ನವದೆಹಲಿ:1971ರಲ್ಲಿ ಭಾರತ- ಪಾಕಿಸ್ತಾನ ನಡುವಿನ ಯುದ್ಧದಲ್ಲಿ ಅಪ್ರತಿಮ ಶೌರ್ಯ ಮೆರೆದಿದ್ದ ಲೆಫ್ಟಿನೆಂಟ್‌ ಜನರಲ್ ರಾಜ್‌ ಮೋಹನ್‌ ವೋಹ್ರಾ ಅವರು ಕರೊನಾ ವೈರಸ್​ಗೆ ಬಲಿಯಾಗಿದ್ದಾರೆ.
88 ವರ್ಷದ ವೋಹ್ರಾ ಅವರು ಮಹಾವೀರ ಚಕ್ರ ‍ಪ್ರಶಸ್ತಿ ಪುರಸ್ಕೃತರಾಗಿದ್ದರು. ವಯೋ ಸಹಜ ಹೃದಯ ಸಂಬಂಧಿ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಹೃದಯನಾಳಕ್ಕೆ ಸ್ಚಂಟ್ ಅಳವಡಿಸಿಕೊಳ್ಳುವ ಸಲುವಾಗಿ ಅವರು  ಇಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಈ ವೇಳೆ ವೈದ್ಯರು ತಪಾಸಣೆ ನಡೆಸಿದಾಗ ಕರೊನಾ ಸೋಂಕು ಇರುವುದು ಪತ್ತೆಯಾಗಿದೆ. ಚಿಕಿತ್ಸೆ ನೀಡಲಾಗುತ್ತಿದ್ದರೂ ಜೂನ್‌ 14 ರಂದು ಅವರು ಮೃತಪಟ್ಟಿದ್ದು, ಅಂದೇ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಆಸ್ಪತ್ರೆಯ ಮೂಲ ಹೇಳಿದೆ.
ಇದನ್ನೂ ಓದಿ:ಕನ್ನಡೇತರರಿಗೆ ಕನ್ನಡ ಕಲಿಸಲು ಸಚಿವರಿಂದ ಶುರುವಾಗಿದೆ ಹೊಸ ಪ್ಲ್ಯಾನ್​
1971ರಲ್ಲಿ ಭಾರತ- ಪಾಕಿಸ್ತಾನ ನಡುವಿನ ಯುದ್ಧದಲ್ಲಿ ಅವರು ತೋರಿಸಿದ್ದ ಶೌರ್ಯಕ್ಕಾಗಿ 1972ರಲ್ಲಿ ಮಹಾವೀರ ಚಕ್ರ ‍ಪ್ರಶಸ್ತಿ ನೀಡಲಾಗಿತ್ತು. ಶಸ್ತ್ರಸಜ್ಜಿತ ಸೇನಾ ವಿಭಾಗದ ಮುಖ್ಯ ಕಮಾಂಡಿಂಗ್‌ ಆಗಿದ್ದ ಇವರು ಭಾರತೀಯ ಸೇನೆಯ ಪೂರ್ವ ಕಮಾಂಡ್‌ನ ಜನರಲ್‌ ಕಮಾಂಡಿಂಗ್‌ ಆಫೀಸರ್‌ ಕೂಡ ಆಗಿದ್ದರು.
ಗಡಗಡ ನಡುಗಿತು ಟ್ರಂಪ್​ ಕೈ, ಶುರುವಾಯ್ತು ಗುಮಾನಿ: ವಿಡಿಯೋ ವೈರಲ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four + eleven =
Remember me
