ಮುಂಬೈ:ಬಾಂಬ್​ ಸ್ಪೋಟಿಸಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್​ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಮಹಾರಾಷ್ಟ್ರ ಭಯೋತ್ಪಾದನಾ ವಿರೋಧಿ ಪಡೆ (ಎಟಿಎಸ್​) ಬಂಧಿಸಿದೆ.
ಇದನ್ನೂ ಓದಿ:ಭೂಗತ ಪಾತಕಿ ರವಿ ಪೂಜಾರಿಗೆ ಶಾಕ್​ ನೀಡಲು ಇಡಿ ಸಿದ್ಧತೆ
ಬಂಧಿತನನ್ನು ಕಮ್ರಾನ್​ ಅಮೀನ್​ ಖಾನ್​ (25) ಎಂದು ಗುರುತಿಸಲಾಗಿದೆ. ಆರೋಪಿ ಖಾನ್​, ವಾಟ್ಸ್​ಆ್ಯಪ್​ ಮೂಲಕ ಉತ್ತರ ಪ್ರದೇಶ ರಾಜಧಾನಿ ಲಖನೌದ ಪೊಲೀಸ್​ ಮುಖ್ಯ ಕಚೇರಿಯ ಸಾಮಾಜಿಕ ಜಾಲತಾಣ ಸಹಾಯವಾಣಿಗೆ ಬೆದರಿಕೆ ಸಂದೇಶ ರವಾನಿಸಿದ್ದ. ಸಮುದಾಯವೊಂದನ್ನು ಗುರಿಯಾಗಿಸುತ್ತಿರುವ ಸಿಎಂ ಯೋಗಿಯನ್ನು ಬಾಂಬ್ ಸ್ಪೋಟಿಸಿ ಕೊಲ್ಲುತ್ತೇನೆ ಎಂದು ಬರೆದಿದ್ದ.
ಈ ಸಂಬಂಧ ಉತ್ತರ ಪ್ರದೇಶದ ಪೊಲೀಸರು ಭಾರತೀಯ ದಂಡ ಸಂಹಿತೆ(ಐಪಿಸಿ) ಮತ್ತು ಐಟಿ ಕಾಯ್ದೆ ಅನ್ವಯ ಸಂಬಂಧಿತ ಸೆಕ್ಷನ್​ ಅಡಿಯಲ್ಲಿ ಎಫ್​ಐಆರ್​ ದಾಖಲಿಸಿದ್ದರು. ಉತ್ತರ ಪ್ರದೇಶದ ಸ್ಪೆಷಲ್​ ಟಾಸ್ಕ್​ ಫೋರ್ಸ್​ ಒಂದು ಆರೋಪಿಯ ಜಾಲವನ್ನು ಪತ್ತೆ ಹಚ್ಚಲು ಆರಂಭಿಸಿತು. ಸಂದೇಶ ಬಂದ ನಂಬರ್​ ಅನ್ನು ಮಹಾರಾಷ್ಟ್ರ ಎಟಿಎಸ್​​ ಸಹಕಾರದೊಂದಿಗೆ ಹುಡುಕಾಡಿದಾಗ ಆರೋಪಿ ಖಾನ್​ ಮುಂಬೈನ ಛುನಭಟ್ಟಿ ಏರಿಯಾದಲ್ಲಿ ಸಿಕ್ಕಿಬಿದ್ದಿದ್ದಾನೆ.
ಇದನ್ನೂ ಓದಿ:ಪ್ರೀತಿಸುವ ಸೋಗಿನಲ್ಲಿ ವಿವಾಹಿತನಿಂದ ಯುವತಿಗೆ 8.48 ಲಕ್ಷ ರೂ. ವಂಚನೆ
ಆರೋಪಿಯನ್ನು ಉತ್ತರ ಪ್ರದೇಶದ ಎಸ್​ಟಿಎಫ್​ ವಶಕ್ಕೆ ಒಪ್ಪಿಸಲಾಗಿದ್ದು, ಭಾನುವಾರ ಆರೋಪಿಯನ್ನು ಮುಂಬೈ ಕೋರ್ಟ್​ ಮುಂದೆ ಹಾಜರುಪಡಿಸಿ, ನಂತರ ಮುಂದಿನ ವಿಚಾರಣೆಗಾಗಿ ತಮ್ಮ ಕಸ್ಟಡಿಗೆ ಪಡೆದುಕೊಳ್ಳಲಿದ್ದಾರೆ.(ಏಜೆನ್ಸೀಸ್​)
ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಕೊಲೆ ಬೆದರಿಕೆ- ಪ್ರಕರಣ ದಾಖಲಿಸಿದ ಪೊಲೀಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
