ಮುಂಬೈ:ಕರೊನಾ ವೈರಸ್​ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮೇ 31ರವರೆಗೂ ಲಾಕ್​ಡೌನ್​ ವಿಸ್ತರಣೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ನೇತೃತ್ವದ ಸರ್ಕಾರ ನಿರ್ಧರಿಸಿದೆ.
ಇಂದಿಗೆ 3ನೇ ಹಂತದ ಲಾಕ್​ಡೌನ್​ ಮುಕ್ತಾಯಗೊಳ್ಳಲಿದೆ. ಆದರೆ, ರಾಜ್ಯದಲ್ಲಿ ಕರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಮಹಾ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಇನ್ನೊಂದೆಡೆ ಇಂದು ಸಂಜೆ ವೇಳೆಗೆ ಸರ್ಕಾರ 4ನೇ ಹಂತದ ಲಾಕ್​ಡೌನ್​ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಿದೆ.
ಇದನ್ನೂ ಓದಿ:ಪತ್ನಿ, ಮಗ ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ಮನೆಯಲ್ಲಿ ಶವವಾಗಿ ಬಿದ್ದಿದ್ದ ಡಿಎಸ್​ಪಿ: ಅಷ್ಟಕ್ಕೂ ನಡೆದಿದ್ದಾರೂ ಏನು?
ಮಹಾರಾಷ್ಟ್ರದಲ್ಲಿ ಇಡೀ ರಾಜ್ಯಕ್ಕೆ ಲಾಕ್​ಡೌನ್​ ವಿಸ್ತರಣೆ ಮಾಡಿದ್ದು, ಹಂತ ಹಂತವಾಗಿ ಲಾಕ್​ಡೌನ್​ನಲ್ಲಿ ರಿಯಾಯಿತಿ ನೀಡುವ ಬಗ್ಗೆ ಆದಷ್ಟು ಬೇಗ ತಿಳಿಸಲಾಗುವುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಅಜಯ್ ಮೆಹ್ತಾ ಹೇಳಿದ್ದಾರೆ.
ದೇಶದ ಒಟ್ಟಾರೆ ಕೋವಿಡ್​ – 19 ಪ್ರಕರಣಗಳ ಮೂರನೇ ಒಂದು ಭಾಗ ಮಹಾರಾಷ್ಟ್ರದಲ್ಲಿ ದಾಖಲಾಗಿವೆ. 30 ಸಾವಿರ ಗಡಿ ದಾಟಿದ್ದು, ಶನಿವಾರ ಒಂದೇ ದಿನ 1606 ಪ್ರಕರಣಗಳು ವರದಿಯಾಗಿವೆ. ಅದರಲ್ಲೂ ಮುಂಬೈ ತೀವ್ರತರವಾದ ಪರಿಣಾಮ ಎದುರಿಸುತ್ತಿದ್ದು, 884 ಕೇಸ್​ಗಳೊಂದಿಗೆ ಶನಿವಾರ 18,555 ಪ್ರಕರಣಗಳಿಗೆ ಜಿಗಿದಿದೆ.
ಇದನ್ನೂ ಓದಿ:ಗಂಡಿನ ವೀರ್ಯದಲ್ಲಿ ಕರೊನಾ: ಒಂದು ತಿಂಗಳು ಸೆಕ್ಸ್​ ಮಾಡ್ದಿದ್ರೆ ಒಳಿತು, ಇಲ್ಲದಿದ್ರೆ…!
ಮೇ ಅಂತ್ಯದ ವೇಳೆಗೆ ಮುಂಬೈನಲ್ಲಿ ಹೆಚ್ಚಿನ ಪ್ರಕರಣಗಳು ಸೇರಿದಂತೆ ಮಹಾರಾಷ್ಟ್ರ ಒಂದರಲ್ಲೇ 50 ಸಾವಿರ ಪ್ರಕರಣಗಳು ದಾಖಲಾಗುವ ಅಂದಾಜಿದೆ. ಇದರ ನಡುವೆ ಸರ್ಕಾರ ಕೇಂದ್ರ ಸರ್ಕಾರದ ಬಳಿ ವಿಶೇಷ ಆರ್ಥಿಕ ಪ್ಯಾಕೇಜ್​ಗೆ ಒತ್ತಾಯಿಸಿದೆ.(ಏಜೆನ್ಸೀಸ್​)
VIDEO| ವೈಜಾಗ್​ ವಿಷಾನಿಲ ದುರಂತದ ಭೀಕರತೆಗೆ ಸಾಕ್ಷಿಯಾದ ಭಯಾನಕ ವಿಡಿಯೋಗಳಿವು….

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 + sixteen =
Remember me
