ಮುಂಬೈ: ಕರೊನಾವೈರಸ್ ಸೋಂಕು ವ್ಯಾಪಕವಾಗಿ ಪಸರಿಸುತ್ತಿರುವುದರಿಂದ ಮಹಾರಾಷ್ಟ್ರದಲ್ಲಿ ಬಾಗಶಃ ಲಾಕ್​ಡೌನ್ ಮಾಡಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.
ಸೋಮವಾರದಿಂದ ಸಂಜೆ 8 ಗಂಟೆಯಿಂದ ಬೆಳಿಗ್ಗೆ 7 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. ವಾರದ ಕೊನೆಯಲ್ಲಿ ಅಂದರೆ ಭಾನುವಾರ ಪೂರ್ತಿ ಲಾಕ್​​ಡೌನ್​ ಇರಲಿದೆ ಎಂದು ಮುಖ್ಯಮಂತ್ರಿ ಉದ್ದವ್ ಠಾಕ್ರೆ ಹೇಳಿದ್ದಾರೆ. ಅಲ್ಲದೇ ಇನ್ನೊಂದು ವಾರ ನೋಡಿಕೊಂಡು ಸಂಪೂರ್ಣ ಲಾಕ್​ಡೌನ್​ ಮಾಡಬೇಕೋ ಬೇಡವೋ ಎಂದು ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.
ಲಾಕ್​ಡೌನ್ ನಿರ್ಧಾರವನ್ನು ಸ್ವಾಗತಿಸಿರುವ ಮಹಾರಾಷ್ಟ್ರದ ವಿರೋಧ ಪಕ್ಷ ಬಿಜೆಪಿ, ಲಾಕ್​ಡೌನ್​​ನಲ್ಲಿ ಬಡವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದೆ. ಈ ಕುರಿತು ಮಾತನಾಡಿರುವ ಮಹಾರಾಷ್ಟ್ರ ಬಿಜೆಪಿ ನಾಯಕ ದೇವೇಂದ್ರ ಪಡ್ನವೀಸ್ ಅವರು, ಹೆಚ್ಚುತ್ತಿರುವ ಕರೊನಾವೈರಸ್ ತಡೆಗೆ ಲಾಕ್​ಡೌನ್ ನಿರ್ಧಾರ ಉತ್ತಮ. ಆದರೆ, ಲಾಕ್​ಡೌನ್​ನಿಂದ ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ತೊಂದರೆ ಆಗಬಾರದು ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ:ಅನಾಥಾಶ್ರಮದ ಮಕ್ಕಳೊಂದಿಗೆ ಈಸ್ಟರ್​ ಆಚರಿಸಿದ ರಾಹುಲ್​ ಗಾಂಧಿ; ವಿಡಿಯೋ ಕಾಲ್​ನಲ್ಲಿ ಜತೆಯಾದ ಪ್ರಿಯಂಕಾ
ಅಲ್ಲದೇ ಮಹಾರಾಷ್ಟ್ರ ಸರ್ಕಾರ 5000 ಕೋಟಿ ರೂಪಾಯಿ ಬಾಕಿ ವಿದ್ಯುತ್ ಬಿಲ್ ವಸೂಲಿ ಮಾಡಲು ಮುಂದಾಗಿರುವುದನ್ನು ಕೈ ಬಿಡಬೇಕು. ಬಡವರಿಗೆ ಹಣಕಾಸಿನ ನೆರವು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಇಂದು ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈಗಾಗಲೇ ಎಲ್ಲ ಚಿತ್ರಮಂದಿರಗಳನ್ನು, ಬಾರ್​ ರೆಸ್ಟೋರಂಟ್​ಗಳನ್ನು, ಶಾಪಿಂಗ್ ಮಾಲ್​ಗಳನ್ನು ಹಾಗೂ ಧಾರ್ಮಿಕ ಕೇಂದ್ರಗಳನ್ನು ಒಂದು ವಾರ ಮುಚ್ಚಲು ಆದೇಶಿಸಲಾಗಿತ್ತು.
ಅವಶ್ಯಕ ಪ್ರಯಾಣಗಳಿಗೆ ಮಾತ್ರ ರಾತ್ರಿ ಅವಕಾಶ ಇರಲಿದೆ. ಹೋಟೆಲ್​ಗಳಲ್ಲಿ ಸೇವೆ ನಿಷಿದ್ದವಾಗಿದ್ದು, ಕೇವಲ ಪಾರ್ಸ್​ಲ್​ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಮುಖ್ಯಮಂತ್ರಿ ಠಾಕ್ರೆ ಸಚಿವ ಸಂಪುಟ ಸಭೆಯಲ್ಲಿ ಸಂಪೂರ್ಣ ಲಾಕ್​ಡೌನ್ ಮಾಡುವ ನಿರ್ಧಾರ ಪ್ರಕಟಿಸಿದರೂ ಕೂಡ ಇದಕ್ಕೆ ಕೆಲ ಸಚಿವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಹಿಂದೆ ಸರಿದರು ಎಂದು ವರದಿಗಳು ಹೇಳಿವೆ. (ಏಜೇನ್ಸಿಸ್).
ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಏ.6 ರಂದು ಪ್ರಧಾನಿ ಮೋದಿ ಮಾತು: ಕಾರಣ ಏನು?

ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್​ಡೌನ್: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
