ಚೆನ್ನೈ:ನಾಲ್ಕು ಯುವಕರನ್ನು ಮದುವೆಯಾಗಿ ಹಣ, ಒಡವೆ ದೋಚಿ ವಂಚಿಸುತ್ತಿದ್ದ ಖತರ್ನಾಕ್​ ಮಹಿಳೆಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ತಾನು ಅನಾಥೆ ಎಂದು ಹೇಳಿ, ಅನುಕಂಪ ಗಿಟ್ಟಿಸಿಕೊಂಡು ವಂಚಿಸುವುದೇ ಈಕೆಯ ಕಾಯಕವಾಗಿತ್ತು.
ಬಂಧಿತ ಮಹಿಳೆಯನ್ನು ಅಭಿನಯ (28) ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಚೆನ್ನೈನ ಪಶ್ಚಿಮ ತಾಂಬರಂನ ರಂಗನಾಥಪುರಂ ನಿವಾಸಿ ನಟರಾಜನ್​ (25) ಎಂಬುವನನ್ನು ಅಭಿನಯ ಪರಿಚಯ ಮಾಡಿಕೊಂಡಿದ್ದಳು. ಇಬ್ಬರು ಊರ್ಪಕ್ಕಂನ ಖಾಸಗಿ ಕಂಪನಿಯಲ್ಲಿ ಸಹೋದ್ಯೋಗಿಯಾಗಿದ್ದರು. ನಟರಾಜನ್​ ಬಳಿ ತಾನು ಅನಾಥೆ ಎಂದು ಹೇಳಿಕೊಂಡಿದ್ದಳು. ಇದರಿಂದಾಗಿ ನಟರಾಜನ್​ಗೆ ಆಕೆಯ ಮೇಲೆ ಅನುಕಂಪ ಮೂಡಿ, ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಬಳಿಕ ಮನೆಯವರನ್ನು ಒಪ್ಪಿಸಿ, ತಾಂಬರಂನ ರಂಗನಾಥಪುರಂ ಪೆರುಮಾಳ್​ ದೇವಸ್ಥಾನದಲ್ಲಿ ಅಭಿನಯಳನ್ನು ನಟರಾಜನ್​ ವರಿಸಿದ್ದ.
ಮದುವೆಯಾದ ಬಳಿಕ ಅಕ್ಟೋಬರ್​ 19ರಂದು 15 ಸವರನ್​ ಚಿನ್ನಾಭರಣೆ ಮತ್ತು 20 ಸಾವಿರ ರೂಪಾಯಿ ಹಣದೊಂದಿಗೆ ಅಭಿನಯ ನಟರಾಜನ್​ ಮನೆಯಿಂದ ನಾಪತ್ತೆಯಾಗಿದ್ದಳು. ಈ ಸಂಬಂಧ ತಾಂಬರಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಭಿನಯಗಾಗಿ ಸಾಕಷ್ಟು ಹುಡುಕಾಡಿದರೂ ಆಕೆಯ ಸುಳಿವು ಸಿಗಲೇ ಇಲ್ಲ. ಬಳಿಕ ಅಭಿನಯಳ ಆಧಾರ್​ ಕಾರ್ಡ್​ ಪರಿಶೀಲಿಸಿದಾಗ ಆಕೆಯ ನಿಜ ಬಣ್ಣ ಬಯಲಾಗಿದೆ. ಅಭಿನಯ ಹೆಸರಿನಲ್ಲಿ 32 ಸಿಮ್​ ಕಾರ್ಡ್​ ಬಳಕೆಯಾಗಿದೆ ಎಂಬುದು ಪೊಲೀಸರಿಗೆ ತಿಳಿಯುತ್ತದೆ.
ತನಿಖೆ ಚುರುಕುಗೊಳಿಸಿದ ಪೊಲೀಸರು ಕೊನೆಗೂ ಅಭಿನಯಗಳನ್ನು ಬಂಧಿಸಿದ್ದಾರೆ. ಸೆಮ್ಮಂಚೇರಿ ಏರಿಯಾದ ಮಹಿಳಾ ಹಾಸ್ಟೆಲ್​ನಲ್ಲಿದ್ದ ಆಕೆಯನ್ನು ನವೆಂಬರ್​ 30ರಂದು ಬಂಧಿಸಿ, ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆಕೆಯ ಕುರಿತಾದ ಮತ್ತಷ್ಟು ಸ್ಫೋಟಕ ಸಂಗತಿ ಬಯಲಾಗಿದೆ. ಆಕೆ ಈಗಾಗಲೇ ನಾಲ್ಕು ಮದುವೆಯಾಗಿದ್ದು, ನಾಲ್ವರ ಮನೆಯಿಂದ ಹಣ, ಆಭರಣ ದೋಚಿ, ವಂಚನೆ ಮಾಡಿರುವುದು ಬಹಿರಂಗವಾಗಿದೆ.
