ಮುಂಬೈ:ಕೋವಿಡ್ 19 ನಿಯಂತ್ರಿಸುವ ನಿಟ್ಟಿನಲ್ಲಿ ಮಾಸ್ಕ್ ಅಗತ್ಯವಸ್ತುವಾಗಿರುವ ಕಾರಣ, ಅದರ ದರ ನಿಯಂತ್ರಣಕ್ಕೆ ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಹೀಗಾಗಿ ಮಾಸ್ಕ್​ನ ಗುಣಮಟ್ಟ ಮತ್ತು ಮಾದರಿಗೆ ಅನುಗುಣವಾಗಿ ಗರಿಷ್ಠ ಮಾರಾಟ ದರವನ್ನು ಅದು ನಿಗದಿಪಡಿಸಿದೆ.
ಇದರಂತೆ, ಎರಡು ಪದರಗಳಿರುವ ಮಾಸ್ಕ್ ದರವನ್ನು 3 ರೂಪಾಯಿ, ಮೂರು ಪದರದ ಮಾಸ್ಕ್​ಗಳ ದರವನ್ನು 4 ರೂಪಾಯಿ ಮತ್ತು ಎನ್-95 ಮಾಸ್ಕ್ ದರವನ್ನು 19 ರೂಪಾಯಿಗೆ ಇಳಿಕೆಯಾಗಿದೆ. ಮಾಸ್ಕ್​ಗಳ ದರದ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ರಾಜ್ಯ ಸರ್ಕಾರ ಸಮಿತಿಯೊಂದನ್ನು ರಚಿಸಿತ್ತು. ಸಮಿತಿ ನೀಡಿರುವ ವರದಿ ಪ್ರಕಾರ ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾಸ್ಕ್ ದರ ಶೇ. 437- ಶೇ. 575 ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮಾಸ್ಕ್ ದರವನ್ನು ಪರಿಷ್ಕರಿಸಿದೆ.
ಇದನ್ನೂ ಓದಿ:ಸಿಎಂ ಪಟ್ಟ ಹೋದ್ಮೇಲೆ ಹುಚ್ಚನಂತೆ ಅಲೀತಿದ್ದಾರೆ… ಅವ್ರ ತಾಯಿ, ಸಹೋದರಿ ಐಟಂಗಳಿರಬೇಕು..
ಅಲ್ಲದೆ, ಎಲ್ಲ ಮಾಸ್ಕ್ ಮೇಲೆ ಅದರ ಗುಣಮಟ್ಟ ಮತ್ತು ಎಂಆರ್​ಪಿ ಮುದ್ರಣ ಕಡ್ಡಾಯವೆಂದು ತಿಳಿಸಲಾಗಿದೆ. ಕರೊನಾ ಸೋಂಕನ್ನು ತಡೆಗಟ್ಟಲು ಮಾಸ್ಕ್ ಅತ್ಯವಶ್ಯಕ. ಕಡಿಮೆ ದರದಲ್ಲಿ ಮಾಸ್ಕ್ ಜನರಿಗೆ ಸಿಗಬೇಕೆಂದು ಸಮಿತಿ ರಚಿಸಲಾಗಿತ್ತು ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್ ತೋಪೆ ತಿಳಿಸಿದ್ದಾರೆ. (ಏಜೆನ್ಸೀಸ್)
ಮೇಡ್​ ಇನ್ ಇಂಡಿಯಾ ಐಎನ್​ಎಸ್ ಕವರತ್ತಿ ನೌಕಾಪಡೆಗೆ ಸೇರ್ಪಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 6 =
Remember me
