ನವದೆಹಲಿ:ಎಷ್ಟೇ ಪ್ರಯತ್ನಿಸಿದರೂ ಕರೊನಾ ಸೋಂಕು ಪ್ರಸರಣ ಕಡಿಮೆಯಾಗದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಜುಲೈ 31ರವರೆಗೆ ಲಾಕ್​ಡೌನ್​ ಮುಂದುವರಿಸಲು ನಿರ್ಧರಿಸಿದೆ.
ಮಾಲ್​ಗಳು, ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್​ಗಳು, ಶಾಲೆ, ಕಾಲೇಜು, ಜಿಮ್​, ಈಜುಕೊಳಗಳು ಈ ಅವಧಿಯಲ್ಲಿ ಸಂಪೂರ್ಣ ಮುಚ್ಚಲ್ಪಟ್ಟಿರುತ್ತವೆ. ಅಗತ್ಯ ಸೇವೆಗಳನ್ನು ಒದಗಿಸುವ ಸಂಸ್ಥೆಗಳು ಮಾತ್ರ ರಾಜ್ಯಾದ್ಯಂತ ಕಾರ್ಯನಿರ್ವಹಿಸಲಿವೆ. ತುಂಬಾ ಅಗತ್ಯವಲ್ಲದ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿ-ಮುಂಗಟ್ಟುಗಳಿಗೆ ಕೆಲವೊಂದು ನಿರ್ಬಂಧ ವಿಧಿಸಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ.
ಇದನ್ನೂ ಓದಿ:ಶೀಘ್ರದಲ್ಲೇ ಬರಲಿವೆ ರಫೇಲ್​ ಯುದ್ಧವಿಮಾನಗಳು; ಚೀನಾದ ಬೆದರಿಕೆ ಹಿಮ್ಮೆಟಿಸಲು ವಾಯುಪಡೆಗೆ ಬಂತು ರಕ್ಕೆಪುಕ್ಕ
ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಕ್ರಮವಾಗಿ ಶೇ.15 ಮತ್ತು ಶೇ.10 ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ. ಅಂತರ್​ಜಿಲ್ಲಾ ವಾಹನ ಸಂಚಾರಕ್ಕೂ ಅವಕಾಶ ಇರಲಿದೆ.
ಮಹಾರಾಷ್ಟ್ರದಲ್ಲಿ ಇದುವರೆಗೂ 1.6 ಲಕ್ಷ ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಮುಂಬೈ ಒಂದರಲ್ಲೇ ಗರಿಷ್ಠ 74 ಸಾವಿರ ಸೋಂಕಿತರು ಇದ್ದಾರೆ. ಇದು ಸೇರಿ ರಾಜ್ಯದ 10 ಪ್ರಮುಖ ನಗರಗಳು ಈಗಲೂ ರೆಡ್​ ಜೋನ್​ನಲ್ಲಿವೆ. 7 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಚೀನಾಕ್ಕೆ ಶಾಕ್‌ ಮೇಲೆ ಶಾಕ್‌! ಬಿಹಾರದ ಸೇತುವೆ ಟೆಂಡರ್‌ ರದ್ದು ಮಾಡಿದ ಕೇಂದ್ರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 2 =
Remember me
