ಮುಂಬೈ:ಗಂಡ ಹೆಂಡತಿ ಮಧ್ಯೆ ಜಗಳವಾಗುವುದಕ್ಕೆ ದೊಡ್ಡ ವಿಚಾರಗಳೇ ಬೇಕೆಂದೇನಿಲ್ಲ. ಸಣ್ಣ ಪುಟ್ಟ ವಿಚಾರಕ್ಕೂ ಜಗಳ ಆಗುತ್ತಲೇ ಇರುತ್ತದೆ. ಆದರೆ ಈ ದಂಪತಿಯ ಜಗಳಕ್ಕೆ ಕಾರಣ ಕೇಳಿದರೆ ನಿಮಗೆ ನಗು ಬರುವುದರಲ್ಲಿ ಡೌಟ್​ ಇಲ್ಲ.
ಮಹಾರಾಷ್ಟ್ರದ ಬುಲ್ಖಾನಾ ಜಿಲ್ಲೆಯ ಸಖರ್ಖರ್ದಾ ಗ್ರಾಮದಲ್ಲಿ ಇಂತದ್ದೊಂದು ವಿಚಿತ್ರ ಘಟನೆ ನಡೆದಿದೆ. ಆ ಮನೆಯಲ್ಲಿ ಗಂಡ ಹೆಂಡತಿ ಹಾಗೂ ಅವರ ಮುದ್ದಿನ ಮಗಳು ವಾಸಿಸುತ್ತಿದ್ದಾರೆ. ಇತ್ತೀಚೆಗೆ ಗಂಡ ಮಾರ್ಕೆಟ್​ನಿಂದ ಮೂರು ಮೊಟ್ಟೆ ತಂದು, ಎಗ್​ ಬುರ್ಜಿ ಮಾಡು ಎಂದು ಹೆಂಡತಿಗೆ ಹೇಳಿದ್ದಾನೆ. ಇಲ್ಲೇ ಹೊರಗಡೆ ಹೋಗಿ ಬರ್ತೀನಿ ಅಷ್ಟರಲ್ಲಿ ಮಾಡಿಡು ಎಂದು ಹೇಳಿ ಹೊರಟುಹೋಗಿದ್ದಾನೆ.
ಗಂಡನ ಆಸೆಯಂತೆ ಮೂರು ಮೊಟ್ಟೆ ಹಾಕಿ ಹೆಂಡತಿ ಎಗ್​ ಬುರ್ಜಿ ಮಾಡಿದ್ದಾಳೆ. ಅಷ್ಟರಲ್ಲಿ ಮಗಳು ಹಸಿವಾಗುತ್ತಿದೆ ಎಂದಿದ್ದು ಎಗ್​ ಬುರ್ಜಿಯನ್ನು ಪೂರ್ತಿಯಾಗಿ ತಿಂದು ಮುಗಿಸಿದ್ದಾಳೆ. ಗಂಡನ ಬದಲು ಮಗಳು ತಿಂದಿದ್ದಾಳೆ ಬಿಡು ಎಂದು ಹೆಂಡತಿ ಸುಮ್ಮನಾಗಿದ್ದಾಳೆ. ಆದರೆ ಹಸಿದ ಹೊಟ್ಟೆಯಲ್ಲಿ ಮನೆಗೆ ಬಂದ ಗಂಡ ಎಗ್​ ಬುರ್ಜಿ ಎಲ್ಲೆಂದು ಹುಡುಕಲಾರಂಭಿಸಿದ್ದಾನೆ. ಮಗಳು ತಿಂದು ಖಾಲಿ ಮಾಡಿದಳು ಎಂದು ಹೇಳಿದಾಗ ಸಿಟ್ಟಿನಿಂದ ಹೆಂಡತಿಯ ಮೇಲೆ ರೇಗಾಡಲಾರಂಭಿಸಿದ್ದಾನೆ. ಅವರಿಬ್ಬರ ಜಗಳ ಎಷ್ಟರ ಮಟ್ಟಿಗೆ ಹೋಗಿದೆಯೆಂದರೆ, ಇಬ್ಬರು ಜಗಳವಾಡಿಕೊಳ್ಳುತ್ತಲೇ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ದಂಪತಿ ತಮ್ಮ ಜಗಳವನ್ನು ಸಖರ್ಖರ್ದಾ ಪೊಲೀಸ್​ ಅಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾರೆ. ಜಗಳದ ಕಾರಣ ಕೇಳುತ್ತಲೇ ಅಧಿಕಾರಿಗಳು ಬಿದ್ದು ಬಿದ್ದು ನಗಲಾರಂಭಿಸಿದ್ದಾರೆ. ನಕ್ಕು ಸುಧಾರಿಸಿಕೊಂಡ ನಂತರ, ಒಬ್ಬ ಸಿಬ್ಬಂದಿ ಅಂಗಡಿಗೆ ಹೋಗಿ ಮೂರು ಮೊಟ್ಟೆಗಳನ್ನು ತಂದು ದಂಪತಿಯ ಕೈಗೆ ಕೊಟ್ಟಿದ್ದಾನೆ. ಮೊಟ್ಟೆ ಸಿಕ್ಕ ಖುಷಿಯಲ್ಲಿ ದಂಪತಿ ಮನೆಗೆ ತೆರಳಿದ್ದಾರೆ. (ಏಜೆನ್ಸೀಸ್​)
106ನೇ ವಯಸ್ಸಿಗೆ 6ನೇ ಆಲ್ಬಂ ರಿಲೀಸ್​ ಮಾಡ್ತಿದ್ದಾರೆ ಈ ವೃದ್ಧೆ! ಈಕೆಯ ಬದುಕೇ ಸ್ಫೂರ್ತಿ

ಡೆತ್‌ನೋಟ್‌ನಲ್ಲಿ ಹೀಗೇಕೆ ಬರೆದರು ಧರ್ಮೇಗೌಡ? ಪೊಲೀಸರೂ ಭೇದಿಸಲಾಗದ ರಹಸ್ಯವಿದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
