ಮುಂಬೈ:ಬಾಲಿವುಡ್​ ನಟ ಶಾರುಖ್​ ಖಾನ್​ ಪುತ್ರ ಬಂಧಿಸಲ್ಪಟ್ಟಿರುವ ಮುಂಬೈ ಕ್ರೂಸ್​ ಶಿಪ್​ ಡ್ರಗ್ಸ್​ ಕೇಸಿನ ಮೇಲ್ವಿಚಾರಣೆ ನಡೆಸುತ್ತಿರುವ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೇಡೆ ವಿರುದ್ಧ ಮಹಾರಾಷ್ಟ್ರ ಸಚಿವ ನವಾಬ್​ ಮಲಿಕ್ ಹಲವು ಆರೋಪಗಳನ್ನು ಮಾಡಿದ್ದಾರೆ. ವಾಂಖೆಡೆ ಮುಸಲ್ಮಾನನಾಗಿದ್ದರೂ ಎಸ್​ಸಿ ಕ್ಯಾಟಗರಿಗೆ ಸೇರಿರುವುದಾಗಿ ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ಮೀಸಲಾತಿಯಡಿ ಸರ್ಕಾರಿ ಸೇವೆಗೆ ಸೇರಿದ್ದಾರೆಂಬುದು ಪ್ರಮುಖ ಆರೋಪ.
ಇದೀಗ ಈ ಬಗ್ಗೆ ಮಾತನಾಡಿರುವ ರಾಜ್ಯ ಸಾಮಾಜಿಕ ನ್ಯಾಯ ಸಚಿವ ಧನಂಜಯ ಮುಂಡೆ, ವಾಂಖೆಡೆಯ ಜಾತಿ ಪ್ರಮಾಣ ಪತ್ರದ ಸಿಂಧುತ್ವವನ್ನು ಯಾರಾದರೂ ಪ್ರಶ್ನಿಸಿ ತಮ್ಮ ಇಲಾಖೆಗೆ ದೂರು ನೀಡಿದಲ್ಲಿ ಅದರ ತನಿಖೆ ನಡೆಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:ಹಸು ಮೇಯಿಸಲು ಹೋದ ಅಮ್ಮ-ಮಗ ನೀರುಪಾಲು
ಈ ಬಗ್ಗೆ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದ್ದು, ವಾಂಖೆಡೆಯನ್ನು ಟಾರ್ಗೆಟ್ ಮಾಡುವುದು ರಾಜ್ಯ ಸರ್ಕಾರದ ಏಕೈಕ ಅಜೆಂಡಾ ಇದ್ದ ಹಾಗಿದೆ ಎಂದಿದೆ. “ರಾಜ್ಯ ಸಾಮಾಜಿಕ ನ್ಯಾಯ ಇಲಾಖೆಗೆ ದೂರು ಬಂದಲ್ಲಿ ತನಿಖೆ ನಡೆಸುವ ಹಕ್ಕಿದೆ. ವಾಂಖೆಡೆ ನಮ್ಮ ಪಕ್ಷದ ಕಾರ್ಯಕರ್ತನಲ್ಲ ಅಥವಾ ಯಾವುದೇ ಬಿಜೆಪಿ ನಾಯಕನ ಸಂಬಂಧಿಕನಲ್ಲ. ಆದರೆ, ಡ್ರಗ್​ ಪೆಡ್ಲರ್​ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿರುವ ಅಧಿಕಾರಿಯನ್ನು ಟಾರ್ಗೆಟ್​ ಮಾಡುತ್ತಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ಬಿಜೆಪಿ ನಾಯಕ ಪ್ರವೀಣ್ ದರೆಕರ್​ ಹೇಳಿದ್ದಾರೆ.(ಏಜೆನ್ಸೀಸ್)
ನ್ಯಾಯಬೆಲೆ ಅಂಗಡಿಗಳಿಂದ ಹಣ ವಸೂಲಿ! ಎಸಿಬಿ ದಾಳಿಯಲ್ಲಿ 5.61 ಲಕ್ಷ ರೂ. ಪತ್ತೆ

VIDEO| ಶಿವಣ್ಣನನ್ನು ತಬ್ಬಿ ಕಣ್ಣೀರಿಟ್ಟ ತೆಲುಗು ಸ್ಟಾರ್​ ಚಿರಂಜೀವಿ… ದುಃಖದಿಂದ ನೀರಾದ ಶಿವಣ್ಣ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:18 − 3 =
Remember me
