ಮದುರೈ:ನಮ್ಮ ದೇಶದ ಜನರು ತುಂಬಾ ಭಾವನಾತ್ಮಕ ಜೀವಿಗಳು ಎಂಬುದರಲ್ಲಿ ಸಂದೇಹವೇ ಇಲ್ಲ. ಯಾರನ್ನೇ ಆಗಲಿ ತುಂಬಾ ಇಷ್ಟಪಟ್ಟರೆ ಅವರಿಗೆ ಸರ್ವಸ್ವವನ್ನು ಅರ್ಪಿಸುತ್ತಾರೆ. ಅದರಲ್ಲೂ ತಾವು ಇಷ್ಟಪಡುವ ಸೆಲೆಬ್ರಿಟಿಗಳನ್ನು ದೇವರಂತೆ ಪೂಜೆ ಮಾಡುತ್ತಾರೆ. ಈಗಾಗಲೇ ಖುಷ್ಬೂ, ಅಮಿತಾಭ್​ ಬಚ್ಚನ್​, ನರೇಂದ್ರ ಮೋದಿ ಸೇರಿದಂತೆ ಅನೇಕ ಪ್ರಸಿದ್ಧ ವ್ಯಕ್ತಿಗಳ ಪ್ರತಿಮೆಯನ್ನು ನಿರ್ಮಾಣ ಮಾಡಿ ದೇವರೆಂದು ಪೂಜಿಸುವುದನ್ನು ನೋಡಿದ್ದೇವೆ. ಇದೀಗ ತಮಿಳುನಾಡಿನ ವ್ಯಕ್ತಿಯೊಬ್ಬರು ಸೂಪರ್​ಸ್ಟಾರ್​ ರಜಿನಿಕಾಂತ್​ ಪ್ರತಿಮೆ ಮಾಡಿ ನಿತ್ಯವೂ ಪೂಜೆ ಸಲ್ಲಿಸುವ ಮೂಲಕ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ.
ಅಭಿಮಾನಿಗಳು ನೆಚ್ಚಿನ ನಟ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುವುದು, ಸಿನಿಮಾ ಬಿಡುಗಡೆಯಾದರೆ, ಅದ್ಧೂರಿಯಾಗಿ ಸ್ವಾಗತಿಸುವುದು, ಮೈಮೇಲೆ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದು ಮತ್ತು ಎದುರು ಸಿಕ್ಕಾಗ ಒಂದು ಸೆಲ್ಫಿ ತೆಗೆದುಕೊಳ್ಳುವುದೆಲ್ಲ ಸಾಮಾನ್ಯ. ಆದರೆ, ಈ ಅಭಿಮಾನಿ ಇತರರಿಗಿಂತ ಕೊಂಚ ಭಿನ್ನವಾಗಿದ್ದಾರೆ. ಏಕೆಂದರೆ, ನೆಚ್ಚಿನ ನಟನಿಗಾಗಿ ದೇವಸ್ಥಾನವನ್ನು ನಿರ್ಮಿಸಿದ್ದಾರೆ.
ಮದುರೈ ಮೂಲದ ಕಾರ್ತಿಕ್​ ಎಂಬುವರು ತಮ್ಮ ನೆಚ್ಚಿನ ನಟ ಸೂಪರ್​ ಸ್ಟಾರ್​ ರಜಿನಿಕಾಂತ್​ಗಾಗಿ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ. ಅದರೊಳಗೆ 250 ಕೆಜಿ ತೂಕದ ರಜಿನಿಕಾಂತ್​ ಪ್ರತಿಮೆಯನ್ನು ಸ್ಥಾಪಿಸಿ, ಅದರ ಪಕ್ಕ ತಂದೆ-ತಾಯಿ ಹಾಗೂ ಗಣೇಶನ ಫೋಟೋ ಇಟ್ಟು, ನಿತ್ಯವೂ ಆರತಿ ಬೆಳಗುವುದು ಮತ್ತು ಅಭಿಷೇಕ ಮಾಡಿಕೊಂಡು ಬರುತ್ತಿದ್ದಾರೆ.
ಇದು ರಜಿನಿಕಾಂತ್​​ ಅವರ ಗಮನಕ್ಕೆ ಬಂದಿದೆಯೋ ತಿಳಿದಿಲ್ಲ. ಆದರೆ, ಅಭಿಮಾನಿ ರಜಿನಿ ಪ್ರತಿಮೆಗೆ ಪೂಜೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಕೆಲವರು ಕಾರ್ತಿಕ್​ ಅವರ ಅಭಿಮಾನ ಕಂಡು ಮೆಚ್ಚಿದರೆ, ಇನ್ನು ಕೆಲವರು ಇದೆಲ್ಲ ಹುಚ್ಚುತನ ಎಂದು ಟೀಕಿಸುತ್ತಿದ್ದಾರೆ. ಆದರೂ, ಈ ವಿಶೇಷ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿರುವುದಂತೂ ಸತ್ಯ.
