ನಾಶಿಕ್​:ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ದೇವಲಾಲಿಯಲ್ಲಿರುವ ರಕ್ಷಣಾ ವಸತಿ ಸಮುಚ್ಚಯ, ಸೈನಿಕ ತರಬೇತಿ ಶಾಲೆ ಮುಂತಾದ ಸೂಕ್ಷ್ಮ ಪ್ರದೇಶಗಳ ಫೋಟೋಗಳನ್ನು ಪಾಕಿಸ್ತಾನದ ವಾಟ್ಸ್​ಆ್ಯಪ್ ಗ್ರೂಪಿಗೆ ರವಾನಿಸಿದಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ 21 ವರ್ಷದವನಾಗಿದ್ದು ಸಂಜೀವ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ಶುಕ್ರವಾರ ಸೇನಾ ಪ್ರದೇಶದೊಳಗೆ ಫೋಟೋಗ್ರಫಿ, ವಿಡಿಯೋಗ್ರಫಿ ನಿಷೇಧಿತ ಪ್ರದೇಶಕ್ಕೆ ತೆರಳಿ ತನ್ನ ಮೊಬೈಲ್​ ಮೂಲಕ ಫೋಟೋ ಕ್ಲಿಕ್ಕಿಸಿದ್ದ, ಅಲ್ಲದೆ ವಿಡಿಯೋಗಳನ್ನೂ ಮಾಡಿದ್ದ. ಇದೇ ವೇಳೆ ಅಲ್ಲಿದ್ದ ಸೈನಿಕರು ಈತನ ಚಲನವಲನ ಗಮನಿಸಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ ವೇಳೆ, ಮೊಬೈಲ್​ನಲ್ಲಿ ಕ್ಲಿಕ್ಕಿಸಿದ್ದ ಫೋಟೋ, ವಿಡಿಯೋಗಳನ್ನು ಪಾಕಿಸ್ತಾನದ ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಶೇರ್ ಮಾಡಿರುವುದು ದೃಢಪಟ್ಟಿದೆ. ಶನಿವಾರ ಸಂಜೆ ಈತನನ್ನು ದೇವಲಾಲಿ ಕ್ಯಾಂಪ್ ಪೊಲೀಸ್ ವಶಕ್ಕೆ ಸೇನೆ ಒಪ್ಪಿಸಿದೆ. ಸೇನಾಧಿಕಾರಿ ನೀಡಿದ ದೂರಿನಂತೆ, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:ಸಿಸಿ ಕ್ಯಾಮರಾ ಅಳವಡಿಸಲು ಗಡುವು: ಅಪರಾಧ ಕಡಿವಾಣಕ್ಕೆ ಕ್ಯಾಮರಾ ಕಡ್ಡಾಯ
ಆರೋಪಿ ಸಂಜೀವ್ ಕುಮಾರ್ ಬಿಹಾರದ ಗೋಪಾಲಗಂಜ್ ಜಿಲ್ಲೆಯವನು. ಸೇನಾ ಪ್ರದೇಶದಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ದೇವಲಾಲಿ ಕ್ಯಾಂಪ್ ರೈಲ್ವೆ ನಿಲ್ದಾಣದ ಸಮೀಪ ವಾಸವಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ಟ್ವೀಟ್​ ವಿಪಕ್ಷ ಕಾಂಗ್ರೆಸಿನ ಡ್ರಾಮಾ ನಡೆಯೋಲ್ಲ: ಈಶ್ವರಪ್ಪ ವಾಗ್ದಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 12 =
Remember me
