ಮುಂಬೈ:ಮಹಾರಾಷ್ಟ್ರದಲ್ಲಿ ಪ್ರಯಾಣಿಸುವ ವೇಳೆ ಬಸ್​ನ ಆಕ್ಸಿಲೇಟರ್​ ವೈರ್​ ಕಟ್ಟಾಗಿದ್ದು ಈ ವೇಳೆ ಚಾಲಕ ಹಾಗು ನಿರ್ವಾಹಕಿ ಪರಿಸ್ಥಿತಿಯನ್ನು ನಿಭಾಯಿಸಿರುವ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.
ಘಟನೆಯೂ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದ್ದು ಕವಠೆ ಮಹಾಂಕಲ್‌ನಿಂದ ಸಾಗುವ ವೇಳೆ ದುರ್ಘಟನೆ ಸಂಭವಿಸಿದೆ.
ಕಳೆದ ಗುರುವಾರ ಸಂಜೆ ಬಸ್​ ಚಾಲಕ ಎಂಎ. ಪಾಟೀಲ್​ ಹಾಗು ನಿರ್ವಹಕಿ ವಿಪಿ. ದೇಸಾಯಿ ಕೂಚಿ-ಜಖಾಪುರ್​ ನಡುವೆ 40 ಮಂದಿ ಪ್ರಯಾಣಿಕರನ್ನು ಹೊತ್ತು ಸಾಗುವ ವೇಳೆ ಬಸ್​ನ ಆಕ್ಸಿಲೇಟರ್​ ವೈರ್ ಕಟ್​ ಆಗಿ ಪ್ಯಾಡ್​ನಿಂದ ಬೇರ್ಪಟ್ಟಿರುವುದನ್ನು ಚಾಲಕ ಗಮನಿಸಿದ್ದಾರೆ.
ಇದನ್ನೂ ಓದಿ:ಲೈಕ್ಸ್​, ವ್ಯೂವ್ಸ್​​ಗಾಗಿ ಟ್ರಾಫಿಕ್​ ಸಿಗ್ನಲ್​ನಲ್ಲಿ ಸ್ನಾನ ಮಾಡಿದ ಯುವಕ!
ಈ ವೇಳೆ ನಿರ್ವಾಹಕಿಯನ್ನು ಕರೆದ ಚಾಲಕ ಗಾಬರಿಯಾಗದಂತೆ ಸೂಚಿಸಿ ಆಕ್ಸಿಲೇಟರ್​ ಕಟ್​ ಆಗಿರುವ ವಿಚಾರವನ್ನು ಹೇಳಿ ಬದಲಿ ಉಪಾಯ ಒಂದನ್ನು ಹೇಳಿದ್ದಾನೆ. ಪೆಡಲ್​ಗೆ ಹಗ್ಗವನ್ನು ಕಟ್ಟಿ ನಿರ್ವಾಹಕಿಗೆ ವೇಗವನ್ನು ಕಾಯ್ದುಕೊಳ್ಳಲು ಸೂಚಿಸಿದ್ಧಾನೆ.
ಚಾಲಕನ ಸೂಚನೆಯಂತೆ ನಿರ್ವಾಹಕಿ ವೇಗವನ್ನು ನಿಯಂತ್ರಿಸಿದ್ದು ಸುಮಾರು 40 ಕಿಲೊಮೀಟರ್​ ದೂರ ಪ್ರಯಾಣಿಕರಿಗೆ ಯಾವುದೇ ರೀತಿ ಆಪತ್ತು ಬಾರದಂತೆ ತಲುಪಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಚಾಲಕ-ನಿರ್ವಾಹಕಿಯ ಶ್ರಮಕ್ಕೆ ನೆಟ್ಟಿಗರು ಬಹುಪರಾಕ್​ ಎಂದಿದ್ದಾರೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:18 − nine =
Remember me
