ಮುಂಬೈ:ಮಹಾಭಾರತ ಧಾರಾವಾಹಿ ಖ್ಯಾತಿಯ ಶಕುನಿ ಪಾತ್ರಧಾರಿ ಗುಫಿ ಪೇಂಟಲ್ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.
ಇದನ್ನೂ ಓದಿ:50ನೇ ವಿವಾಹ ವಾರ್ಷಿಕೋತ್ಸವ: ಬ್ಲಾಗ್​ನಲ್ಲಿ ಖುಷಿ ಹಂಚಿಕೊಂಡ ಬಿಗ್​ಬಿ
78 ವರ್ಷದ ಗುಫಿಯು ಹೃದಯ ಮತ್ತು ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದು. ಮುಂಬೈನ ಅಂಧೇರಿಯ ಬೆಲ್ಲೆವ್ಯೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟಿ ಟೀನಾ ಘಾಯ್ ತಮ್ಮ ಇನ್​ಸ್ಟಾಗ್ರಾಂ​ನಲ್ಲಿ ಈ ಕುರಿತಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
1975ರ ರಫೂ ಚಕ್ಕರ್ ಚಲನಚಿತ್ರದೊಂದಿಗೆ ನಟನಾ ವೃತ್ತಿಯನ್ನು ಆರಂಭಿಸಿದ ಗುಫಿ ಅವರು ಶಾ ಜಫರ್, ಕಾನೂನ್, ಓಂ ನಮಃ ಶಿವಾಯ, ಸಿಐಡಿ, ಶ್​ ಕೋಯಿ ಹೈ, ದ್ವಾರಕಾಧೀಶ ಭಗವಾನ್ ಶ್ರೀ ಕೃಷ್ಣ, ರಾಧಾಕೃಷ್ಣ ಮತ್ತು ಜೇ ಕನಿಯಾ ಲಾಲ್ ಕಿ ಧಾರಾವಾಹಿಗಳಲ್ಲಿ ನಟಿಸಿದ್ದರು.
ಅಲ್ಲದೇ, ರಿಷಿ ಕಪೂರ್, ನೀತು ಕಪೂರ್ ಮತ್ತಿತರ ಜತೆ ನಟಿಸಿದ್ದ ಅವರು ದಿಲ್ಲಗಿ, ದೇಶ್ ಪರದೇಶ್ ಮತ್ತು ಸುಹಾಗ್ ಚಿತ್ರಗಳಲ್ಲಿ ನಟಿಸಿದ್ದಾರೆ. ಗುಫಿ 1988ರ ಮಹಾಭಾರತ ಧಾರಾವಾಹಿಯ ಶಕುನಿ ಪಾತ್ರದ ಮೂಲಕ ಅಪಾರ ಹೆಸರನ್ನು ಗಳಿಸಿದ್ದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 8 =
Remember me