ಮದುರೈ ಮೂಲದ ಅಭಿನಯ 10ನೇ ತಗರತಿಯವರೆಗೆ ಓದಿದ್ದಾಳೆ. 2011ರಲ್ಲಿ ಮನ್ನಾರ್​ಗುಡಿಯ ವಿಜಯ್​ ಎಂಬುವನ ಜೊತೆ ಔಪಚಾರಿಕವಾಗಿ ಮದುವೆಯಾಗಿದ್ದ ಅಭಿನಯ, ಆತನೊಂದಿಗೆ ಕೆಲವೇ ತಿಂಗಳು ಸಂಸಾರ ಮಾಡಿ ಆತನನ್ನು ತೊರೆದಿದ್ದಳು. ಇದಾದ ಬಳಿಕ 2013ರಲ್ಲಿ ಸೆಂಥಿಲ್​ ಕುಮಾರ್​ ಎಂಬಾತನ್ನು ಎರಡನೇ ವಿವಾಹವಾಗಿದ್ದಳು. ಇವರಿಗೆ ಒಂದು ಗಂಡು ಮಗು ಕೂಡ ಜನಿಸಿದೆ. ನಂತರ ಸೆಂಥಿಲ್​ನಿಂದಲೂ ದೂರವಾಗಿ 2020ರಲ್ಲಿ ಪನ್ನೀರ್​ಸೆಲ್ವಂ ಎಂಬ ಆಟೋ ಚಾಲಕನೊಂದಿಗೆ ವಿವಾಹವಾಗಿದ್ದಳು. ಆತನೊಂದಿಗೆ ಕೇವಲ 10 ದಿನ ಮಾತ್ರ ಸಂಸಾರ ಮಾಡಿದ್ದಳು. ಆ ಬಳಿಕ ನಟರಾಜನ್​ ಜತೆ ಮದುವೆಯಾಗಿ ಕೇವಲ ಒಂದೂವರೆ ತಿಂಗಳು ಮಾತ್ರ ಸಂಸಾರ ಮಾಡಿ ಹಣ, ಆಭರಣದೊಂದಿಗೆ ಪರಾರಿಯಾಗಿ ಇದೀಗ ಸಿಕ್ಕಿಬಿದ್ದಿದ್ದಾಳೆ.
ತನ್ನ ಎರಡನೇ ಪತಿ ಸೆಂಥಿಲ್‌ಕುಮಾರ್ ಜತೆ ಸೇರಿ ಚಿನ್ನಾಭರಣಗಳನ್ನು ಗಿರವಿ ಇಟ್ಟು ಇಬ್ಬರೂ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಅಭಿನಯ ವಿವಾಹವಾಗದೆಯೂ ಕೆಲವರೊಂದಿಗೆ ವಾಸವಿದ್ದಳು ಎಂದು ತಿಳಿದುಬಂದಿದೆ. ಸದ್ಯ ಅಭಿನಯಾ ಮತ್ತು ಸೆಂಥಿಲ್​ಕುಮಾರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ ಮೂರು ಸವರನ್​ ಚಿನ್ನಾಭರಣ ಮತ್ತು 74 ಸಾವಿರ ರೂಪಾಯಿ ನಗದು ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.(ಏಜೆನ್ಸೀಸ್​)
ಪತಿಯ ಸ್ನೇಹಿತನ ಜತೆ 2ನೇ ಮದುವೆಗೆ ತಯಾರಿ! ನಟಿ ಮೀನಾ ಕೊಟ್ಟ ಸ್ಪಷ್ಟನೆ ಇಲ್ಲಿದೆ…

ಮದುವೆಗೂ ಮುನ್ನ ಲೈಂಗಿಕ ಕ್ರಿಯೆ ನಡೆಸಿದ್ರೆ 1 ವರ್ಷ ಜೈಲು ಶಿಕ್ಷೆ ಜೊತೆಗೆ ಬೀಳುತ್ತೆ ಭಾರಿ ದಂಡ!

ಕಿರುತೆರೆ ಜೊತೆ ಹಿರಿತೆರೆ ಜೊತೆಯಲಿ; ಡಬಲ್ ರೈಡಿಂಗ್​ನಲ್ಲಿ ತ್ರಿಬಲ್ ರೈಡಿಂಗ್ ಮೇಘಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 11 =
Remember me
