ವಿಶ್ವವ್ಯಾಪಿ ಮಾರಣಹೋಮ ಉಂಟು ಮಾಡುತ್ತಿರುವ ಕರೊನಾ ಸೋಂಕು, ಮಾನವ ಜೀವಹಾನಿಯ ಜತೆಗೆ ಬದುಕಿರುವವರ ಬದುಕನ್ನು ಮೂರಾಬಟ್ಟೆಯನ್ನಾಗಿ ಮಾಡುತ್ತಿದೆ. ವಿಶೇಷವಾಗಿ ಕಾರ್ವಿುಕ ವಲಯ ಅದರಲ್ಲೂ ಸಂಘಟಿತ ವಲಯದ ಕಾರ್ವಿುಕರನ್ನು ಹಿಂಡಿಹಿಪ್ಪೆ ಮಾಡುತ್ತಿದೆ. ಕರೊನಾ ಕಾರಣ ಜಾಗತಿಕವಾಗಿ 125 ಕೋಟಿ ಕಾರ್ವಿುಕರು ಉದ್ಯೋಗ ಕಳೆದು ಕೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಬಹುತೇಕರು ಕಡಿಮೆ ಕೌಶಲವಂತರಾಗಿದ್ದು, ಸಂಬಳ ಕೂಡ ಕಡಿಮೆ ಇದೆ. ದಿಢೀರ್ ಉದ್ಯೋಗ ನಷ್ಟವಾದರೆ ಇವರನ್ನೇ ನೆಚ್ಚಿಕೊಂಡಿರುವ ಕುಟುಂಬಗಳು ಬೀದಿಗೆ ಬರುತ್ತವೆ. ಇನ್ನು ಅಸಂಘಟಿತ ವಲಯದಲ್ಲಿ 200 ಕೋಟಿ ಕಾರ್ವಿುಕರ ಉದ್ಯೋಗ ಆಪತ್ತಿನಲ್ಲಿದೆ. ಈ ಕಾರ್ವಿುಕರು ಬಹುತೇಕವಾಗಿ ಬಡರಾಷ್ಟ್ರಗಳಲ್ಲೇ ಇದ್ದಾರೆ. ಇವರಿಗೆ ಉದ್ಯೋಗ ಇಲ್ಲದಿದ್ದರೆ ಕೈಯಲ್ಲಿರುವ ಬಿಡಿಗಾಸು ಎಷ್ಟು ದಿನಕ್ಕೆ ಸಾಲುತ್ತದೆ ಎಂಬ ದೊಡ್ಡ ಪ್ರಶ್ನೆ ಇದೆ.ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾರ್ವಿುಕ ಸಂಸ್ಥೆ (ಐಎಲ್​ಒ) ನಡೆಸಿದ ಅಧ್ಯಯನದ ಪ್ರಕಾರ 2020ರ ಎರಡನೇ ತ್ರೖೆಮಾಸಿಕದಲ್ಲಿ ದುಡಿಯುವ ಅವಧಿ ಶೇಕಡ 6.7ರಷ್ಟು ನಷ್ಟವಾಗಲಿದೆ. ಅಂದರೆ 19.50 ಕೋಟಿ ಪೂರ್ಣಕಾಲಿಕ ಕಾರ್ವಿುಕರ ಉದ್ಯೋಗದ ಅವಧಿಗೆ ಕುತ್ತುಂಟಾಗುತ್ತದೆ. 2020ರಲ್ಲಿ ಮಧ್ಯಮವರ್ಗದ ಆದಾಯದಲ್ಲೂ ಗಣನೀಯ ನಷ್ಟ ಉಂಟಾಗಲಿದೆ. ನಿರುದ್ಯೋಗ ಪ್ರಮಾಣದಲ್ಲೂ ಗಮರ್ನಾಹ ಏರಿಕೆಯಾಗಲಿದ್ದು, ಮಾರ್ಚ್ ಅಂತ್ಯಕ್ಕೆ ನಡೆಸಿದ ಸಮೀಕ್ಷೆ ಪ್ರಕಾರ 2.50 ಕೋಟಿಯಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ.
