ಬಸ್ತರ್​:ಸಾಮಾನ್ಯವಾಗಿ ಒಂದು ದೀಪ ಎಷ್ಟು ಹೊತ್ತು ಉರಿಯಬಹುದು? ಒಂದು ಗಂಟೆ ಅಥವಾ ಎರಡು ಗಂಟೆ. ಆದರೆ ಇಲ್ಲೊಬ್ಬ ವ್ಯಕ್ತಿ ತಯಾರಿಸಿರುವ ದೀಪ ಬರೋಬ್ಬರಿ 24 ಗಂಟೆಗಳ ಕಾಲ ಉರಿಯುತ್ತಲೇ ಇರುತ್ತದೆ. ಛತ್ತೀಸಗಢದ ಮಾಂತ್ರಿಕ ಕುಂಬಾರನ ಕೈನಲ್ಲಿ ತಯಾರಾಗುತ್ತಿರುವ ಈ ದೀಪಗಳು ಪೂರ್ತಿ ಒಂದು ದಿನ ಬೆಳಕು ಕೊಡುತ್ತದೆ.
ಬಸ್ತರ್​ ಜಿಲ್ಲೆಯ ಕೊಂಡಗಾಂವ್​ ಹೆಸರಿನ ಸಣ್ಣ ಹಳ್ಳಿಯೊಂದರಲ್ಲಿ ಕುಂಬಾರ ಕೆಲಸ ಮಾಡುವ ಅಶೋಕ್​ ಚಕ್ರಹರಿ ಇದೀಗ ತಮ್ಮ ಮ್ಯಾಜಿಕ್​ ದೀಪಗಳಿಂದ ಪೂರ್ತಿ ದೇಶಕ್ಕೆ ಪರಿಚಿತರಾಗಿದ್ದಾರೆ. ಇವರು ಒಂದು ಸ್ಟಾಂಡ್​, ಅದರ ಮೇಲೊಂದು ದೀಪ, ಅದರ ಮೇಲೊಂದು ಡೂಮ್​ ರೀತಿಯಲ್ಲಿ ತಯಾರಿಸುತ್ತಾರೆ. ಮೇಲಿನ ಡೂಮ್​ನಲ್ಲಿ ಎಣ್ಣೆ ತುಂಬಿಸಿಟ್ಟುಕೊಳ್ಳಬಹುದು. ದೀಪದಲ್ಲಿ ಎಣ್ಣೆ ಖಾಲಿಯಾದಾಗ ನಾವು ಎಣ್ಣೆ ಹಾಕಬೇಕೆನ್ನುವ ತಾಪತ್ರಯವೇ ಇಲ್ಲ. ಅದನ್ನೂ ಕೂಡ ದೀಪವೇ ಮಾಡಿಕೊಳ್ಳುತ್ತದೆ.
ಇದನ್ನೂ ಓದಿ:ಭಾವಿ ಪತ್ನಿ ಬಿಟ್ಟು ಹೋದರೂ ಸಂಭ್ರಮದಿಂದ ಮದುವೆಯಾದ ಈತ; ಹಾಗಂತ ಬೇರೆ ಹುಡುಗಿಯನ್ನಲ್ಲ..!
ಅಶೋಕ್​ ಅವರು ಈ ಮ್ಯಾಜಿಕ್​ ದೀಪ ತಯಾರಿಸುವುದಕ್ಕೂ ಮುನ್ನ ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಮಾಮೂಲಿ ದೀಪಗಳ ಹೊರೆತಾಗಿ ಹೊಸ ರೀತಿಯ ದೀಪ ತಯಾರಿಸಬೇಕು ಎನ್ನುವ ಆಲೋಚನೆ 2019ರ ದೀಪಾವಳಿ ಸಮಯದಲ್ಲಿ ಬಂದಿತ್ತಂತೆ. ಅದಾದ ನಂತರ ಯೂಟ್ಯೂಬ್​ ಮೊರೆ ಹೋದ ಅಶೋಕ್​ ನೂರಾರು ವಿಡಿಯೋಗಳನ್ನು ನೋಡಿದ್ದಾರೆ. ದೀಪದಲ್ಲಿ ಯಾವ ರೀತಿಯ ವಿಶೇಷತೆ ತರಬಹುದು ಎನ್ನುವುದನ್ನು ವಿಡಿಯೋಗಳ ಮೂಲಕ ಕಲಿತುಕೊಂಡಿದ್ದಾರೆ. ಇದೀಗ ಅವರ ಮ್ಯಾಜಿಕ್​ ದೀಪಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಸಾವಿರಾರು ಜನರು ಈ ದೀಪಾವಳಿಯಲ್ಲಿ ಮ್ಯಾಜಿಕ್​ ದೀಪದಿಂದ ನಂದಾದೀಪ ಬೆಳಗುವ ಆಶಯ ತೋರಿಸಿದ್ದಾರೆ ಎನ್ನುತ್ತಾರೆ ಮಾಂತ್ರಿಕ ಕುಂಬಾರ ಅಶೋಕ್​.
ಅಂತೂ ಬಂತು ವಾಟ್ಸ್​ಆ್ಯಪ್​ ಪೇ: ಹೇಗಿದೆ ಗೊತ್ತಾ ಈ ಸೌಲಭ್ಯ

ಚಿಲ್‌ ಡೊನಾಲ್ಡ್‌ ಚಿಲ್‌… ಟ್ರಂಪ್‌ ವಿರುದ್ಧ ಸೇಡು ತೀರಿಸಿಕೊಂಡ ಗ್ರೇಟಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 7 =
Remember me
