ಹಿರಿಯ ನಟ ಮಿಥುನ್​ ಚಕ್ರವರ್ತಿ ಪುತ್ರ, ಬಾಲಿವುಡ್​ ನಟ ಮಹಾಕ್ಷಯ್​ ಚಕ್ರವರ್ತಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಮುಂಬೈ ಮೂಲದ 38 ವರ್ಷದ ಮಹಿಳೆ ನೀಡಿದ ದೂರಿನ ಅನ್ವಯ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ.
‘ನಾನು ಮಹಾಕ್ಷಯ್​ ಜತೆ 2015ರಿಂದ 2018ರವರೆಗೆ ಸಂಬಂಧ ಹೊಂದಿದ್ದೆ. ಆಗ ಅವರು ನನ್ನನ್ನೇ ಮದುವೆಯಾಗುವುದಾಗಿ ಮಾತು ಕೊಟ್ಟಿದ್ದರು. ಆದರೆ ನಂತರ ಮೋಸ ಮಾಡಿದ್ದಾರೆ’ ಎಂದು ಆಕೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ನಾವಿಬ್ಬರೂ ರಿಲೇಶನ್​ಶಿಪ್​​ನಲ್ಲಿದ್ದಾಗ ಪಶ್ಚಿಮ ಅಂಧೇರಿಯ ಆದರ್ಶನಗರದಲ್ಲಿ ಇರುವ ಅವರ ಫ್ಲ್ಯಾಟ್​ಗೆ ಪದೇಪದೆ ಹೋಗುತ್ತಿದ್ದೆ. ಆ ಫ್ಲ್ಯಾಟ್​ನ್ನು 2015ರಲ್ಲಿ ಅವರು ಖರೀದಿಸಿದ್ದರು. ನಾನು ಅಲ್ಲಿಗೆ ಹೋದಾಗ ನನಗೆ ಮತ್ತು ಬರುವ ತಂಪು ಪಾನೀಯ ಕುಡಿಸಿ, ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ನಾನು ಗರ್ಭಿಣಿಯಾಗಿದ್ದೆ, ಆದರೆ ಮಹಾಕ್ಷಯ್​ ಮಾತ್ರೆಗಳನ್ನು ಕೊಟ್ಟು ಅದನ್ನು ಅಬಾರ್ಶನ್​ ಮಾಡಿಸಿದರು’ ಎಂದು ಆರೋಪಿಸಿದ್ದಾರೆ.
‘ಮಹಾಕ್ಷಯ್​ ಎದುರು ಪದೇಪದೆ ಮದುವೆ ಪ್ರಸ್ತಾಪವನ್ನು ಇಡುತ್ತಲೇ ಇದ್ದೆ. ಆದರೆ 2018ರಲ್ಲಿ ಆತ ಖಡಾಖಂಡಿತವಾಗಿ ನಿರಾಕರಿಸಿದ. ಆಗ ನಮ್ಮಿಬ್ಬರ ಮಧ್ಯೆ ಜಗಳ ಆಯಿತು. ನಾನು ಮಹಾಕ್ಷಯ್​ನನ್ನು ಕರೆಯಲು ಹೋದಾಗ ಅವನ ತಾಯಿ ಯೋಗಿತಾ ಬಾಲಿ ನನಗೆ ಬೆದರಿಕೆ ಹಾಕಿದ್ದಾರೆ’ ಎಂದೂ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + fourteen =
Remember me