ಭಾರತದಲ್ಲಿ ನಿರುದ್ಯೋಗ ಪ್ರಮಾಣ ಮೂರುಪಟ್ಟು ಹೆಚ್ಚಳ
ಕರೊನಾ ಸೋಂಕಿನ ಕಾರಣ ದಿಗ್ಬಂಧನ (ಲಾಕ್​ಡೌನ್) ವಿಧಿಸಿರುವುದರಿಂದ ಭಾರತದಲ್ಲಿ ನಿರುದ್ಯೋಗ ಪ್ರಮಾಣ ಮೂರು ಪಟ್ಟು ಹೆಚ್ಚಳವಾಗಿದೆ. ಅಂದರೆ ಲಾಕ್​ಡೌನ್ ಪೂರ್ವದಲ್ಲಿ ಶೇಕಡ 8.4 ಇದ್ದ ನಿರುದ್ಯೋಗ, ಶೇ.23.8ಕ್ಕೆ ಏರಿಕೆ ಆಗಿದೆ ಎಂದು ಭಾರತೀಯ ಆರ್ಥಿಕತೆ ನಿಗಾ ಕೇಂದ್ರದ (ಸಿಎಂಐಇ) ಅಧ್ಯಯನ ತಿಳಿಸಿದೆ. ವಲಸೆ ಕಾರ್ವಿುಕರು ಹಿಂಡು ಹಿಂಡಾಗಿ ತಮ್ಮ ಊರುಗಳತ್ತ ಮುಖಮಾಡಿದ್ದರಿಂದ ಏಪ್ರಿಲ್ 5ರ ವೇಳೆಗೆ ನಿರುದ್ಯೋಗ ಪ್ರಮಾಣ ನಗರದಲ್ಲಿ ಶೇ.30.9ರಷ್ಟು ಏರಿಕೆ ಕಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಇದರ ಪ್ರಮಾಣ ಶೇ.20.2ಕ್ಕೆ ಹೆಚ್ಚಳಗೊಂಡಿದೆ. ಒಟ್ಟಾರೆ ದೇಶದಲ್ಲಿ ಈ ಪ್ರಮಾಣ ಸರಾಸರಿ ಶೇ.23.4ಕ್ಕೆ ಏರಿದೆ ಸಿಎಂಐಇ ಹೇಳಿದೆ. ಉದ್ಯೋಗವೂ ಇಲ್ಲದೆ, ಕೈಯಲ್ಲಿದ್ದ ಹಣವೂ ಖಾಲಿಯಾಗಿ ಸ್ವಗ್ರಾಮಗಳತ್ತ ಹೊರಟ ವಲಸೆ ಕಾರ್ವಿುಕರನ್ನು ಪಟ್ಟಣ ಪ್ರದೇಶದಲ್ಲೇ ಅಥವಾ ಮಾರ್ಗ ಮಧ್ಯದಲ್ಲೇ ತಡೆದು ಆಶ್ರಯ ಕಲ್ಪಿಸಿರುವ ಸರ್ಕಾರ, ಇಂಥ 84 ಲಕ್ಷ ಮಂದಿಗೆ ಪ್ರತಿ ದಿನ ಆಹಾರ ಪೂರೈಕೆ ಮಾಡುತ್ತಿರುವುದಾಗಿ ತಿಳಿಸಿದೆ.
ಐವರಲ್ಲಿ ನಾಲ್ವರಿಗೆ ಉದ್ಯೋಗಾತಂಕ
ಸೋಂಕು ತೀವ್ರ ಪ್ರಮಾಣದಲ್ಲಿರುವ ದೇಶಗಳಲ್ಲಿ ಪ್ರತಿ ಐವರು ಕಾರ್ವಿುಕರಲ್ಲಿ ನಾಲ್ವರು ಭಾಗಶಃ ಅಥವಾ ಪೂರ್ಣವಾಗಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಐಎಲ್​ಒ ಗುರುತಿಸಿರುವ ಪ್ರಕಾರ, ಜಾಗತಿಕವಾಗಿ ಸದ್ಯ 330 ಕೋಟಿ ಕಾರ್ವಿುಕರು ದುಡಿಮೆಯಲ್ಲಿದ್ದು, ಈ ಪೈಕಿ ಶೇ.81ರಷ್ಟು ಮಂದಿಗೆ ಕರೊನಾ ಉಂಟುಮಾಡಿರುವ ತಲ್ಲಣದ ಬಿಸಿ ತಟ್ಟಿದೆ.
