ್ನೈ:ವೇಶ್ಯಾವಾಟಿಕೆಗೆ ರಕ್ಷಣೆ ಕೊಡಿ ಎಂದು ವಕೀಲರೊಬ್ಬರು ಮದ್ರಾಸ್​ ಹೈಕೋರ್ಟ್​ನಲ್ಲಿ ವಿಚಿತ್ರವಾದ ಬೇಡಿಕೆಯೊಂದನ್ನು ಮುಂದಿಟ್ಟ ಪ್ರಸಂಗ ಇತ್ತಿಚೀಗಷ್ಟೇ ನಡೆದಿದೆ. ವಕೀಲನ ಬೇಡಿಕೆಯಿಂದ ಒಂದು ಕ್ಷಣ ಆಘಾತಕ್ಕೆ ಒಳಗಾದ ನ್ಯಾಯಾಲಯ ಅರ್ಜಿಯನ್ನು ವಜಾ ಮಾಡಿ, ವಕೀಲನಿಗೆ ಶಾಕ್​ ನೀಡಿದೆ.
ಬೇಡಿಕೆ ಇಟ್ಟ ವಕೀಲನಿಗೆ ಕೂಡಲೇ 10 ಸಾವಿರ ದಂಡ ವಿಧಿಸಿದ ನ್ಯಾಯಾಲಯ, ವಕೀಲನ ನೋಂದಣಿ ಪತ್ರದ ನೈಜತೆ ಮತ್ತು ಆತನ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಪರಿಶೀಲಿಸುವಂತೆ ಸಂಬಂಧಪಟ್ಟ ವಕೀಲರ ಪರಿಷತ್ತಿಗೆ ಹೈಕೋರ್ಟ್​ ಸೂಚಿಸಿದೆ.
ಘಟನೆ ಹಿನ್ನೆಲೆ: ಕನ್ಯಾಕುಮಾರಿಯ ನಾಗರಕೋಯ್ಲಿ ಎಂಬ ಪ್ರಾಂತ್ಯದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಥಳದ ಮೇಲೆ ದಾಳಿ ಮಾಡಿದ ಪೊಲೀಸರು, ರಾಜ ಮುರುಗನ್​ ಹೆಸರಿನ ವಕೀಲನ ಪಾತ್ರ ಇರುವುದನ್ನು ಗುರುತಿಸಿ ಅವರ ವಿರುದ್ಧ ಎಫ್​ಐಆರ್ ಹಾಕಿದ್ದಾರೆ. ಈ ಕುರಿತು ಎಫ್​ಐಆರ್ ರದ್ದುಗೊಳಿಸುವಂತೆ ಕೋರ್ಟ್ ಮೆಟ್ಟಿಲೇರಿದ್ದ ವಕೀಲ ಇಂತಹ ವಿಚಿತ್ರ ಬೇಡಿಕೆ ಇಟ್ಟಿದ್ದ.
ವಯಸ್ಕರ ನಡುವೆ ಒಪ್ಪಿಗೆಯ ಲೈಂಗಿಕ ಕ್ರಿಯೆ ಮತ್ತು 18 ವರ್ಷ ಮೇಲ್ಪಟ್ಟವರಿಗೆ ಎಣ್ಣೆ ಮಸಾಜ್​ನಂತಹ ಸೇವೆಯನ್ನು ಪೂರೈಸುತ್ತಿದ್ದೇನೆ. ಹೀಗಾಗಿ ನನಗೆ ರಕ್ಷಣೆ ಕೊಡಿ ಎಂದು ನ್ಯಾಯಾಲಯದ ಮುಂದೆ ವಕೀಲ ಮೊಂಡುವಾದವನ್ನು ಮಂಡಿಸಿದ್ದ. ಅಲ್ಲದೆ, ತನ್ನ ಬಂಧನವು ಸುಪ್ರೀಂಕೋರ್ಟ್​ ಆದೇಶಕ್ಕೆ ವಿರುದ್ಧವಾಗಿದೆ ಅಂತಾನೂ ಹೇಳಿದ್ದ. ಈ ವೇಳೆ ವಕೀಲನಿಗೆ ಬುದ್ಧಿವಾದ ಹೇಳಿದ ಹೈಕೋರ್ಟ್​, ಬುಧದೇವ್​ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ ನೀಡಿದ ತೀರ್ಪನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದಾಗಿ ತಿಳಿಹೇಳಿತು.
ಬುಧದೇವ್​ ಪ್ರಕರಣದಲ್ಲಿ ಮಾನವ ಕಳ್ಳಸಾಗಣೆ ತಡೆಯುವ ಮತ್ತು ಲೈಂಗಿಕ ಕಾರ್ಯಕರ್ತೆಯರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ತೀರ್ಪು ನೀಡಲಾಗಿದೆ ಎಂದು ಹೈಕೋರ್ಟ್​ ಹೇಳಿದೆ. ಇನ್ನು ಆರೋಪಿ ಮುರುಗನ್​ ಅಪ್ರಾಪ್ತೆಯ ಬಡತನವನ್ನೇ ದುರ್ಬಳಕೆ ಮಾಡಿಕೊಂಡು, ಹಣದ ಆಮಿಷವೊಡ್ಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಮಾಡಿರುವುದು ತಿಳಿದುಬಂದಿದ್ದು, ಆತನ ವಿರುದ್ಧ ಕೋರ್ಟ್​ ಆಕ್ರೋಶ ಹೊರಹಾಕಿ, ದಂಡ ಹಾಕಿ ಆತನ ಅರ್ಜಿಯನ್ನು ವಜಾ ಮಾಡಿದೆ. (ಏಜನ್ಸೀಸ್)
ಪ್ರತಿಷ್ಠಿತ ಯುಎಸ್​ ಸ್ಕಾಲರ್​ಶಿಪ್​ಗೆ ಆಯ್ಕೆಯಾದ ಅಗಸನ ಮಗಳು! ಬಡತನದಲ್ಲಿ ಅರಳಿದ ಪ್ರತಿಭೆ ದೀಪಾಲಿ

ಗಂಡನಿಂದ ವಿಚ್ಛೇದನ ಪಡೆದಿದ್ದಕ್ಕೆ ಸ್ನೇಹಿತರಿಗೆ ಪಾರ್ಟಿ ಕೊಟ್ಟು ಕುಣಿದು ಕುಪ್ಪಳಿಸಿದ ಮಹಿಳೆ! ವಿಡಿಯೋ ವೈರಲ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 + nine =
Remember me
