ಮುಂಬೈ:ಮಹಾರಾಷ್ಟ್ರದ ಪಲ್ಘಾರ್​ ಜಿಲ್ಲೆಯ ವಾಸೈನಲ್ಲಿರುವ ಕೋವಿಡ್​ ಕೇಂದ್ರದಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ಅವಘಡದಲ್ಲಿ 13 ಸೋಂಕಿತರು ಸಜೀವ ದಹನವಾಗಿದ್ದಾರೆ.
ವಾಸೈ ವಿರಾರ್ ಮುನ್ಸಿಪಲ್ ಕಾರ್ಪೊರೇಶನ್​ನ ಕರೋನಾ ನಿಯಂತ್ರಣ ಕೊಠಡಿಯಲ್ಲಿ ದುರ್ಘಟನೆ ಸಂಭವಿಸಿದೆ.
ವಿರಾರ್ ಪಶ್ಚಿಮದಲ್ಲಿರುವ ವಿಜಯ್ ವಲ್ಲಭ್ ಆಸ್ಪತ್ರೆಯಲ್ಲಿ 15 ರೋಗಿಗಳು ಐಸಿಯುನಲ್ಲಿದ್ದರು. ಈ ವೇಳೆ ಅಗ್ನಿ ಅವಘಡ ಸಂಭವಿಸಿದೆ. ಎಸಿ ಶಾರ್ಟ್​ ಸೆರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡಿರಬಹುದೆಂದು ನಂಬಲಾಗಿದೆ.
ಬೆಳಗಿನ ಜಾವ 3 ಗಂಟೆ ಸುಮಾರಿಗೆ ಸ್ನೇಹಿತರೊಬ್ಬರ ಕರೆ ಸ್ವೀಕರಿಸಿದೆ. ಅವರ ಅತ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ಕೇಳಿ ಅಲ್ಲಿಗೆ ಹೋಗುವಷ್ಟರಲ್ಲಿ ಆಸ್ಪತ್ರೆ ಹೊರಭಾಗದಲ್ಲಿ ಅಗ್ನಿಶಾಮಕ ವಾಹನಗಳು ನಿಂತಿದ್ದವು. ಕಟ್ಟಡದ ಎರಡನೇ ಮಹಡಿಯಲ್ಲಿರುವ ಐಸಿಯು ಕೇರ್​ ಹೊಗೆಯಿಂದ ಆವರಿಸಿತ್ತು. ಅಲ್ಲಿ ಇಬ್ಬರು ನರ್ಸ್​ಗಳು ಮಾತ್ರ ಇದ್ದರು. ವೈದ್ಯರನ್ನು ನೋಡಲು ಆಗಲಿಲ್ಲ. ಬೆಂಕಿಯನ್ನು ಹೋಗಿಸಲು ಅಗ್ನಿಶಾಮಕ ಸಿಬ್ಬಂದಿಗೆ ಸುಮಾರು ಅರ್ಧ ಗಂಟೆ ಬೇಕಾಯಿತು. ಬಳಿಕ ಅಲ್ಲಿಯೇ 8 ಮೃತದೇಹಗಳು ಪತ್ತೆಯಾಯಿತು ಎಂದು ಪ್ರತ್ಯಕ್ಷದರ್ಶಿ ಅವಿನಾಶ್​ ಪಾಟೀಲ್​ ಎಂಬುವರು ತಿಳಿಸಿದ್ದಾರೆ.
#UPDATE13 people have died so far in fire at COVID hospital in Virar, in Vasai Virar municipal limits, Palghar district(Earlier visuals)#Maharashtrapic.twitter.com/KHTiSqbLMY— ANI (@ANI)April 23, 2021
#UPDATE13 people have died so far in fire at COVID hospital in Virar, in Vasai Virar municipal limits, Palghar district(Earlier visuals)#Maharashtrapic.twitter.com/KHTiSqbLMY

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − two =
Remember me
