ನಾಗಪುರ:ಅಂತಾರಾಜ್ಯಮಟ್ಟದ ಜಿಎಸ್​ಟಿ ನಕಲಿ ಇನ್ವಾಯ್ಸ್ ಜಾಲ ಒಂದನ್ನು ಡೈರೆಕ್ಟೋರೇಟ್ ಜನರಲ್ ಆಫ್​ ಜಿಎಸ್​ಟಿ ಇಂಟೆಲಿಜೆನ್ಸ್ (ಡಿಜಿಜಿಐ) ಪತ್ತೆ ಹಚ್ಚಿದ್ದು, ಕೋಟ್ಯಂತರ ರೂಪಾಯಿ ವಹಿವಾಟು, ತೆರಿಗೆ ವಂಚನೆ ನಡೆದಿದೆ. ಈ ನಕಲಿ ಇನ್ವಾಯ್ಸ್ ಜಾಲದವರಿಂದ ಇನ್ವಾಯ್ಸ್ ಪಡೆದುಕೊಂಡ ಮೂವರು ತೆರಿಗೆದಾರರ ಪೈಕಿ ಒಬ್ಬರು ಮಹಾರಾಷ್ಟ್ರದವರಾದರೆ, ಇನ್ನಿಬ್ಬರು ಕರ್ನಾಟಕದವರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಂದ್ರಾಪುರ ಜಿಲ್ಲೆಯಲ್ಲಿ ತೆರಿಗೆದಾರರೊಬ್ಬರು ನಕಲಿ ಇನ್ವಾಯ್ಸ್ ಬಳಸಿದ ಬಗ್ಗೆ ದೂರು ಬಂದ ಕಾರಣ ತನಿಖೆ ನಡೆಸಿದ ವೇಳೆ ಈ ಜಾಲ ಪತ್ತೆಯಾಗಿದೆ. ನಕಲಿ ಇನ್ವಾಯ್ಸ್ ಬಳಸಿಕೊಂಡು ತಪ್ಪಾದ ಇನ್​ಪುಟ್​ ಟ್ಯಾಕ್ಸ್ ಕ್ರೆಡಿಟ್​ (ಐಟಿಸಿ) ಕ್ಲೇಮ್ ಮಾಡಲಾಗಿತ್ತು. ಒಟ್ಟಾರೆ 131 ಕೋಟಿ ರೂಪಾಯಿ ವಹಿವಾಟು ನಡೆಸಿದ ತೆರಿಗೆ ವಂಚಕರು 26 ಕೋಟಿ ರೂಪಾಯಿ ಐಟಿಸಿ ಕ್ಲೇಮ್ ಮಾಡಿದ್ದಾರೆ.
ಇದನ್ನೂ ಓದಿ:ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯಲ್ಲಿ ಸರ್ಕಾರದ ತಪ್ಪಿಲ್ಲ ಎಂದ ವಿಧಾನ ಪರಿಷತ್ ಸದಸ್ಯ ಶಶೀಲ ಜಿ.ನಮೋಶಿ
ನಕಲಿ ಇನ್ವಾಯ್ಸ್ ಒದಗಿಸುವ ಜಾಲದ ಕಿಂಗ್​ಪಿನ್​ ಕರ್ನಾಟಕದಲ್ಲೇ ಇದ್ದಾನೆ. ಆತನನ್ನು ಬಲೆಗೆ ಕೆಡವಲು ಡಿಜಿಜಿಐ ಅಧಿಕಾರಿಗಳು ಈಗಾಗಲೇ ಕ್ರಮ ತೆಗೆದುಕೊಂಡಿದ್ದಾರೆ. ಕರ್ನಾಟಕದಲ್ಲೂ ಅನೇಕರು ಈತನಿಂದ ನಕಲಿ ಇನ್ವಾಯ್ಸ್ ಪಡೆಯುತ್ತಿರುವುದು ಗಮನಕ್ಕೆ ಬಂದಿದ್ದು, ವ್ಯಾಪಕ ತೆರಿಗೆ ವಂಚನೆ ಆಗಿರುವ ಸಾಧ್ಯತೆ ಇದ್ದು, ತನಿಖೆ ಆರಂಭಿಸಲಾಗಿದೆ ಎಂದು ಡಿಜಿಜಿಐ ಮೂಲಗಳು ತಿಳಿಸಿವೆ. (ಏಜೆನ್ಸೀಸ್)
ದಾವೂದ್ ಆಪ್ತ ಇಕ್ಬಾಲ್ ಮಿರ್ಚಿಯ 500 ಕೋಟಿ ರೂಪಾಯಿ ಆಸ್ತಿ ಜಾರಿ ನಿರ್ದೇಶನಾಲಯದ ವಶದಲ್ಲಿ ಭದ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