ಭಾರತದ ರಿಟೇಲ್ ವಲಯದಲ್ಲಿ 80 ಸಾವಿರ ಉದ್ಯೋಗ ನಷ್ಟ
ಕರೊನಾ ಕಾರಣ ಲಾಕ್​ಡೌನ್ ಜಾರಿಯಲ್ಲಿ ಇರುವುದರಿಂದ ಭಾರತದ ಚಿಲ್ಲರೆ (ರಿಟೇಲ್) ವ್ಯಾಪಾರೋದ್ಯಮದಲ್ಲಿ 80 ಸಾವಿರ ಉದ್ಯೋಗ ನಷ್ಟವಾದ ಅಂದಾಜು ಇದೆ. ಈ ಉದ್ಯೋಗಿಗಳಲ್ಲಿ ಬಹುತೇಕರು ಅಸಂಘಟಿತ ವಲಯದಲ್ಲೇ ಇದ್ದಾರೆ. ಶೇಕಡ 5 ಸಂಘಟಿತ ವಲಯದವರು ಎಂದು ಗುರುತಿಸಲಾಗಿದೆ. ರಿಟೇಲ್ ವಲಯದಲ್ಲಿ 3,92,963 ಮಂದಿ ದೇಶಾದ್ಯಂತ ಉದ್ಯೋಗ ಮಾಡಿಕೊಂಡಿದ್ದಾರೆ. ಈಗ ವ್ಯಾಪಾರೋದ್ಯಮ ಸ್ಥಗಿತಗೊಂಡಿರುವುದರಿಂದ ಸಣ್ಣ ವ್ಯಾಪಾರಸ್ಥರು ಶೇ.30ರಷ್ಟು ಉದ್ಯೋಗಿಗಳನ್ನು ತಾತ್ಕಾಲಿಕವಾಗಿ (ಲೇಆಫ್) ಮನೆಗೆ ಕಳುಹಿಸಿದ್ದಾರೆ. ಮಧ್ಯಮಗಾತ್ರದ ವ್ಯಾಪಾರಿಗಳು ಶೇ.12ರಷ್ಟು ಮತ್ತು ದೊಡ್ಡ ಉದ್ಯಮಿಗಳು ಶೇ.5ರಷ್ಟು ನೌಕರರನ್ನು ಕಡಿತ ಮಾಡಿದ್ದಾರೆ. ಸಗಟು ಮತ್ತು ಚಿಲ್ಲರೆ ಎರಡೂ ವಲಯದಲ್ಲಿ ಸರಾಸರಿ ಶೇ.20ರಷ್ಟು ಕಾರ್ವಿುಕರಿಗೆ ಅಂದರೆ 80 ಸಾವಿರ ಮಂದಿಗೆ ಉದ್ಯೋಗ ನಷ್ಟವಾಗಿದೆ ಎಂದು ಭಾರತೀಯ ರಿಟೇಲರ್ಸ್ ಅಸೋಷಿಯೇಷನ್ (ಆರ್​ಎಐ) ನಡೆಸಿದ ಸಮೀಕ್ಷೆಯಲ್ಲಿ ಉಲ್ಲೇಖವಾಗಿದೆ. ಲಾಕ್​ಡೌನ್ ಅವಧಿ ನಂತರವೂ ಸಂಘಟಿತ ಮತ್ತು ಅಸಂಘಟಿತ ವಲಯದಲ್ಲಿ 13.60 ಕೋಟಿ ಉದ್ಯೋಗ ನಷ್ಟವಾಗುವ ಅಂದಾಜು ಇದೆ ಎಂದು ಮತ್ತೊಂದು ಅಧ್ಯಯನ ಹೇಳಿದೆ.
ಐಎಲ್​ಒ ಸಲಹೆ
ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಉದ್ಯೋಗದಾತರು ಮತ್ತು ಉದ್ಯೋಗಿಗಳು ಇಬ್ಬರಿಗೂ ಅನುಕೂಲವಾಗುವಂತಹ ಸಮಗ್ರ ಉದ್ಯೋಗ ನೀತಿಯ ಅಗತ್ಯವಿದೆ. ಈ ನೀತಿಯಲ್ಲಿ ಉದ್ಯೋಗ, ವೇತನ ರಕ್ಷಣೆಯ ಅಂಶಗಳಿರಬೇಕು. ಇದರಿಂದ ದೊಡ್ಡಮಟ್ಟದ ನಷ್ಟವನ್ನು ಕನಿಷ್ಠ ಮಟ್ಟಕ್ಕೆ ತರಬಹುದಾಗಿದೆ ಮತ್ತು ಆತಂಕವನ್ನು ನಿವಾರಿಸಿ ಉದ್ಯೋಗ ಸ್ಥಿರತೆಯ ಅಭಯವನ್ನು ಕಾರ್ವಿುಕರಿಗೆ ನೀಡಬಹುದು ಎಂಬುದು ಐಎಲ್​ಒ ಮುಖ್ಯಸ್ಥ ಗೈ ರೈಡರ್ ಅಭಿಪ್ರಾಯ.
https://www.vijayavani.net/covid-19-is-a-rich-mans-disease-tamil-nadu-cm/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 8 =
Remember me