#Watch| மதுரை: திருமங்கலத்தைச் சேர்ந்த கார்த்திக் என்பவர் நடிகர் ரஜினிகாந்த்துக்கு கோயில் கட்டி, 250 கிலோ எடை கொண்ட கருங்கல்லில் அவருக்கு சிலை வைத்து நாள்தோறும் வழிபட்டு வருகிறார்.#SunNews|#Madurai|@Rajinikanthpic.twitter.com/RXut6Ot1W4
— Sun News (@sunnewstamil)October 26, 2023

ಟ್ರಂಪ್​ ಪ್ರತಿಮೆತೆಲಂಗಾಣದ ಒಂದು ಪುಟ್ಟ ಹಳ್ಳಿಯಲ್ಲಿ ಒಬ್ಬಂಟಿಯಾಗಿ ಜೀವಿಸುತ್ತಿರುವ ಕೃಷ್ಣ ಹೆಸರಿನ ವ್ಯಕ್ತಿಗೆ ನಾಲ್ಕು ವರ್ಷಗಳ ಹಿಂದೆ ಅಮೆರಿಕದ ಡೊನಾಲ್ಡ್​ ಟ್ರಂಪ್​ ತನ್ನ ಕನಸಿನಲ್ಲಿ ಬಂದಿದ್ದರಂತೆ. ಅಂದಿನಿಂದ ಆತ ಟ್ರಂಪ್​ರನ್ನೇ ದೇವರು ಎಂದು ನಂಬಲಾರಂಭಿಸಿದನಂತೆ. ಕೃಷ್ಣಗೆ ಟ್ರಂಪ್​ನ ಬಗ್ಗೆ ಅದೆಷ್ಟು ಭಕ್ತಿ ಇದೆ ಎಂದರೆ ಆತ ತನ್ನ ಮನೆಯ ಜಾಗದಲ್ಲಿ ಟ್ರಂಪ್​ನ ಪ್ರತಿಮೆಯೊಂದನ್ನು ನಿರ್ಮಿಸಿಕೊಂಡು ಪ್ರತಿನಿತ್ಯ ಅದಕ್ಕೆ ಪೂಜೆ ಮಾಡುತ್ತಾನೆ. ಆಗಾಗ ಹಾಲಿನ ಅಭಿಷೇಕವೂ ನೆರವೇರುತ್ತದೆ. ಈ ಪ್ರತಿಮೆ ನಿರ್ಮಾಣ ಮಾಡಿದಾಗಿನಿಂದ ಆತನನ್ನು ಊರಿನ ಜನರು ಟ್ರಂಪ್​ ಕೃಷ್ಣ ಎಂದು ಕರೆಯಲಾರಂಭಿಸಿದ್ದು, ಆತನ ಮನೆಯನ್ನು ಟ್ರಂಪ್​ ಮನೆ ಎಂದೇ ಕರೆಯಲಾರಂಭಿಸಿದ್ದಾರೆ.
ಇನ್ನು ರಜಿನಿ ಅವರ ಸಿನಿಮಾ ವಿಚಾರಕ್ಕೆ ಬರುವುದಾರೆ ಇತ್ತೀಚೆಗಷ್ಟೇ ಜೈಲರ್​ ಹೆಸರಿನ ಬ್ಲಾಕ್​ ಬಸ್ಟರ್​ ಸಿನಿಮಾವನ್ನು ಅಭಿಮಾನಿಗಳಿ ಕೊಟ್ಟಿದ್ದಾರೆ. ಇದೀಗ 170ನೇ ಸಿನಿಮಾದ ಶೂಟಿಂಗ್​ನಲ್ಲಿ ಬಿಜಿಯಾಗಿದ್ದಾರೆ. ಈ ಸಿನಿಮಾಗೆ ಇನ್ನು ಹೆಸರಿಟ್ಟಿಲ್ಲ. 2024ರ ಬೇಸಿಗೆಯಲ್ಲಿ ಈ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.(ಏಜೆನ್ಸೀಸ್​)
ಭಾರತದಲ್ಲಿ ಒಬ್ಬಾತನಿಗೆ ದೇವರಾದ ಟ್ರಂಪ್​: ಪ್ರತಿ ದಿನ ಟ್ರಂಪ್​ ಪ್ರತಿಮೆಗೆ ಪೂಜೆ, ಹಾಲಿನ ಅಭಿಷೇಕ ಮಾಡುತ್ತಾನೆ ಈ ಭಕ್ತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − nine =
Remember me
